ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ರೋಹಿತ್‌ ಆತ್ಮಹತ್ಯೆ ಪ್ರಕರಣದಲ್ಲಿ ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿವೆ'

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ 20 : 'ಹೈದರಾಬಾದ್ ವಿಶ್ವವಿದ್ಯಾಯದ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣದಲ್ಲಿ ಪ್ರತಿಪಕ್ಷಗಳು ಕೀಳು ರಾಜಕೀಯ ಮಾಡುತ್ತಿವೆ' ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಆರೋಪಿಸಿದರು.

ಮಂಗಳೂರಿನಲ್ಲಿ ಬುಧವಾರ ಮಾತನಾಡಿದ ವೆಂಕಯ್ಯ ನಾಯ್ಡು ಅವರು, 'ಆತ್ಮಹತ್ಯೆ ಮಾಡಿಕೊಂಡ ರೋಹಿತ್ ತನ್ನ ಡೆತ್‌ನೋಟ್‌ನಲ್ಲಿ ಯಾರ ಹೆಸರನ್ನೂ ನಮೂದಿಸಿಲ್ಲ. ಯಾರನ್ನೂ ಆರೋಪಿಸಿಲ್ಲ. ಆದರೆ, ಪ್ರತಿಪಕ್ಷಗಳು ವಿನಾಕಾರಣ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿವೆ' ಎಂದು ದೂರಿದರು. [ದಲಿತ ವಿದ್ಯಾರ್ಥಿ ಆತ್ಮಹತ್ಯೆ : ಜಾತಿ ಬೆಂಕಿಗೆ ರಾಜಕೀಯ ತುಪ್ಪ]

venkaiah Naidu

'ಪ್ರತಿಪಕ್ಷಗಳು ಸಚಿವೆ ಸ್ಮೃತಿ ಇರಾನಿ ರಾಜೀನಾಮೆಗೆ ಒತ್ತಾಯಿಸುತ್ತಿವೆ. ಇದೊಂದು ಕೀಳು ಮಟ್ಟದ ರಾಜಕೀಯವಲ್ಲದೆ ಮತ್ತೇನಲ್ಲ. ಇಂತಹ ಆರೋಪಗಳನ್ನು ಸರ್ಕಾರದ ಮೇಲೆ ಮಾಡುವ ಮೂಲಕ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರು ದೇಶದ ಗಮನವನ್ನು ಅಭಿವೃದ್ಧಿಯಿಂದ ಮತ್ತೆಲ್ಲೊ ಸೆಳೆಯುವ ಷಡ್ಯಂತ್ರ ಮಾಡುತ್ತಿದ್ದಾರೆ' ಎಂದರು. [ವಿದ್ಯಾರ್ಥಿ ರೋಹಿತ್ ಸಾವು, ಸ್ಮೃತಿ ರಾಜೀನಾಮೆಗೆ ಆಗ್ರಹ]

'ಹೈದರಾಬಾದ್ ವಿವಿ ಆವರಣದಲ್ಲಿ ಹಲವಾರು ಘಟನೆಗಳು ನಡೆದಿವೆ. ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ, ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಯವರಿಗೆ ಪತ್ರ ಬರೆದಿದ್ದರೆ ಅದರಲ್ಲಿ ತಪ್ಪೇನಿದೆ?. ಈ ಬಗ್ಗೆ ಸಚಿವೆ ಸ್ಮೃತಿ ಇರಾನಿ ಅವರು ಯಾವುದೇ ಕ್ರಮಕೈಗೊಂಡಿಲ್ಲ. ಈ ಪತ್ರವನ್ನು ವಿವಿಗೆ ಕಳುಹಿಸಿದ್ದಾರೆ' ಎಂದು ವೆಂಕಯ್ಯ ನಾಯ್ಡು ಹೇಳಿದರು.

'9 ವರ್ಷಗಳಲ್ಲಿ ಒಂಭತ್ತು ಮಂದಿ ವಿದ್ಯಾರ್ಥಿಗಳು ಇದೇ ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಗ ಕಾಂಗ್ರೆಸ್ ಸರ್ಕಾರವೇ ಇತ್ತು. ಆಗ ಸುಮ್ಮನಿದ್ದ ಪ್ರತಿಪಕ್ಷಗಳು ಈಗೇಕೆ ಇಷ್ಟು ದೊಡ್ಡ ಹಗರಣವಾಗಿ ಬಿಂಬಿಸುತ್ತಿವೆ' ಎಂದು ವೆಂಕಯ್ಯ ನಾಯ್ಡು ಪ್ರಶ್ನಿಸಿದರು.

English summary
Congress and Communists raking up the University of Hyderabad research scholar’s Rohith Vemula suicide issue for political befits said Union Minister Venkaiah Naidu in Mangaluru on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X