ಬೇಸಿಗೆ ಮೋಜಿಗೆ ಪಣಂಬೂರು ಬೀಚಲ್ಲಿದೆ ಹೊಸ ಕಾನ್ಸೆಪ್ಟ್

By: ಶಂಶೀರ್ ಬುಡೋಳಿ
Subscribe to Oneindia Kannada

ಮಂಗಳೂರು, ಏಪ್ರಿಲ್ 15: ಏಪ್ರಿಲ್ ತಿಂಗಳು ಬಂತು. ಜೊತೆಗೆ ಬೇಸಿಗೆ ರಜೆಯೂ ಬಂತು. ಇನ್ನು ಕೇಳಬೇಕೇ..? ಪ್ರವಾಸಿ ತಾಣಗಳು ಫುಲ್ ಬ್ಯುಸಿ. ರಾಜ್ಯದ ಹಲವು ಪ್ರವಾಸಿ ತಾಣಗಳಲ್ಲಿ ಇನ್ನೆರಡು ತಿಂಗಳ ಕಾಲ ಕೇಳೋದೇ ಬೇಡ. ಪ್ರವಾಸಿಗರೇ ತುಂಬಿರುತ್ತಾರೆ. ಇದಕ್ಕೆ ಮಂಗಳೂರು ಸಹ ಹೊರತಾಗಿಲ್ಲ.

ಮಂಗಳೂರಲ್ಲಿ ಪ್ರವಾಸಿಗರಿಗೆ ಸಮಯ ಕಳೆಯಲು ಹಲವು ಬೀಚ್ ಗಳಿವೆ, ಧಾರ್ಮಿಕ ತಾಣಗಳಿವೆ ಮತ್ತೊಂದಿಷ್ಟು ಐತಿಹಾಸಿಕ ತಾಣಗಳೂ ಇವೆ.

ಈಗಾಗಲೇ ಪ್ರವಾಸಿಗರು ಮಂಗಳೂರಿನ ಬೀಚ್ ಗಳಿಗೆ ಭೇಟಿ ನೀಡಲು ಆರಂಭಿಸಿದ್ದಾರೆ. ಪ್ರವಾಸಿಗರನ್ನ ಸೆಳೆಯಲು, ಪ್ರವಾಸಿಗರಿಗೆ ಇನ್ನಷ್ಟು ಮನರಂಜನೆ ನೀಡಲು ಇಲ್ಲಿನ ಪಣಂಬೂರಿನ ಬೀಚ್ ನಲ್ಲಿ ' ರೆಂಟ್ ಎ ಸ್ಫೋರ್ಟ್ಸ್ ' ಎಂಬ ಹೊಸ ಕಾನ್ಸೆಪ್ಟನ್ನ ಪರಿಚಯಿಸಲಾಗಿದೆ.[ಹಡಗು ಯಾತ್ರಿಗಳಿಗೆ ಮಂಗಳೂರು ಬಂದರಿನಲ್ಲಿ ಇ-ವೀಸಾ ಸೌಲಭ್ಯ!]

ಹಣ ಪಾವತಿಸಿ, ಮನರಂಜನೆ ಪಡೆಯಿರಿ..!

ಹಣ ಪಾವತಿಸಿ, ಮನರಂಜನೆ ಪಡೆಯಿರಿ..!

ಪಿಬಿಟಿಡಿಪಿ ಅಂದರೆ 'ಪಣಂಬೂರು ಬೀಚ್ ಟೂರಿಸಂ ಡೆವಲಪ್ ಮೆಂಟ್ ಪ್ರೊಜೆಕ್ಟ್'ನವರು 'ರೈ ಸ್ಪೋರ್ಟ್ಸ್ & ರೆಂಟಲ್ಸ್' ಸಹಭಾಗಿತ್ವದಲ್ಲಿ ಈ ಹೊಸ ಕಾನ್ಸೆಪ್ಟ್ ನ್ನ ಪರಿಚಯಿಸಿದೆ. ನೀವು ಪಣಂಬೂರು ಬೀಚ್ ಗೆ ಹೋದರೆ ಕೇವಲ ಬಾಡಿಗೆ ಹಣ ಕೊಟ್ಟರೇ ಸಾಕು, ನಿಮಗೆ ಬೇಕಾದ ಕ್ರೀಡಾ ಸಲಕರಣೆಗಳು ದೊರಕುತ್ತವೆ.

