ರಸ್ತೆ ಅಪಘಾತ : ದಕ್ಷಿಣ ಕನ್ನಡ ಡಿಸಿ ಎ.ಬಿ.ಇಬ್ರಾಹಿಂಗೆ ಗಾಯ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜುಲೈ 23 : ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಉಪ್ಪಿನಂಗಡಿ ಬಳಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.

ಶನಿವಾರ ಮಧ್ಯಾಹ್ನ ಎ.ಬಿ.ಇಬ್ರಾಹಿಂದ ಅವರು ಬೆಂಗಳೂರಿಗೆ ಟೊಯೋಟಾ ಫಾರ್ಚುನರ್ ಕಾರಿನಲ್ಲಿ ತೆರಳುತ್ತಿದ್ದರು. ಉದನೆ-ಗುಂಡ್ಯದ ಸಮೀಪ ಬೆಂಗಳೂರಿಂದ ಬರುತ್ತಿದ್ದ ಸ್ಕಾರ್ಪಿಯೋ ಕಾರು ಇಬ್ರಾಹಿಂ ಅವರಿದ್ದ ಕಾರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.[ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ವರ್ಗಾವಣೆ]

AB Ibrahim

ಅಪಘಾತದಲ್ಲಿ ಎ.ಬಿ.ಇಬ್ರಾಹಿಂ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಕಾರ್ಪಿಯೋದಲ್ಲಿದ್ದ ಐವರು ಗಾಯಗೊಂಡಿದ್ದಾರೆ. ಈ ಅಪಘಾತದಿಂದಾಗಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಸುಮಾರು ಅರ್ಧ ಗಗಂಟೆಗಳ ಬಳಿಕ ಸಂಚಾರ ವ್ಯವಸ್ಥೆಯನ್ನು ಸರಿಪಡಿಸಲಾಯಿತು.[ದಕ್ಷಿಣ ಕನ್ನಡದಲ್ಲಿ 6 ತಿಂಗಳಲ್ಲಿ 530 ಅಪಘಾತ]

ತುಮಕೂರಿಗೆ ತೆರಳುತ್ತಿದ್ದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಶಶಿ ಬೆಳ್ಳಾಯರು, ಗಿರೀಶ, ಸುನಿಲ್ ಕೃಷ್ಣಾಪುರ, ಮನೋಹರ್ ಮುಂತಾದವರು ಸಂಚಾರ ಸುಗಮಗೊಳಿಸಲು ಸಹಕಾರ ನೀಡಿದರು.

ವರ್ಗಾವಣೆಗೊಂಡಿದ್ದಾರೆ : ಮೊದಲು ಕೆಎಎಸ್ ಅಧಿಕಾರಿಯಾಗಿದ್ದ ಎ.ಬಿ.ಇಬ್ರಾಹಿಂ ಅವರು ನಂತರ ಐಎಎಸ್ ಅಧಿಕಾರಿಯಾಗಿ ಬಡ್ತಿ ಪಡೆದಿದ್ದರು. 2013ರ ಡಿಸೆಂಬರ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಅವರು ಅಧಿಕಾರ ವಹಿಸಿಕೊಂಡಿದ್ದರು. ಸದ್ಯ, ಎ.ಬಿ.ಇಬ್ರಾಹಿಂ ಅವರನ್ನು ಸಾರಿಗೆ ಮತ್ತು ರಸ್ತೆ ಸುರಕ್ಷತಾ ಇಲಾಖೆ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dakshina Kannada Deputy Commissioner A.B. Ibrahim injured in road accident. Accident took place at Udane, Gundya near Uppinangadi on Saturday July 23, 2016 evening.
Please Wait while comments are loading...