ವೆಂಕಟರಮಣ ದೇವರ ಕುಂಭಾಭಿಷೇಕ ಪ್ರಯುಕ್ತ ದೇವಿಗೆ ಕನಕಾಭಿಷೇಕ

Posted By:
Subscribe to Oneindia Kannada

ಮಂಗಳೂರು, ನ 8 : ಕೊಂಚಾಡಿ ಶ್ರೀ ವೆಂಕಟರಮಣ ದೇವರ ಸಹಸ್ರ ಕುಂಭಾಭಿಷೇಕ ಪ್ರಯುಕ್ತ ಬುಧವಾರ (ನ 8) ಶ್ರೀ ಮಹಾಲಸಾ ನಾರಾಯಣಿ ದೇವಿಗೆ ಕಾಶೀ ಮಠಾಧೀಶರಾದ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಶತಕಲಶಾಭಿಷೇಕ, ಗಂಗಾಭಿಷೇಕ, ಕನಕಾಭಿಷೇಕ ನೆರವೇರಿಸಿದರು.

ಕುಂಭಾಭಿಷೇಕದ ಸವಿ ನೆನಪಿಗಾಗಿ ದೇವರಿಗೆ ನೂತನವಾಗಿ ನಿರ್ಮಿಸಲಾದ ದಶಾವತಾರ ಸ್ವರ್ಣ ಮಾಲೆ ಸಮರ್ಪಿಸಲಾಯಿತು. ಕುಂಭಾಭಿಷೇಕ ಪೂರ್ವಭಾವಿಯಾಗಿ ದೇವಳದಲ್ಲಿ ಶತಕಲಶಾಭಿಷೇಕ ಸ್ನಪನ. ಗಣಪತಿ ಪೂಜನ, ಸ್ವಸ್ತಿವಾಚನ ಆವಾಹಿತ ದೇವತಾ ಪೂಜನ ಯಜ್ಞಾರಂಭ ಶತಕಲಶಾಭಿಷೇಕ ಸ್ನಪನ ನಡೆಯಿತು.

 Sahasra Kumbhabhisheka of Konchadi Lord Venkatarama at Mangaluru

ವೆಂಕಟರಮಣ ದೇವರಿಗೆ ಸಹಸ್ರ ಕುಂಭಾಭಿಷೇಕ

ಜೊತೆಗೆ, ಲಘುಪೂರ್ಣಾಹುತಿ, ಮಹಾಮಂಗಳಾರತಿ, ಗೋಪೂಜೆ, ಮಧ್ವಗುರುಪೂಜೆ, ಗುರುಭಿಕ್ಷೆ ಸುವಾಸಿನ ಬ್ರಾಹ್ಮಣ ಆರಾಧನೆ ಸಮಾರಾಧನೆ ನಡೆಯಿತು .

ಗುರುವಾರ (ನ 9) ಬೆಳಗ್ಗೆ 5ಕ್ಕೆ ದೇವತಾ ಪ್ರಾರ್ಥನೆ ಯಮುನಾ ಪೂಜೆ, ಕಲಶ ಪೂರಣ, ಗಣಪತಿ ಪೂಜನ ಪೂರ್ವಕ ಧಾರ್ಮಿಕ ವಿಧಿಗಳ ಆರಂಭ, ಏಕೋತ್ತರ ಸಹಸ್ರ ಕಲಶ ಸ್ನಪನ ಕಲಶಾಭಿ ಮಂತ್ರಣ, ಪಂಚಾಮೃತ ಕಲಶಾಭಿಷೇಕ,
ಯಜ್ಞದಲ್ಲಿ ಆವಾಹಿತ ದೇವತಾ ಪೂಜನ ಪೂರ್ವಕ ಯಜ್ಞಾರಂಭ ನಿತ್ಯಹವನ, ಸಾನಿಧ್ಯ ಹವನ, ಕಾಶೀಮಠಾಧೀಶ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ನೆರವೇರಲಿದೆ.

ಇದಾದ ನಂತರ ಬೆಳಿಗ್ಗೆ 9.30ಕ್ಕೆ ಪದ್ಮಸಂಹಿತ ಆಗಮರೀತ್ಯಾ ಸಹಸ್ರಕುಂಭಾಭಿಷೇಕ, ಬ್ರಹ್ಮಕಲಶಾಭಿಷೇಕ, ವರ್ಧಿನೀಕಲಶಾಭಿಷೇಕ, ಗಂಗಾಜಲಾಭಿಷೇಕ, ಪ್ರಸನ್ನ ಪೂಜೆ, ಅಷ್ಠಮಂಗಲದರ್ಶನ, ಪಟ್ಟಕಾಣಿಕೆ, ಮಹಾ ಪ್ರಸಾದ, ಯಜ್ಞದಲ್ಲಿ ದೇವರ ಆಗಮನ ಪೂರ್ಣಾಹುತಿ, ಯಜ್ಞಾರತಿ ಶ್ರೇಯೋಗ್ರಹಣ ಪ್ರಸಾದ, ಉತ್ತರ ಪೂಜೆ, ಮಹಾ ಪೂಜೆ, ಗೋಪೂಜೆ, ಗುರುಭಿಕ್ಷೆ, ಬ್ರಾಹ್ಮಣ ಸಂತರ್ಪಣೆ, ಭೂರಿ ಸಮಾರಾಧನೆ ನಡೆಯಲಿದೆ.

ಬಳಿಕ ಸಾಯಂಕಾಲ ಸಭಾಕಾರ್ಯಕ್ರಮ ಶ್ರೀಗುರುಗಳಿಗೆ ಪಾದಪೂಜೆ, ವೈದಿಕ ಸಂಭಾವನೆ, ಶ್ರೀಗುರುಗಳ ಅಮೃತ ಹಸ್ತಗಳಿಂದ ಸೇವಾದಾರರಿಗೆ ಸನ್ಮಾನ, ಆಶೀರ್ವಚನ ಮಂತ್ರಾಕ್ಷತೆ ,ರಾತ್ರಿ ಪೂಜೆ, ಉತ್ಸವ, ವಸಂತ ಪೂಜೆ ಅಷ್ಠಾವಧಾನ ಸೇವೆ ನಡೆಯಲಿರುವುದು. (ಚಿತ್ರ : ಮಂಜು ನೀರೇಶ್ವಾಲ್ಯ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sahasra Kumbhabhisheka of Konchadi Lord Venkatarama at Mangaluru on Nov 9.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