ಟ್ರಂಪ್ ಚಹಾಕೂಟದಲ್ಲಿ ಮೂಡುಬಿದಿರೆ ಉದ್ಯಮಿ ರೊನಾಲ್ಡ್ ಕೊಲಾಸೋ

By: ಐಸ್ಯಾಕ್ ರಿಚರ್ಡ್
Subscribe to Oneindia Kannada

ಮಂಗಳೂರು, ಫೆಬ್ರವರಿ 6: ಈಗ ನಾವು ಹೇಳಲು ಹೊರಟಿರುವುದು ತನ್ನ ಕೆಲಸದ ಮೂಲಕ ಮೈಲಿಗಲ್ಲು ಸೃಷ್ಟಿಸಿರುವ ಉದ್ಯಮಿಯೊಬ್ಬರ ಕಥೆ. ಇವರು ಮತ್ಯಾರೂ ಅಲ್ಲ ಮಂಗಳೂರಿನ ಮೂಡಬಿದಿರೆ ಮೂಲದ ರೊನಾಲ್ಡ್ ಕೊಲಾಸೋ.

ಅಮೆರಿಕಾದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚಹಾ ಕೂಟದಲ್ಲಿ ಉದ್ಯಮಿ ರೊನಾಲ್ಡ್ ಕೊಲಾಸೋ ಆಹ್ವಾನಿತರಾಗಿ ಭಾಗವಹಿಸಿದ್ದರು. ಫೆಬ್ರವರಿ 2ರಂದು ಬೆಳಿಗ್ಗೆ 7.30 ಗಂಟೆಗೆ ವಾಶಿಂಗ್ಟನ್ ಡಿ.ಸಿಯಲ್ಲಿರುವ ಅಮೇರಿಕಾದ ಅಧ್ಯಕ್ಷರ ಅಧಿಕೃತ ವಸತಿ ಗೃಹ ಶ್ವೇತ ಭವನದಲ್ಲಿ ಈ ಚಹಾ ಕೂಟ ನಡೆದಿತ್ತು. 'ನ್ಯಾಷನಲ್ ಪ್ರೇಯರ್ ಬ್ರೇಕ್ ಫಾಸ್ಟ್' ಎಂದು ಕರೆಯಲಾಗುವ ಈ ಚಹಾ ಕುಟದಲ್ಲಿ ಅಮೇರಿಕಾದ ಸಂಸತ್ ಸದಸ್ಯರು, ಸರಕಾರದ ಅಧಿಕಾರಿಗಳು ಹಾಗೂ 140 ದೇಶಗಳ ಪ್ರತಿನಿಧಿಗಳ ಜತೆ ರೊನಾಲ್ಡ್ ಕೊಲಾಸೋ ಕೂಡಾ ಭಾಗವಹಿಸಿದ್ದರು.[ರಸ್ತೆ ದಾನ ಮಾಡಿದ ಕಲಿಯುಗದ ಕರ್ಣ ಕೊಲಾಕೊ]

Ronald Colaco joins breakfast with US President Donald Trump

ಈ ಕೂಟಕ್ಕೆ ಪ್ರಪಂಚದಾದ್ಯಂತ ವಿವಿಧ ಧರ್ಮ ಮತ್ತು ಸಮುದಾಯಗಳಿಂದ ಆಯ್ದ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗಿತ್ತು. ಸಾರ್ವತ್ರಿಕ ಪ್ರೀತಿ ಮತ್ತು ಭ್ರಾತೃತ್ವದ ಸಂದೇಶವನ್ನು ಹರಡುವ ಈ ಮೂರು ದಿನಗಳ ಕೂಟದಲ್ಲಿ ಕೊಲಾಸೋ ಭಾಗವಹಿಸಿದ್ದರು . ಈ ಕೂಟವನ್ನು ಅಂತರಾಷ್ಟ್ರೀಯ ಸಂಬಂಧಗಳನ್ನು ಗಾಢವಾಗಿಸಲು ಆಯೋಜಿಸಲಾಗಿತ್ತು.[ಮಂಗ್ಳೂರಿನ ಬೊಕ್ಕಪಟ್ಣದಲ್ಲಿ ಬಡ್ಡಿ ದಂಧೆಕೋರನ ಬಂಧನ]

ರೊನಾಲ್ಡ್ ಕೊಲಾಸೋ ಯಾರು?
ರೊನಾಲ್ಡ್ ಕೊಲಾಸೋರವರು ಮೂಲತಃ ಮಂಗಳೂರು ತಾಲೂಕಿನ ಮೂಡುಬಿದಿರೆಯವರು. ಇವರು ಭಾರತದ ಅನಿವಾಸಿ ಉದ್ಯಮಿಯಾಗಿದ್ದು, ದುಬೈಯಲ್ಲಿ ನೆಲೆಸಿದ್ದಾರೆ. 1975 ರಲ್ಲಿ ಓಮನ್ ನಲ್ಲಿ ತಮ್ಮ ವೃತ್ತಿಜೀವನವನ್ನು ಅಕೌಂಟೆಂಟ್ ಆಗಿ ಆರಂಭಿಸಿ ನಂತರ ಕೊಲ್ಲಿ ಮತ್ತು ಯುರೋಪಿಯನ್ ಸೇರಿದಂತೆ ಎಂಟು ದೇಶಗಳಲ್ಲಿ ಕೆಲಸ ಮಾಡಿ ಆಡಳಿತ ಮತ್ತು ಆರ್ಥಿಕವಾಗಿ ಸದೃಢರಾದರು. ಅವರು ಅಥೆನ್ಸ್, ಗ್ರೀಸ್, ಜರ್ಮನಿ ಮ್ಯಾನೆಸ್ಮ್ಯಾನ್ ಮತ್ತು ಶೈಪೆಮೊಫ್ ಮಿಲಾನೊ, ಇಟಲಿ ಮುಂತಾದೆಡೆ ಅನಿಲ ಸಂಸ್ಕರಣೆಯ ಪ್ರಮುಖ ಯೋಜನೆಗಳಲ್ಲಿ ಮುಖ್ಯಸ್ಥರಾಗಿದ್ದಾರೆ.

Ronald Colaco joins breakfast with US President Donald Trump

ಕೆಲವು ವರ್ಷಗಳ ಹಿಂದೆ ರೊನಾಲ್ಡ್ ಕೊಲಾಸೋ 4.4 ಕೋಟಿ ರೂಪಾಯಿ ಮೌಲ್ಯದ 2.2 ಕಿ.ಮೀ ಉದ್ದದ ರಸ್ತೆಯನ್ನು ಕರ್ನಾಟಕ ಸರಕಾರಕ್ಕೆ ದಾನ ಮಾಡಿದ್ದರು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೀರ ಹತ್ತಿರದಲ್ಲಿರುವ ಈ ರಸ್ತೆಯನ್ನು ರಾಜ್ಯಕ್ಕೆ ಅರ್ಪಿಸಿದ್ದರು.

(ಚಿತ್ರ ಕೃಪೆ: ಡೆನಿಸ್ ಡಿ ಸಿಲ್ವಾ ಫೇಸ್ ಬುಕ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ronald Colaco, a Mangaluru based non resident Indian businessman, joined breakfast with the new President of the United States of America, Donald Trump at the ‘Washington Hilton’ near the White House in Washington DC along with the delegates from over 140 countries.
Please Wait while comments are loading...