ಅಡಿಕೆ, ಪಾನ್ ಮಸಾಲ ನಿಷೇಧ ಹಿಂಪಡೆಯಲು ಮನವಿ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಅಕ್ಟೋಬರ್, 31 : ರಾಜ್ಯ ಸರ್ಕಾರ ಗುಟ್ಕಾ ನಿಷೇಧದ ಜತೆಗೆ ಅಡಿಕೆ ಮತ್ತು ಪಾನ್‌‌ ಮಸಾಲ ಪೊಟ್ಟಣ ಮಾರಾಟ ಮಾಡುವುದನ್ನು ನಿಷೇಧಿಸಬೇಕೆಂದು ಕಾನೂನು ಹೊರಡಿಸಿದೆ. ಈ ಹಿನ್ನಲೆಯಲ್ಲಿ ಅಡಕೆ ದರ ಕುಸಿದು ಬೆಳೆಗಾರರು ಕಂಗಾಲಾಗಿದ್ದಾರೆ.

ಈ ಬಗ್ಗೆ ರಾಜ್ಯ ಅಡಕೆ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷರ ನೇತೃತ್ವದ ನಿಯೋಗವು ಕಾನೂನು ಸಚಿವ ಟಿ. ಬಿ. ಜಯಚಂದ್ರ ಅವರನ್ನು ಭೇಟಿಯಾಗಿ ಆದೇಶ ಹಿಂದಕ್ಕೆ ಪಡೆಯಲು ವಿನಂತಿಸಿದೆ.

Repeal gutka ban in state: KSACSF request to T.B.Jayachandra

ರಾಜ್ಯ ಸರಕಾರದ ಈ ಆದೇಶದಿಂದಾಗಿ ಅಡಕೆ ಬೆಲೆ ತೀರಾ ಕುಸಿಯತೊಡಗಿದೆ. ಆಹಾರ ಸುರಕ್ಷೆ ಇಲಾಖೆಗೆ ಅಡಕೆ ಹಾಗೂ ಪಾನ್ ಮಸಾಲಾ ನಿಷೇಧ ಮಾಡಲು ಅಧಿಕಾರವಿರುವುದಿಲ್ಲ.

ಆದರೂ ಈ ಆದೇಶ ತರಲಾಗಿದೆ. ಈ ಆದೇಶದಿಂದಾಗಿ ಅನೇಕ ದುಷ್ಪರಿಣಾಮ ಹಾಗೂ ರೈತರಿಗಾಗುವ ತೊಂದರೆ , ನಷ್ಟಗಳ ಬಗ್ಗೆ ಆಹಾರ ಸುರಕ್ಷತಾ ಆಯುಕ್ತರಿಗೆ ನಿಯೋಗ ಮನವರಿಕೆ ಮಾಡಿತು.

ಕಾನೂನು ಸಚಿವರಾದ ಟಿ. ಬಿ. ಜಯಚಂದ್ರ ಅವರನ್ನು ಭೇಟಿ ಮಾಡಿ ನಿಷೇಧ ಹಿಂದಕ್ಕೆ ಪಡೆಯುವಂತೆ ಮನವಿ ಮಾಡಲಾಗಿದೆ. ನಿಷೇಧ ಹಿಂದಕ್ಕೆ ಪಡೆದಲ್ಲಿ ರೈತರಿಗೆ ಆಗುವ ತೊಂದರೆಗಳನ್ನು ನೀಗಿಸಬಹುದಾಗಿದೆ.

ಹಾಗೆಯೇ ಅಡಕೆ ಬೆಳೆಗಾರಗೆ ಉತ್ತಮ ದರ ಸಿಗುವಂತೆ ಮಾಡಬೇಕಾಗಿ ಅಡಿಕೆ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ಪಧ್ಮನಾಭ ಮನವಿ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Karnataka State Areca Cooperative Societies Federation has urged the state government to rescind the ban on sale of areca and pan masala sachets separately besides lifting the ban on gutka.
Please Wait while comments are loading...