ಕ್ಯಾನ್ಸರಿಗೆ ಬಲಿಯಾದ ಮಂಗಳೂರಿನ ಯುವ ಪತ್ರಕರ್ತ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮೇ 15: ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಮಂಗಳೂರಿನ ಯುವ ಪತ್ರಕರ್ತ ಸ್ಯಾವ್ನಿ ಅವರು ಶುಕ್ರವಾರ ನಿಧನರಾಗಿದ್ದಾರೆ. ಅವರ ಅಂತಿಮ ಸಂಸ್ಕಾರವನ್ನು ವಾಮಂಜೂರಿನ ಚರ್ಚ್ ನಲ್ಲಿ ಮೇ 16ರಂದು ನೇರವೇರಿಸಲಾಗುತ್ತಿದೆ.

ಮಂಗಳೂರು ಮೂಲದ ಅಂತರ್ಜಾಲ ಸುದ್ದಿ ತಾಣ ಮಂಗಳೂರಿಯನ್. ಕಾಂನ ಪತ್ರಕರ್ತ ಸ್ಯಾವ್ನಿ ಮೊಂತೆರೋ ವಾಮಂಜೂರು (22) ಕ್ಯಾನ್ಸರಿಗೆ ಬಲಿಯಾದ ಯುವಕ. ಇತ್ತೀಚಿಗಷ್ಟೇ ತಮ್ಮ ವಿದ್ಯಾಭ್ಯಾಸ ಮುಗಿಸಿ ಪತ್ರಕರ್ತನಾಗಿ ಕೆಲಸ ನಿರ್ವಹಿಸುತ್ತಿದ್ದ ಸ್ಯಾವ್ನಿ, ಕೆಲವು ದಿನಗಳಿಂದ ಕ್ಯಾನ್ಸರ್‌ ರೋಗದಿಂದ ಬಳಲುತ್ತಿದ್ದರು.[ಪತ್ರಿಕೋದ್ಯಮದವರಿಗೆ ನೀತಿ ಸಂಹಿತೆ ಅಗತ್ಯ: ಹಾಲ್ದೊಡ್ಡೇರಿ]

ಆರೋಗ್ಯ ಸ್ಥಿತಿಯಲ್ಲಿ ಏರುಪೇರಾದ ಕಾರಣ ಕೆಲವು ದಿನಗಳ ಹಿಂದೆ ನಗರದ ಅತ್ತಾವರದಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 2013ರಿಂದ ಸ್ಯಾವ್ನಿ ಅವರು ಲಿಂಫೋಮಾ(Lymphoma) ದಿಂದ ಬಳಲುತ್ತಿದ್ದರು. ಕೆಲ ತಿಂಗಳುಗಳಿಂದ ಕಿಮೋಥೆರಪಿ ತಾಪಕ್ಕೆ ಬಳಲಿದ್ದರೂ ವರದಿಗಾರಿಕೆ ಕೆಲಸಕ್ಕೆ ಚಕ್ಕರ್ ಹಾಕಿರಲಿಲ್ಲ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಸಾವನ್ನಪ್ಪಿದ್ದಾರೆ. ಸ್ಯಾವ್ನಿ ನಿಧನಕ್ಕೆ ಸ್ಥಳೀಯ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.

Rest in Peace Savney Monteiro Mangalorean dot com journalist

1994ರಲ್ಲಿ ವಾಮಂಜೂರಿನಲ್ಲಿ ಫೆಲಿಕ್ಸ್ ಹಾಗೂ ಫೆಲಿಂಸಿನಾ ಮಾಂತೆರೋ ದಂಪತಿಯ ಮಗನಾಗಿ ಜನಿಸಿದ ಸ್ಯಾವ್ನಿಮ್ ಮಿಲಿಗ್ರೆಸ್ ಶಾಲೆಯ ವಿದ್ಯಾರ್ಥಿ. ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪಿಯುಸಿ ಹಾಗೂ ಪದವಿ ಪಡೆದಿದ್ದರು. ತಾಯಿ ಗೃಹಿಣಿಯಾಗಿದ್ದರೆ, ತಂದೆ ಯುಎಇಯಲ್ಲಿ ಉದ್ಯೋಗ ನಿರತರಾಗಿದ್ದಾರೆ. ಅಣ್ಣ ಸದ್ಯ ಸಿಡ್ನಿಯಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಕಂಪನಿಯ ಉದ್ಯೋಗಿಯಾಗಿದ್ದಾರೆ. ಕೆಲ ತಿಂಗಳುಗಳ ಹಿಂದೆ ಮಂಗಳೂರಿನ್.ಕಾಂ ಸೇರಿದ್ದ ಸ್ಯಾವ್ನಿ ಬಗ್ಗೆ ಸಂಸ್ಥೆಯ ಒಡತಿ ವೈಲೆಟ್ ಪೆರೆರಾ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಮೇ 16ರಂದು ಸಂತೋಷ್ ನಗರದಲ್ಲಿರುವ ಅವರ ನಿವಾಸದಿಂದ ಶವಪೆಟ್ಟಿಗೆ ಸಾಗಲಿದ್ದು, ವಾಮಂಜೂರಿನ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಅಂತಿಮ ವಿಧಿವಿಧಾನಗಳು ನೆರವೇರಲಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : +91 81230 76258

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Rest in Peace :Cancer kills a young, budding journalist. A 22 year old journalist Savney Monteiro passed away at Vamanjoor on Friday his last rites will be conducted at St Joseph the Worker Church followed by mass on May 16. He was working with Mangalorean dot com.
Please Wait while comments are loading...