ಲಗೋರಿಯಿಂದ ಕ್ರಿಕೆಟ್ ವರೆಗೆ

ಲಗೋರಿಯಿಂದ ಕ್ರಿಕೆಟ್ ವರೆಗೆ

ಬೀಚ್ ಸೈಕಲ್, ಬೀಚ್ ಟೆಂಟ್, ಟಗ್ ಆಫ್ ವಾರ್, ಕ್ರಿಕೆಟ್ ಸೆಟ್, ವಾಲಿಬಾಲ್, ತ್ರೋಬಾಲ್, ಫುಟ್ಬಾಲ್, ಲಗೋರಿ, ಫ್ರಿಸ್ಬಿ/ ಫ್ಲೈಯಿಂಗ್ ಡಿಸ್ಕ್, ಆಂಗ್ಲಿಂಗ್ ಹಾಗೂ ರಿಂಗ್ ಟಾಸ್ ನಿಮಗೆ ಬಾಡಿಗೆಗೆ ಸಿಗುತ್ತದೆ. ಇದಕ್ಕೆ ದರವನ್ನ ನಿಗದಿಪಡಿಸಲಾಗಿದ್ದು ಬಾಡಿಗೆಗೆ ಪಡೆದು ಮೋಜು ಅನುಭವಿಸಬಹುದು.[ಮೇ1ರಿಂದ ಮಂಗ್ಳೂರಿನಿಂದ ಬೆಂಗ್ಳೂರು, ಮುಂಬೈಗೆ ಇಂಡಿಗೊ ವಿಮಾನಯಾನ]

ಜನರಿಂದು ಉತ್ತಮ ಪ್ರತಿಕ್ರಿಯೆ

ಜನರಿಂದು ಉತ್ತಮ ಪ್ರತಿಕ್ರಿಯೆ

ಈ ಬಗ್ಗೆ ಬೀಚ್ ಅಭಿವೃದ್ಧಿಯ ಹೊಣೆ ಹೊತ್ತ ಯತೀಶ್ ಬೈಕಂಪಾಡಿ ಹೇಳುವುದು ಹೀಗೆ - ' ಬೀಚ್ ಟೂರಿಸಂ ಅಭಿವೃದ್ಧಿಯೇ ನಮ್ಮ ಉದ್ದೇಶ. ಈ ಹೊಸ ಕಾನ್ಸೆಪ್ಟ್ ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ರಜೆಯಲ್ಲಿ ಕುಟುಂಬ ಸಮೇತ, ಸ್ನೇಹಿತರ ಜೊತೆ ಬರುವವರಿಗೆ ಇದು ಸಹಕಾರಿಯಾಗಲಿದೆ. ಇನ್ನು ಕಾರ್ಪೋರೆಟ್ ಕಂಪನಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ಸಹ ಪಣಂಬೂರು ಬೀಚ್ ಗೆ ಪ್ರವಾಸ ಮಾಡಲು ಮುಂದೆ ಬರುತ್ತಿದ್ದಾರೆ' ಅಂದರು.

ಐಡಿಯಾ ಹೊಳೆದಿದ್ದು ಹೇಗೆ..?

ಐಡಿಯಾ ಹೊಳೆದಿದ್ದು ಹೇಗೆ..?

