ಮಂಗಳೂರಿನ ರೋಶನಿ ಕಾಲೇಜಿಗೆ ಎಂಬ್ಲೇಝಾನ್ 2017 ಸಮಗ್ರ ಪ್ರಶಸ್ತಿ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜನವರಿ, 09 : ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ 'ಎಂಬ್ಲೇಝಾನ್ 2017'ರಾಷ್ಟ್ರಮಟ್ಟದ ಅಂತರ್ ಕಾಲೇಜು ಸ್ಪರ್ಧೆಗಳಲ್ಲಿ ಮಂಗಳೂರಿನ ರೋಶನಿ ನಿಲಯ ಕಾಲೇಜ್ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.

ಈ 'ಎಂಬ್ಲೇಝಾನ್ 2017' ರಾಷ್ಟ್ರಮಟ್ಟದ ಅಂತರ್ ಕಾಲೇಜು ಸ್ಪರ್ಧೆಗಳಲ್ಲಿ ಸುಮಾರು 20 ಕಾಲೇಜುಗಳ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದವು.

ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ 'ಎಂಬ್ಲೇಝಾನ್ 2017' ಚಾಂಪಿಯನ್ ಆಗಿ ಹೊರಹೊಮ್ಮಿರುವ ಮಂಗಳೂರಿನ ರೋಶನಿ ನಿಲಯ ಕಾಲೇಜ್ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಭಾಗವಿಹಿಸಿ ಪ್ರಶಸ್ತಿಗಳನ್ನು ಜಯಿಸಿದ ಸ್ಪರ್ಧಿಗಳಿಗೆ ಪ್ರಶಸ್ತಿಗಳನ್ನು ನೀಡಿಲಾಯಿತು.

Roshni Nilya College Mangaluru winners of Emblazon 2017

ಸೇಂಟ್ ಆಗ್ನೆಸ್ ವಿದ್ಯಾ ಸಂಸ್ಥೆಯ ಮದರ್ ಸುಪೀರಿಯರ್ ಹಾಗೂ ಕಾರ್ಯದರ್ಶಿ ಡಾ.ಸಿಸ್ಟರ್ ಮರಿಯ ರೂಪಾ ಅವರು ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

ನಟ ಅರ್ಜುನ್ ಕಾಪಿಕಾಡ್ ಸಮಾರೋಪ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸೇಂಟ್ ಆಗ್ನೆಸ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಡಾ.ಸಿಸ್ಟರ್ ಎಂ.ಜೆಸ್ವೀನಾ ಎ.ಸಿ, ಅಧ್ಯಕ್ಷತೆ ವಹಿಸಿದ್ದರು.

ವಿದ್ಯಾಸಂಸ್ಥೆಯ ಜೊ.ಕಾರ್ಯದರ್ಶಿ ಡಾ.ಸಿಸ್ಟರ್ ಮರಿಯ ರೂಪಾ, ಉಪಪ್ರಾಂಶುಪಾಲ ಡಾ.ಸಿಸ್ಟರ್ ವೆನಿಸ್ಸಾ.ಎ.ಸಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕ ಪ್ರೊ.ಡಾ.ಸಿಸ್ಟರ್ ವೆನಿಸ್ಸಾ.ಎ.ಸಿ ಸ್ವಾಗತಿಸಿದರು.

ವಿದ್ಯಾರ್ಥಿನಿಯರಾದ ಸ್ವಪ್ನಾ ಕರ್ಕೇರ, ತನಿಷಾ, ರೋಕ್ಸೇನ್ ಡಿಸೋಜ ಮತ್ತು ಲಿನ್ ಮಿಸ್ಕಿಟ್ ಕಾರ್ಯಕ್ರಮ ನಿರೂಪಿಸಿದರು. ಪ್ರೊ.ಶುಭರೇಖಾ ವಂದಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Roshni Nilya College Mangaluru, emerged as the winners of ’Emblazon 2017’, a one-day national-level inter-collegiate fest, organised by St Agnes college, for undergraduate students.
Please Wait while comments are loading...