ಮಂಗಳೂರು:ಸ್ಮಾರ್ಟ್ ಸಿಟಿಗೆ 40 ಸಾವಿರ ಕೋಟಿ ಯೋಜನೆ ಸಿದ್ಧ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಸೆ. 29 : ಕೇಂದ್ರ ಸರಕಾರ ಘೋಷಿಸಿರುವ ಮಂಗಳೂರು ಸ್ಮಾರ್ಟ್ ಸಿಟಿಯನ್ನು ಹಂತ ಹಂತವಾಗಿ 20 ವರ್ಷದಲ್ಲಿ ಅನುಷ್ಠಾನ ಮಾಡಲು 40 ಸಾವಿರ ಕೋಟಿ ರುಗಳ ಬೃಹತ್ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ಪ್ರಥಮ ಹಂತದಲ್ಲಿ ಹಳೇ ಬಂದರು ಪ್ರದೇಶದಿಂದ ಆರಂಭಿಸಿ , ಕ್ರಮೇಣ ನಗರದ ಇತರ ಭಾಗಗಳಿಗೆ ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದರು. ಸ್ಮಾರ್ಟ್ ಸಿಟಿಗಳನ್ನು ಬ್ರೌನ್ ಸಿಟಿ ಮತ್ತು ಗ್ರೀನ್ ಸಿಟಿ ಎಂದು ವಿಭಜಿಸಿದ್ದು, ಮಂಗಳೂರು ಬ್ರೌನ್ ಸಿಟಿ ಪಟ್ಟಿಯಲ್ಲಿದೆ.

Mangaluru

ಇದನ್ನು ಪ್ಯಾನ್ ಸಿಟೀಸ್ ಮತ್ತು ಏರಿಯಾ ಸಿಟೀಸ್ ಎಂದು ಅಭಿವೃದ್ದಿಪಡಿಸಲಾಗುವುದು. ಪ್ಯಾನ್ ಸಿಟೀಸ್ ವಿಭಾಗದಲ್ಲಿ ರಸ್ತೆ, ನೀರು, ಒಳಚರಂಡಿ , ಪುಟ್ಬಾತ್ , ಬಸ್ ನಿಲ್ದಾಣ ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ಮೂಲಸೌಲಭ್ಯ ಒದಗಿಸಲಿದ್ದು, ಏರಿಯಾ ಸಿಟೀಸ್ ನಡಿ ಪ್ರತಿಯೊಂದು ಮನೆಯನ್ನು ಸೇರಿಸಿ ಅತೀ ಸಣ್ಣ ಪ್ರಮಾಣದಲ್ಲಿ ಅಭಿವೃದ್ದಿ ನಡೆಯಲಿದೆ.

ಕೇಂದ್ರ ಸರಕಾರ ನಾಲ್ಕು ತಿಂಗಳೊಳಗೆ ಅನುಷ್ಟಾನ ಕಂಪನಿ ರಚಿಸಲಿದ್ದು, ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿ ಅದರ ಮುಖ್ಯಸ್ಥರು. ಇನ್ನೊಬ್ಬ ಹಿರಿಯ ಐಎಎಸ್ ಅಧಿಕಾರಿ ವ್ಯವಸ್ಥಾಪಕ ನಿರ್ದೇಶಕರು. ಉಳಿದಂತೆ ಸಂಸದರು, ಶಾಸಕರು, ಮೇಯರ್, ಉಪಮೇಯರ್, ಕೆಲವು ಕಾರ್ಪೊರೇಟರ್ ಗಳು ಅದರಲ್ಲಿ ಇರಲಿದ್ದಾರೆ. ಎಂದು ಹೇಳಿದರು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The project will be implemented in various phases. For twenty years, the project will cost Rs 40,000 crores. The pan-city project will be completed in 5 to 10 years whereas area based development will take 15 to 20 years said member of parliament Nalin Kumar Kateel.
Please Wait while comments are loading...