"ಕೆಲ ತಿಂಗಳಿನಿಂದ ಪಣಂಬೂರು ಬೀಚ್ ಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಕೆಲವರು ವಾಲಿಬಾಲ್ ಸೇರಿ ಇತರೆ ಕ್ರೀಡಾ ಸಾಮಾಗ್ರಿಗಳು ಬಾಡಿಗೆಗೆ ಸಿಗುತ್ತವೆಯೇ ಎಂದು ವಿಚಾರಿಸುತ್ತಿದ್ದರು. ಹೀಗಾಗಿ ಪ್ರವಾಸಿಗರ ಬೇಡಿಕೆಯನ್ನು ಅಲ್ಪಾವಧಿಯಲ್ಲಿ ತೀರಿಸಲು ಈ ಹೊಸ ಕಾನ್ಸೆಪ್ಟ್ ನ್ನ ಜಾರಿಗೆ ತಂದಿದ್ದೇವೆ. ಪ್ರವಾಸಿಗರಿಗೆ ಮನರಂಜನೆ ಸಿಗುತ್ತದೆ. ನಮಗೂ ಆದಾಯ ಸಿಗುತ್ತದೆ," ಎನ್ನುತ್ತಾರೆ ಯತೀಶ್ ಬೈಕಂಪಾಡಿ.

ವಾರಾಂತ್ಯದಲ್ಲಿ ಈ ಬೀಚ್ ಗೆ ಸುಮಾರು 20,000 ಪ್ರವಾಸಿಗರು ಭೇಟಿ ನೀಡುತ್ತಾರೆ. ಮುಂದೆ ಈ ಸಂಖ್ಯೆ 40,000 ತಲುಪುವ ನಿರೀಕ್ಷೆ ಅವರು ಇಟ್ಟುಕೊಂಡಿದ್ದಾರೆ.

ಲೈಫ್ ಗಾರ್ಡ್ ಗಳಿದ್ದಾರೆ ಡೋಂಟ್ ವರಿ..

ಲೈಫ್ ಗಾರ್ಡ್ ಗಳಿದ್ದಾರೆ ಡೋಂಟ್ ವರಿ..

ಇನ್ನು ಪಣಂಬೂರು ಬೀಚ್ ನಲ್ಲಿ ರಾಯಲ್ ಲೈಫ್ ಸೇವಿಂಗ್ ಸೊಸೈಟಿ, ಇಂಟರ್ ನ್ಯಾಶನಲ್ ಲೈಫ್ ಸೇವಿಂಗ್, ಸರ್ಫ್ ಲೈಫ್ ಸೇವಿಂಗ್ ಆಸ್ಟ್ರೇಲಿಯಾ ಸಹಭಾಗಿತ್ವದಲ್ಲಿ ಲೈಫ್ ಗಾರ್ಡ್ ಗಳು ಸಹ ಇಲ್ಲಿ ಕಾರ್ಯಾಚರಿಸುತ್ತಿದ್ದಾರೆ.

ಇಲ್ಲಿ ವಾಟರ್ ಸ್ಕೂಟರ್, ಸರ್ಫಿಂಗ್, ಜೆಟ್ ಸ್ಕಿ ರೈಡ್ಸ್ , ಬೋಟಿಂಗ್, ಡಾಲ್ಫಿನ್ ವೀವಿಂಗ್ ನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಬೀಚ್ ಆಡಳಿತ ಮಂಡಳಿ ನಿರ್ಧರಿಸಿದೆ. ಈ ಮೂಲಕ ಪಣಂಬೂರು ಬೀಚ್ ನ್ನ ಮತ್ತಷ್ಟು ಜನಸ್ನೇಹಿಯಾಗಿಸುವ ಪ್ರಯತ್ನ ನಡೆಯುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
‘Rent a Sport’, a new concept introduced for more fun in Mangaluru’s Panambur Beach. As per this concept visitors can take bicycle, gaming and other facilities on rent to add more joy in beach.
Please Wait while comments are loading...