ಮಂಗಳೂರು: ಕೊಲೆಯಾದ ಕಾರ್ತಿಕ್ ರಾಜ್ ಮನೆಗೆ ಡಾ. ಪ್ರಭಾಕರ್

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ನವೆಂಬರ್. 19 : ಮಂಗಳೂರಿನ ಕೋಣಾಜೆ ಬಳಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಆರೆಸ್ಸೆಸ್ ಕಾರ್ಯಕರ್ತ ಕಾರ್ತಿಕ್ ರಾಜ್ ಅವರ ಪಜೀರು ನವಗ್ರಾಮದ ನಿವಾಸಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ ಶುಕ್ರವಾರ ಸಂಜೆ ಭೇಟಿ ನೀಡಿ ಸಾಂತ್ವನ ಹೇಳಿದರು.

ಕೆಲವೊಬ್ಬರು ತಮ್ಮ ಕುಟುಂಬದ ಮೇಲೆಯೇ ಆರೋಪ ಹೊರಿಸುತ್ತಿದ್ದು ಬೇಸರವಾಗುತ್ತಿದೆ. ಆದಷ್ಟು ಬೇಗ ಆರೋಪಿಗಳು ಪತ್ತೆ ಮಾಡಿ ಎಂದು ಕಾರ್ತಿಕ್ ಅವರ ತಂದೆ ಮನವಿ ಮಾಡಿಕೊಂಡರು.

Rss leader Dr. Prabhakar bhat Visted Karthik Raja house

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಭಾಕರ ಭಟ್, ಉಳ್ಳಾಲದ ಜನರು ಖಾದರ್ ಅವರನ್ನು ಶಾಸಕರಾಗಿ ಆರಿಸಿ, ಸಚಿವರನ್ನಾಗಿಸಿದರೂ ಮತದಾರರು ಇಟ್ಟ ಭರವಸೆಯನ್ನು ಈಡೇರಿಸಲು ಸಚಿವರಿಗೆ ಇನ್ನೂ ಘಳಿಗೆ ಕೂಡಿ ಬರದೆ ತನ್ನ ಜವಾಬ್ದಾರಿಯನ್ನೇ ಮರೆತು ಬಿಟ್ಟಿದ್ದು.

ಸಚಿವರಾಗಿ ಆಯ್ಕೆ ಆದಾಗಿನಿಂದಲೂ ಕ್ಷೇತ್ರದಲ್ಲಿ ನಡೆಯುತ್ತಿರುವ ಗೋಹತ್ಯೆ ಹಿಂದೂಗಳ ಮೇಲಿನ ದಾಳಿಗಳನ್ನು ನಿಯಂತ್ರಿಸಲು ವಿಫಲರಾಗಿದ್ದಾರೆ . ಬಹುಸಂಖ್ಯಾತರ ಕೊಲೆ, ಕೊಲೆಯತ್ನ ನಡೆಸಿದ ಆರೋಪಿಗಳನ್ನು ರಕ್ಷಿಸಲಾಗುತ್ತಿದೆ ಎಂದು ಆರೋಪಿಸಿದರು.

ಉಳ್ಳಾಲವು ಅಲ್ಪಸಂಖ್ಯಾತರ ಪ್ರಾಬಲ್ಯ ಇರುವ ಕ್ಷೇತ್ರ , ಮತೀಯ ವಿಚಾರದಲ್ಲಿ ಇಲ್ಲಿ ಭಯೋತ್ಪಾದನೆಯೇ ಆರಂಭವಾಗಿದ್ದು, ಇದನ್ನು ಶಾಸಕರಾಗಿರುವ ಖಾದರ್ ಅವರೇ ಮುಂದೆ ನಿಂತು ನಿಗ್ರಹಿಸುವ ಕಾರ್ಯ ನಡೆಸಬೇಕು ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rss leader Dr. prabhakar bhat kalladka visited the Pajiru Nava grama Village house of Karthik Raj on Friday, November 18.
Please Wait while comments are loading...