ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಹುಲ್ ದೇವಾಲಯ, ಚರ್ಚ್, ದರ್ಗಾ ಭೇಟಿ ಹಿಂದಿನ ಮರ್ಮವೇನು?

|
Google Oneindia Kannada News

Recommended Video

ರಾಹುಲ್ ಗಾಂಧಿಯವರ ದೇವಸ್ಥಾನ, ಚರ್ಚ್, ದರ್ಗಾ ಭೇಟಿ ಹಿಂದಿನ ರಹಸ್ಯವೇನು | Oneindia Kannada

ಮಂಗಳೂರು,ಮಾರ್ಚ್ 20: ಉತ್ತರ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಭಾಗದಲ್ಲಿ ಯಶಸ್ವೀ ಜನಾಶೀರ್ವಾದ ಯಾತ್ರೆ ನಡೆಸಿದ್ದ ಕಾಂಗ್ರೆಸ್ ಈಗ ಕರಾವಳಿಯತ್ತ ಗಮನ ಹರಿಸಿದೆ. ಕರಾವಳಿಯಲ್ಲಿ ಚುನಾವಣಾ ಪ್ರಚಾರದ ಭಾಗವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದಿನಿಂದ ಪ್ರವಾಸ ಕೈಗೊಳ್ಳಲಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

20 ಮತ್ತು 21 ರಂದು ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಮೂರನೇ ಹಂತದ ಜನಾಶಿರ್ವಾದ ಯಾತ್ರೆಯನ್ನು ಅವರು ನಡೆಸಲಿದ್ದಾರೆ. ಆದರೆ ಗಮನಿಸಬೇಕಾದ ಅಂಶ ಎಂದರೆ ಕರಾವಳಿಯಲ್ಲಿ ಮೂರೂ ಧರ್ಮಗಳು ಪ್ರಬಲವಾಗಿರುವುದರಿಂದ ದೇಗುಲ, ಚರ್ಚ್ ಮತ್ತು ದರ್ಗಾಗಳಿಗೂ ರಾಹುಲ್ ಭೇಟಿ ನೀಡಲಿದ್ದಾರೆ. ಕರಾವಳಿಯಲ್ಲಿ ಮೂರು ಧರ್ಮದ ಮತದಾರರನ್ನು ಸೆಳೆಯಲು ಈ ಭೇಟಿ ನಿಗದಿ ಮಾಡಲಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಇಂದಿನಿಂದ ಎರಡು ದಿನ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಇಂದಿನಿಂದ ಎರಡು ದಿನ ರಾಹುಲ್ ಗಾಂಧಿ ರಾಜ್ಯ ಪ್ರವಾಸ

ಎಐಸಿಸಿ ಅಧ್ಯಕ್ಷರನ್ನು ಸ್ವಾಗತಿಸಲು ಕರಾವಳಿ ಕಾಂಗ್ರೆಸ್ ಸಜ್ಜಾಗಿದೆ. ನಾಳೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ರಾಗಾ ಎರಡು ದಿನ ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಮುಂಜಾನೆ 11.15ಕ್ಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿರುವ ರಾಹುಲ್ ಗಾಂಧಿ ಅಲ್ಲಿಂದ ಉಡುಪಿ ಜಿಲ್ಲೆಯ ತೆಂಕ ಎರ್ಮಾಳ್ ಗೆ ತೆರಳಿ ಅಲ್ಲಿ ರಾಜೀವ್ ಗಾಂಧಿ ಪೊಲಿಟಿಕಲ್ ಇನ್ಸಿಟ್ಯೂಟ್ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿ ಸೇವಾದಳದ ಕಾರ್ಯಕರ್ತರನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಲಿದ್ದಾರೆ.

In Pics: ರಾಹುಲ್ ಗಾಂಧಿ ಸ್ವಾಗತಕ್ಕೆ ಸಿಂಗಾರಗೊಂಡ ಮಂಗಳೂರು

Reason behind Rahul Gandhis visit to Kudroli temple, Rosario Church and Ullala Dargha

ಬಳಿಕ ಉಡುಪಿ ಜಿಲ್ಲೆಯ ಪಡುಬಿದ್ರೆಯಲ್ಲಿ ರೋಡ್ ಶೋ ಹಾಗೂ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ನಂತರ ಸುರತ್ಕಲ್ ಮತ್ತು ಮಂಗಳೂರಿಗೆ ತೆರಳಲಿದ್ದಾರೆ.

