ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿನ ಸಾವಿನ ಪ್ರಕರಣಗಳ ಲಿಸ್ಟ್ ಈಗ ವೈರಲ್

|
Google Oneindia Kannada News

ಮಂಗಳೂರು, ಆಗಸ್ಟ್ 6: ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಇಲ್ಲಿಯವರಗೆ ನಡೆದಿರುವ ಅಸಹಜ ಸಾವು, ಆತ್ಮಹತ್ಯೆ ಹಾಗೂ ಆತ್ಮಹತ್ಯೆ ಯತ್ನ ಪ್ರಕರಣಗಳ ಮಾಹಿತಿ ಈಗ ಹೊರಬಿದ್ದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಆಳ್ವಾಸ್ ಸಂಸ್ಥೆ ತೇಜೋವಧೆ ವಿರೋಧಿಸಿ ಆ. 12 ರಂದು ಪ್ರತಿಭಟನೆಆಳ್ವಾಸ್ ಸಂಸ್ಥೆ ತೇಜೋವಧೆ ವಿರೋಧಿಸಿ ಆ. 12 ರಂದು ಪ್ರತಿಭಟನೆ

ಕಳೆದ ವರ್ಷ ಮಂಗಳೂರು ಎಸ್ಎಫ್ಐ ಜಿಲ್ಲಾ ಅಧ್ಯಕ್ಷ ನಿತಿನ್ ಕುತ್ತಾರ್ ಮಾಹಿತಿ ಹಕ್ಕು ಅಧಿನಿಯಮ 2005ರಂತೆ ಅರ್ಜಿ ಸಲ್ಲಿಸಿ, ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ 2006ರಿಂದ 2016ರವರೆಗೆ ನಡೆದಿರುವ ಅಸಹಜ ಸಾವು, ಆತ್ಮಹತ್ಯೆ, ಆತ್ಮಹತ್ಯೆ ಯತ್ನ ಪ್ರಕರಣಗಳ ವಿವರಗಳನ್ನು ಕೋರಿದ್ದರು. ಇದೀಗ ಮಾಹಿತಿ ಅವರಿಗೆ ಲಭ್ಯವಾಗಿದ್ದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿ ಆಗಿದೆ.

Report of suicide list at Alva’s institution goes viral on Social Media

ಆಳ್ವಾಸ್ ಶಿಕ್ಷಣ ಸಂಸ್ಥೆಗಳಲ್ಲಿ ನಡೆದಿರುವ ಆತ್ಮಹತ್ಯೆ ಹಾಗೂ ಅಸಹಜ ಸಾವು ಪ್ರಕರಣಗಳ ವಿವರ ಇಂತಿದೆ:

1. ಪವನ್, 17 ವರ್ಷ - ನೇಣು ಬಿಗಿದುಕೊಂಡು ಆತ್ಮಹತ್ಯೆ

2. ವಿಕ್ರಂ ಎಂ.ಎಸ್, 18 ವರ್ಷ - ನೇಣು ಬಿಗಿದುಕೊಂಡು ಆತ್ಮಹತ್ಯೆ

3. ಪೃಥ್ವಿ ಎಂ.ಆರ್, 17 ವರ್ಷ - ನೇಣು ಬಿಗಿದುಕೊಂಡು ಆತ್ಮಹತ್ಯೆ

4. ಕು. ವಿಶಾಲಾಕ್ಷಿ, 17 ವರ್ಷ - ನೇಣು ಬಿಗಿದುಕೊಂಡು ಆತ್ಮಹತ್ಯೆ

5. ವೇಣುಗೋಪಾಲ ಎನ್. ಎ, 16 ವರ್ಷ - ನೇಣು ಬಿಗಿದುಕೊಂಡು ಆತ್ಮಹತ್ಯೆ

6. ರೂಪಾ ಎಸ್.ಛವಡಿ, 17 ವರ್ಷ - ನೇಣು ಬಿಗಿದುಕೊಂಡು ಆತ್ಮಹತ್ಯೆ

7. ರಕ್ಷಿತಾ ಎ, 18 ವರ್ಷ - ನೇಣು ಬಿಗಿದುಕೊಂಡು ಆತ್ಮಹತ್ಯೆ

8. ಅಶ್ವಿನಿ, 17 ವರ್ಷ - ಮೇಲಿನಿಂದ ಹಾರಿ ಆತ್ಮಹತ್ಯೆ

9. ನಿರಂಜನ್ ಮಧುಗಿರಿ - ಕುಸಿದು ಬಿದ್ದು ಮೃತ

10. ನಿವೇದಿತಾ, 19 ವರ್ಷ - ಕುಸಿದು ಬಿದ್ದು ಮೃತ

ಈ ಪ್ರಕರಣಗಳಲ್ಲಿ 1ರಿಂದ 7 ಹಾಗೂ 9, 10ನೇ ಪ್ರಕರಣಗಳ ಅಂತಿಮ ವರದಿ ಸಲ್ಲಿಕೆಯಾಗಿದೆ. 8ನೇ ಪ್ರಕರಣ ಕುರಿತು 23.03.2017ರಂದು ಚಾಜ್ ಅಬೇಟ್ ವರದಿ ಸಲ್ಲಿಸಲಾಗಿದೆ. 9 ಮತ್ತು 10ನೇ ಪ್ರಕರಣಗಳಲ್ಲಿ ವಿದ್ಯಾರ್ಥಿಗಳು ಕುಸಿದು ಬಿದ್ದು ಸತ್ತಿದ್ದಾರೆ ಎಂದಷ್ಟ ಬರೆಯಲಾಗಿದೆ ಹೊರತು, ಯಾವ ಕಾರಣದಿಂದ ಕುಸಿದು ಬಿದ್ದರು ಎಂಬ ವಿವರಣೆಯಿಲ್ಲ ಎಂಬುದು ಸ್ಪಷ್ಟವಾಗಿದೆ.

English summary
Number of suicides that have taken place at Alva’s group of institution from the year 2006-16 goes viral on social media after the death of Kavya Poojary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X