ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೋಡುಪಾಳಕ್ಕೆ ಭೇಟಿ ನೀಡಿದ ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್

|
Google Oneindia Kannada News

ಮಂಗಳೂರು, ಆಗಸ್ಟ್ 19: ಅತಿವೃಷ್ಟಿ ಹಾಗೂ ಗುಡ್ಡ ಕುಸಿತದಿಂದ ನಲುಗಿದ ಜೋಡುಪಾಳ ಪ್ರದೇಶಕ್ಕೆ ಇಂದು ಭಾನುವಾರ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಹಾಗು ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿದ್ದಾರೆ.

ಮಂಗಳೂರಿನಿಂದ ನೇರವಾಗಿ ಸುಳ್ಯಕ್ಕೆ ತೆರಳಿದ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ, ಸುಳ್ಯ ಪ್ರವಾಸಿ ಮಂದಿರದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಸ್ಥಳೀಯ ಶಾಸಕ ಅಂಗಾರ ಅವರನ್ನು ಭೇಟಿಮಾಡಿದರು. ಭೇಟಿ ಸಂದರ್ಭದಲ್ಲಿ ನೆರೆ ಪೀಡಿತ ಪ್ರದೇಶಗಳ ಮಾಹಿತಿ ಪಡೆದರಲ್ಲದೇ ಜೋಡುಪಾಳ ಪ್ರದೇಶದಲ್ಲಿ ಉಂಟಾದ ಅನಾಹುತಗಳ ಬಗ್ಗೆ ಮಾಹಿತಿ ಕಲೆ ಹಾಕಿದರು.

Sadananda Gowda, Nalin Kumar Kateel visited Jodupala on Sunday

ಕೊಡಗು, ಕೇರಳ ಜನರ ನೆರವಿಗೆ ನಿಂತ ದ.ಕ.ಧಾರ್ಮಿಕ, ಸಾಮಾಜಿಕ ಸಂಸ್ಥೆಗಳುಕೊಡಗು, ಕೇರಳ ಜನರ ನೆರವಿಗೆ ನಿಂತ ದ.ಕ.ಧಾರ್ಮಿಕ, ಸಾಮಾಜಿಕ ಸಂಸ್ಥೆಗಳು

ನಂತರ ಜೋಡುಪಾಳ ಪ್ರದೇಶಕ್ಕೆ ತೆರಳಿ ಹಾನಿಗೊಂಡ ಪ್ರದೇಶದ ಪರಿಶೀಲನೆ ನಡೆಸಿದರು. ನಂತರ ಸಂಪಾಜೆ ನೆರೆಪೀಡಿತ ಪ್ರದೇಶದಲ್ಲಿ ರಚಿಸಲಾಗಿರುವ ನಿರಾಶ್ರಿತರ ಶಿಬಿರಕ್ಕೆ ತೆರಳಿದರು.
ಮನೆ, ಮಠ ಕಳೆದುಕೊಂಡು ಸಂತ್ರಸ್ತರಾಗಿರುವ 240 ಜನರಿಗೆ ಸಾಂತ್ವನ ಹೇಳಿ ಅವರ ಆರೋಗ್ಯ ವಿಚಾರಿಸಿದರು.

Sadananda Gowda, Nalin Kumar Kateel visited Jodupala on Sunday

ಈ ನಡುವೆ ಕೊಡಗಿನಲ್ಲಿ ಜಲಪ್ರಳಯ, ಪಶ್ಚಿಮ ಘಟ್ಟ ಬಾಯ್ದೆರೆಯುತ್ತಿವೆ. ಪಶ್ಚಿಮ ಘಟ್ಟಗಳ ತಪ್ಪಲು ಪ್ರದೇಶದಲ್ಲಿ ಜನರು ಭಯಗ್ರಸ್ಥರಾಗಿದ್ದಾರೆ. ಭಾರೀ ಮಳೆಯಿಂದಾಗಿ ಘಟ್ಟ ಪ್ರದೇಶದ ಉದ್ದಕ್ಕೂ ಭೂಮಿ ಬಿರುಕು ಬಿಡುತ್ತಿದೆ. ಕುದುರೆ ಮುಖ ಪ್ರದೇಶದಲ್ಲೂ ಭೂಕುಸಿತ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಮನೆಮಾಡಿದೆ.

English summary
Union Minister DV Sadananda Gowda and MP Nalin Kumar Kateel visited the Hill collapse area Jodupala on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X