ರಾಹುಲ್ ಗಾಂಧಿ ಕರಾವಳಿ-ಮಲೆನಾಡು ಪ್ರವಾಸದ ವೇಳಾಪಟ್ಟಿರಾಹುಲ್ ಗಾಂಧಿ ಕರಾವಳಿ-ಮಲೆನಾಡು ಪ್ರವಾಸದ ವೇಳಾಪಟ್ಟಿ

21 ರಂದು 12.25 ಕ್ಕೆ ರಾಹುಲ್ ಶೃಂಗೇರಿ ಮಠಕ್ಕೆ ತೆರಳುವ ಕಾರ್ಯಕ್ರಮವೂ ನಿಗದಿಯಾಗಿದೆ. ಇನ್ನು ಈ ನಡುವೆ ರಾಹುಲ್ ಗಾಂಧಿ ಉಡುಪಿಯ ಶ್ರೀಕೃಷ್ಣಮಠಕ್ಕೆ ಭೇಟಿ ಕೊಡುವ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದ್ದರೂ, ರಾಹುಲ್ ಗಾಂಧಿಯವರ ಅಧಿಕೃತ ಪ್ರವಾಸದ ಪಟ್ಟಿಯಲ್ಲಿ ಕೃಷ್ಣಮಠದ ಪ್ರಸ್ತಾಪ ಇಲ್ಲ. ಬದಲಾಗಿ ಮಂಗಳೂರಿನಲ್ಲಿ ಕುದ್ರೋಳಿ ದೇವಸ್ಥಾನ, ರೋಝಾರಿಯೋ ಚರ್ಚ್ ಮತ್ತು ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಲಿದ್ದಾರೆ.

Reason behind Rahul Gandhis visit to Kudroli temple, Rosario Church and Ullala Dargha

ರಾಹುಲ್ ಮಂಗಳೂರಿನ ಶ್ರೀ ಕ್ಷೇತ್ರ ಕುದ್ರೋಳಿ ಗೋಕರ್ಣನಾಥ ದೇವಾಲಯಕ್ಕೆ ಭೇಟಿ ನೀಡುವ ಮೂಲಕ ಮುನಿಸಿಕೊಂಡಿರುವ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಅವರನ್ನು ಸಂತೈಸುವ ಪ್ರಯತ್ನ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಹುಲ್ ಗಾಂಧಿ ರಾಜ್ಯ ಪ್ರವಾಸ: ಕೊನೆಗೂ ಗೆದ್ದದ್ದು ಸಿದ್ದರಾಮಯ್ಯ ಹಠ?ರಾಹುಲ್ ಗಾಂಧಿ ರಾಜ್ಯ ಪ್ರವಾಸ: ಕೊನೆಗೂ ಗೆದ್ದದ್ದು ಸಿದ್ದರಾಮಯ್ಯ ಹಠ?

ಆದರೆ ಪ್ರಶ್ನೆ ಇರುವುದು ಈ ಭೇಟಿ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಹುಲ್ ಗಾಂಧಿ ಜೊತೆಗೆ ಇರಲಿದ್ದಾರೆಯೇ ಎಂಬುದು. ಇದು ಕುತೂಹಲ ಮೂಡಿಸಿದೆ. ಏಕೆಂದರೆ ಈ ಹಿಂದೆ ಮುಖ್ಯಮಂತ್ರಿಗಳು ಮಂಗಳೂರಿಗೆ ಭೇಟಿ ನೀಡಿದಾಗ ಕುದ್ರೋಳಿ ದೇವಾಲಯಕ್ಕೆ ಭೇಟಿ ನೀಡಿರಲಿಲ್ಲ. ಈ ಕುರಿತು ಜನಾರ್ಧನ ಪೂಜಾರಿ ಹಲವಾರು ಬಾರಿ ಅಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಈ ಬಾರಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ನಡೆ ಏನಿರುತ್ತದೆ ಎಂಬುದು ಭಾರೀ ಕುತೂಹಲ ಮೂಡಿಸಿದೆ.

Reason behind Rahul Gandhis visit to Kudroli temple, Rosario Church and Ullala Dargha

ಈ ನಡುವೆ ರಾಹುಲ್ ಕರಾವಳಿ ಪ್ರವಾಸದ ಹೊತ್ತಿಗೆ ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆ ಕುರಿತ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಇದೇ ತಿಂಗಳ ಅಂತ್ಯಕ್ಕೆ ಪ್ರಮೋದ್ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ. ಹೀಗಾಗಿ ರಾಹುಲ್ ಪ್ರವಾಸದಲ್ಲಿ ಅವರು ಭಾಗವಹಿಸುವುದು ಡೌಟು ಎಂಬರ್ಥದಲ್ಲಿ ಮಾತುಗಳು ಕೇಳಿ ಬಂದಿದ್ದವು.

ಆದರೆ ಈ ವದಂತಿಯನ್ನು ಸರಾಸಗಟಾಗಿ ತಿರಸ್ಕರಿಸುವ ಪ್ರಮೋದ್, "ನಾನು ಬಿಜೆಪಿ ಸೇರ್ತೇನೆ ಅಂತ ಎಲ್ಲೂ ಹೇಳಿಲ್ಲ. ಇದೆಲ್ಲ ಸುಳ್ಳು ಪ್ರಚಾರ. ನಾಳೆ ನಾನೇ ಮುಂದೆ ನಿಂತು ರಾಹುಲ್ ಗಾಂಧಿಯವರನ್ನು ಬರಮಾಡಿಕೊಳ್ತೇನೆ," ಎಂದು ಹೇಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

English summary
The AICC president Rahul Gandhi is visiting Dakshina Kannada district on march 20. During his visit Rahul Gandhi will going to temple, church and dargha in Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X