ಮುಸ್ಲಿಂ ಮೆಹೆಂದಿ ಕಾರ್ಯಕ್ರಮದಲ್ಲಿ ಡಾ.ಕಲ್ಲಡ್ಕ ಪ್ರಭಾಕರ ಭಟ್!

Posted By:
Subscribe to Oneindia Kannada

ಮಂಗಳೂರು, ಸೆಪ್ಟೆಂಬರ್ 16 : ಮುಸ್ಲಿಂ ವಿರೋಧಿ ಎಂದೇ ಗುರುತಿಸಿಕೊಂಡಿರುವ ಹಿಂದೂತ್ವವಾದಿ ಹಾಗೂ ಆರ್ ಎಸ್ ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಇದೀಗ ಮುಸ್ಲಿಂ ಸಮುದಾಯದ ಮೆಹೆಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದಾರೆ.

ಕಲ್ಲಡ್ಕ ಪ್ರಭಾಕರ ಭಟ್ ರ ಶಾಲೆಗೆ ರಾಜ್ಯ ಸರ್ಕಾರದ ಅನುದಾನ ರದ್ದು

ಶುಕ್ರವಾರ ಕಲ್ಲಡ್ಕದಲ್ಲಿ ನಡೆದ ಹಕ್ಕಿಂ ಕಲ್ಲಡ್ಕ ಎನ್ನುವರ ಮಾವನ ಮಗಳ ಮೆಹೆಂದಿ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ಪತ್ನಿ ಕಮಲಾ ಪ್ರಭಾಕರ ಭಟ್ ಭಾಗವಹಿಸಿ ಮದುಮಗಳಿಗೆ ಶುಭ ಹಾರೈಸಿ ಆಶೀರ್ವದಿಸಿದರು.

Rss leader Dr. kalladka prabhakar bhat attended mehndi programme of muslim family in Mangaluru

ಹಕ್ಕಿಂ ಕಲ್ಲಡ್ಕ ಮತ್ತು ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಹಳೆಯ ಸ್ನೇಹಿತರಾಗಿದ್ದು,ಇವರ ಸ್ನೇಹ ಕಳೆದ ಹತ್ತು ವರ್ಷಗಳಿಂದ ಇದೆ. ಹಕೀಂ ಅವರ ಮನೆ ಡಾ ಕಲ್ಲಡ್ಕ ಪ್ರಭಾಕರ ಭಟ್ ಅವರ ಶ್ರೀರಾಮ ಆಶ್ರಮ ಶಾಲೆಯ ಬಳಿ ಇದೆ.

ಅಷ್ಟೇ ಅಲ್ಲದೇ ಹಕ್ಕಿಂ ಅವರ ಇಬ್ಬರು ಹೆಣ್ಣುಮಕ್ಕಳು ಕಲ್ಲಡ್ಕದ ಶ್ರೀ ರಾಮಾಶ್ರಮ ಶಾಲೆಯಲ್ಲಿ ಓದುತ್ತಿದ್ದಾರೆ. ಮೆಹೆಂದಿ ಕಾರ್ಯಕ್ರಮಕ್ಕೆ ಮದುಮಗಳ ತಾಯಿ ಕೆಲವು ದಿನಗಳ ಹಿಂದೆಯೇ ಪ್ರಭಾಕರ ಭಟ್ ಅವರ ಮನೆಗೆ ತೆರಳಿ ಆಹ್ವಾನ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಮೆಹೆಂದಿ ಕಾರ್ಯಕ್ರದಲ್ಲಿ ಪ್ರಭಾಕರ ಭಟ್ ದಂಪತಿ ಉಪಸ್ಥಿತರಿದ್ದರು. ಪಕ್ಕ ಹಿಂದೂತ್ವವಾದಿ ಡಾ ಕಲ್ಲಡ್ಕ ಪ್ರಭಾಕರ ಭಟ್ ದಂಪತಿಗಳು ಮುಸ್ಲಿಂ ಕುಟುಂಬದ ಮೆಹೆಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rss leader Dr. Kalladka Prabhakar Bhat and his wife Dr. Kamala Prabhakar Bhat attended mehndi programme of muslim family and blessed the bride. Now photo of the mehndi programme got viral on social network here on spt 16.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