'ಕರಾವಳಿಯ ಬೀಚ್‌ಗಳ ಅಭಿವೃದ್ಧಿಗೆ 92 ಕೋಟಿ ಯೋಜನೆ'

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮೇ 28 : 'ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ರಾಜ್ಯದ 9 ಭಾಗಗಳಲ್ಲಿರುವ ಬೀಚ್‌ಗಳನ್ನು 92 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗಿದೆ' ಎಂದು ಪ್ರವಾಸೋದ್ಯಮ ಮತ್ತು ಬೃಹತ್ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.

ರಾಜ್ಯ ಪ್ರವಾಸೋದ್ಯಮ ಇಲಾಖೆ ವತಿಯಿಂದ ಕೆನರಾ ಸರ್ಫಿಂಗ್ ಆ್ಯಂಡ್‌ ವಾಟರ್ ಸ್ಪೋರ್ಟ್ಸ್ ಪ್ರಮೋಶನ್ ಕೌನ್ಸಿಲ್ ಸಹಭಾಗಿತ್ವದಲ್ಲಿ ಮಂತ್ರ ಸರ್ ಕ್ಲಬ್ ಏರ್ಪಡಿಸಿದ್ದ ರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು. [ಮಂಗಳೂರಲ್ಲಿ ಸರ್ಫಿಂಗ್ ಸ್ಪರ್ಧೆ]

rv deshapande

'ಕರಾವಳಿಯ 9 ಬೀಚ್‌ಗಳ ಅಭಿವೃದ್ಧಿ, ಮೂಲಭೂತ ಸೌಕರ್ಯ, ಭದ್ರತೆ ವ್ಯವಸ್ಥೆ ಕಲ್ಪಿಸಲು 92 ಕೋಟಿ ರೂ. ಯೋಜನೆ ಸಿದ್ಧಗೊಳಿಸಲಾಗುತ್ತಿದೆ.ತ್ರಾಸಿ, ಸುರತ್ಕಲ್, ಮಲ್ಪೆ, ಮರವಂತೆ, ಮಾವಿನಕುರ್ವೆ, ಮುರ್ಡೇಶ್ವರ ಮೊದಲಾದ ಬೀಚ್‌ಗಳು ಪ್ರಸ್ತಾವನೆಯಲ್ಲಿ' ಸೇರಿವೆ ಎಂದರು. [ವಾರಾಂತ್ಯಕ್ಕೆ ಕರ್ನಾಟಕ ಹಬ್ಬವೇ ಅತ್ಯುತ್ತಮ ಆಯ್ಕೆ..ಯಾಕಂದ್ರೆ?]

'ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಸರ್ಫಿಂಗ್ ಸ್ಪರ್ಧೆ ಏರ್ಪಡಿಸಲಾಗಿದೆ. ಮಂಗಳೂರಿನಲ್ಲಿ ಸ್ಪರ್ಧೆಗೆ ಉತ್ತಮ ಅವಕಾಶವಿದ್ದು, ದೇಶ, ವಿದೇಶಗಳಿಂದ ಸ್ಪರ್ಧೆಗೆ ಆಗಮಿಸುವ ಮುಖಾಂತರ ಬೃಹತ್ ಉತ್ಸವವನ್ನಾಗಿ ರೂಪಿಸಲು ಕ್ರಮ ಕೈಗೊಳ್ಳಬೇಕು' ಎಂದು ಸಚಿವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.

'ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಆದರೆ, ಕರಾವಳಿ ಪ್ರದೇಶಗಳಲ್ಲಿ ಸಿಆರ್‌ಝೆಡ್ ನಿಯಮಗಳು ತಡೆಯಾಗಿದ್ದು ನಿಯಮಗಳ ಸರಳೀಕರಣವಾದರೆ ಪ್ರವಾಸೋದ್ಯಮವನ್ನು ಇಲ್ಲಿ ಪರಿಣಾಮಕಾರಿಯಾಗಿ ಅಭಿವೃದ್ಧಿಗೊಳಿಸಬಹುದು' ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್, ಶಾಸಕರಾದ ಬಿ.ಎ.ಮೊಯ್ದಿನ್ ಬಾವ, ಐವಾನ್ ಡಿಸೋಜ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Tourism Minister R.V.Deshpande inaugurated the India Open of Surfing competition at Sasihithlu beach in Dakshina Kannada district on Friday, May 27, 2016. Participants from India and abroad are taking part in the three-day event.
Please Wait while comments are loading...