ಮಂಗಳೂರು : ಸಸಿಹಿತ್ಲು ದೇವಾಲಯದ ದರೋಡೆಗೆ ಯತ್ನ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮಂಗಳೂರು, ಆಗಸ್ಟ್ 08 : ಇತಿಹಾಸ ಪ್ರಸಿದ್ಧ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನಕ್ಕೆ ನುಗ್ಗಿದ ಮೂವರು ಕಳವು ಮಾಡಲು ಯತ್ನಿಸಿದ ಘಟನೆ ನಡೆಸಿದೆ. ಗೋಪುರದಿಂದ ಹಾರಿ ಒಳ ಪ್ರವೇಶಿಸಿದ ಕಳ್ಳರು, ಗರ್ಭಗುಡಿಯ ಮುಖ್ಯ ಬಾಗಿಲನ್ನು ತೆರೆಯುದೇ ವಾಪಸ್ ಹೋದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಭಾನುವಾರ ಮುಂಜಾನೆ 1.30ರ ಸುಮಾರಿಗೆ ಉತ್ತರದ ಬಾಗಿಲಿನ ಸಮೀಪ ಗೋಪುರದ ಮೇಲಕ್ಕೆ ಹತ್ತಿ ಅಲ್ಲಿಂದ ದೇವಸ್ಥಾನದೊಳಗೆ ಕಳ್ಳರು ಜಿಗಿದಿದ್ದಾರೆ. ಒಬ್ಬ ಕಳ್ಳ ಬಾಗಿಲನ್ನು ತೆರೆದು, ಮತ್ತೊಬ್ಬ ತನ್ನ ಸಹಚರನನ್ನು ಒಳ ಬರುವಂತೆ ಮಾಡಿದ್ದಾನೆ. ಒಳಗೆ ಬಂದ ಬಳಿಕ ನೇರವಾಗಿ ಮುಖ್ಯ ದ್ವಾರದ ಬಳಿ ಅಳವಡಿಸಿದ್ದ ಸಿಸಿಟಿವಿಯನ್ನು ಜಖಂ ಮಾಡಿದ್ದಾರೆ.[ರಾಜಲಕ್ಷ್ಮೀ ಜ್ಯುವೆಲರ್ಸ್‌ ದರೋಡೆ, ನೌಕರ ಸೇರಿ ನಾಲ್ವರ ಬಂಧನ]

Robbery attempt at Sasihithlu Bhagavathi temple

ಕಳ್ಳರು ಗರ್ಭಗುಡಿಯ ಮುಂದಿನ ಬಾಗಿಲು ತೆರೆಯುವ ಪ್ರಯತ್ನ ಮಾಡಿದ್ದಾರೆ. ಆದರೆ, ಸಾಧ್ಯವಾಗದ ಕಾರಣ ಉತ್ತರ ಭಾಗದ ಗೋಪುರದ ಬಾಗಿಲ ಮೂಲಕ ಹೊರ ಹೋಗಿದ್ದಾರೆ. ದೇವಾಲಯದೊಳಗೆ ಕಳ್ಳರ ಸಂಚಾರದ ಸಂಪೂರ್ಣ ಚಿತ್ರ ಸಿಸಿಟಿವಿಯಲ್ಲಿ ಸೆರೆಯಾಗಿದೆ.[ಹುಬ್ಬಳ್ಳಿ ಪೊಲೀಸರ ಬಲೆಗೆ ಬಿದ್ದ ಹೆದ್ದಾರಿ ದರೋಡೆಕೋರರು]

ಗರ್ಭಗುಡಿಯಲ್ಲಿ ದೇವರ ನಿತ್ಯ ಅಲಂಕಾರದ ಬಂಗಾರ ಮತ್ತು ಯಕ್ಷಗಾನ ಮೇಳದ ಆಭರಣಗಳಿದ್ದವು. ಅಲ್ಲದೆ ಹೊರ ಭಾಗದಲ್ಲಿ ಮೂರು ಕಾಣಿಕೆ ಡಬ್ಬಿ ಇದ್ದು ಕಳ್ಳರು ಹಣ ಕದಿಯಲು ಸಾಧ್ಯವಾಗಿಲ್ಲ. ನಿತ್ಯ ಪೂಜೆಗಾಗಿ ಅರ್ಚಕರು ದೇವಸ್ಥಾನಕ್ಕೆ ಬಂದಾಗ ಕಳುವಿಗೆ ಪ್ರಯತ್ನಿಸಿರುವ ವಿಚಾರ ಬೆಳಕಿಗೆ ಬಂದಿದೆ.[ಗಂಡ-ಹೆಂಡತಿ ಅಂತ ಬಂದ್ರು, 18 ಲಕ್ಷ ದೋಚಿದ್ರು!]

ದೇವಾಲಯದ ಆಡಳಿತ ಮಂಡಳಿಯವರು ಈ ಕುರಿತು ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನ ದಳ ಸ್ಥಳಕ್ಕೆ ಆಮಿಸಿ ಪರಿಶೀಲನೆ ನಡೆಸಿದರು.

ಹೆದ್ದಾರಿ ದರೋಡೆಕೋರರ ಸೆರೆ : ಬೈಕ್ ಸವಾರನೊಬ್ಬನನ್ನುನಿಲ್ಲಿಸಿ ಲೂಟಿ ಮಾಡಿದ 6 ಮಂದಿ ಹೆದ್ದಾರಿ ದರೋಡೆಕೋರರ ತಂಡವನ್ನು ಉಪ್ಪಿನಂಗಡಿಯ ಪೋಲಿಸರು ಬಂಧಿಸಿದ್ದಾರೆ. ಬಂಧಿತರನ್ನು ಪ್ರದೀಪ್, ಗೌತಮ್, ನಾಗೇಶ್, ಶಿವರಾಮ್, ದಿನೇಶ್ ಮತ್ತು ಸಂಜುಕುಮಾರ್ ಎಂದು ಗುರುತಿಸಲಾಗಿದೆ.

ಉಪ್ಪಿನಂಗಡಿ ಪೋಲಿಸರು ತನಿಖೆ ನಡೆಸುತ್ತಿದ್ದ ವೇಳೆ ಉಪ್ಪಿನಂಗಡಿ ಕಡೆಯಿಂದ ಬಂದ ಕಾರನ್ನು ನಿಲ್ಲಿಸಲು ಸೂಚಿಸಿದಾಗ ನಿಲ್ಲಿಸದೆ ಪರಾರಿಯಾಗಲು ಪ್ರಯತ್ನಿಸಿದರು. ಸಾರ್ವಜನಿಕರ ಸಹಾಯದಿಂದ 6 ಮಂದಿಯನ್ನು ಹಿಡಿದ ಪೋಲಿಸರು ಬಂಧಿತರಿಂದ ಟೋಯೊಟಾ ಇಟಿಯೆಸ್ ಕಾರು, ಮರದ ದೊಣ್ಣೆ, ತಲವಾರು, ಮೆಣಸಿನ ಪುಡಿಯ ಕಟ್ಟು, ಮತ್ತು ವಿವಿಧ ಕಂಪೆನಿಯ ನಾಲ್ಕು ಮೊಬೈಲ್ ಹಾಗೂ ರೂ 8,500 ನಗದು ವಶಪಡಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A three-member gang attempted robbery at the Bhagavathi temple Sasihithlu, Mangaluru. Surathkal police registered the case.
Please Wait while comments are loading...