ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣಕನ್ನಡ ಜನತೆಯ ಕ್ಷಮೆಯಾಚಿಸಿದ ವಾಟಾಳ್ ನಾಗರಾಜ್

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು,ಜನವರಿ.14: ದಕ್ಷಿಣ ಕನ್ನಡ ಜಿಲ್ಲಾ ಜನತೆಗೆ ಮಾನವೀಯತೆ ಇಲ್ಲ ಎಂದು ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ನೀಡಿದ್ದ ಹೇಳಿಕೆ ವಿರೋಧಿಸಿ ಸಹ್ಯಾದ್ರಿ ಸಂಚಯನ ಕಾರ್ಯಕರ್ತರು ಮಂಗಳೂರಿನಲ್ಲಿ ಕಪ್ಪು ಬಾವುಟ ತೋರಿಸಿ ಪ್ರತಿಭಟನೆ ನಡೆಸಿದರು.

ಇಂದು ಮಂಗಳೂರಿನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳಸಾ ಬಂಡೂರಿ ಯೋಜನೆ ಅನುಷ್ಟಾನಕ್ಕೆ ವಿರೋಧಿಸಿ ರಾಜ್ಯ ಬಂದ್ ಗೆ ಕರೆ ನೀಡಿದ ಸಂದರ್ಭ ದ.ಕ. ಜಿಲ್ಲೆಯಲ್ಲಿ ಯಾವುದೇ ಬಂದ್ ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನರಿಗೆ ಮಾನವೀಯತೆ ಇಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಇದಕ್ಕೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಯಾಚಿಸಿದರೂ ಕಾರ್ಯಕರ್ತರು ವಾಟಾಳ್ ವಿರುದ್ಧ ಹರಿಹಾಯ್ದರು.[ಎಲ್ಲೆಂದ್ರಲ್ಲಿ ವಾಹನ ಪಾರ್ಕ್ ಮಾಡಿದ್ರೆ ಮನೆಗೆ ಬರುತ್ತೆ ನೋಟಿಸ್]

Mangaluru

ರಾಜ್ಯದ ಎರಡು ಜಿಲ್ಲೆಗಳು ನೀರಿಗಾಗಿ ಕಿತ್ತಾಡುವುದು ಸರಿಯಲ್ಲ. ಎತ್ತಿನಹೊಳೆ ಬೇಕು ಬೇಡ ಎನ್ನುವ ಬಗ್ಗೆ ನಮ್ಮಲ್ಲೇ ಗೊಂದಲವಿದೆ. ಇದರ ಬಗ್ಗೆ ಪರಿಸರ ತಜ್ಞರು ಹಾಗೂ ತಜ್ಞರಿಂದ ಸರಿಯಾದ ಮಾಹಿತಿ ಪಡೆದು ಸಿಎಂ ಸಿದ್ದರಾಮಯ್ಯರೊಡನೆ ಚರ್ಚಿಸಿ ಒಂದು ವಾರದೊಳಗೆ ಸೂಕ್ತ ಪರಿಹಾರ ನೀಡುತ್ತೇನೆ ಎಂದರು.[441 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಮೆಸ್ಕಾಂ]

ದ್ವಿಚಕ್ರ ವಾಹನದ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಸರಿಯಾದ ಆದೇಶವಲ್ಲ. 90% ಜನ ಬಡವರಿದ್ದಾರೆ. ಅಲ್ಲದೆ ಹಿಂಬದಿ ಸವಾರರು ಹೆಚ್ಚಿನವರು ಮಹಿಳೆಯರು, ಮಕ್ಕಳಾಗಿದ್ದು, ಅವರಿಗೂ ತೊಂದರೆಯಾಗುತ್ತದೆ. ಸುಪ್ರೀಂ ಕೋರ್ಟ್ ಗೆ ರಾಜ್ಯ ಸರಕಾರ ಮೇಲ್ಮನವಿ ಸಲ್ಲಿಸುವಂತೆ ನಾನು ಮನವಿ ಸಲ್ಲಿಸುತ್ತೇನೆ ಎಂದರು.

English summary
Sahyadri sanchala group take protest against of Vatal party President Vatal nagaraj in Mangaluru on Thursday, January 14th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X