ಬಾಳಿಗಾ ಕೊಲೆ ಪ್ರಕರಣ: ಸರ್ಕಾರಿ ವಿಶೇಷ ಅಭಿಯೋಜಕರಾಗಿ ರವೀಂದ್ರನಾಥ್

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಡಿಸೆಂಬರ್. 24 : ಮಾರ್ಚ್ 21 ರಂದು ನಡೆದ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ವಿಶೇಷ ಅಭಿಯೋಜಕರನ್ನಾಗಿ ನ್ಯಾಯವಾದಿ ರವೀಂದ್ರನಾಥ್ ಕಾಮತ್‌ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ವಿನಾಯಕ ಬಾಳಿಗ ಕೊಲೆ ನಡೆದು 8 ತಿಂಗಳಾದರೂ ಸಮಗ್ರ ತನಿಖೆಯಾಗದ ಕಾರಣ ರವೀಂದ್ರನಾಥ್ ಕಾಮತ್‌ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ರಾಜ್ಯ ಸರ್ಕಾರ ನೇಮಕ ಮಾಡಿದೆ ಎಂದು ತಿಳಿದು ಬಂದಿದೆ. [ವಿನಾಯಕ್ ಬಾಳಿಗ ಕೊಲೆ ಆರೋಪಿ ನರೇಶ್ ಶೆಣೈ ಶರಣು]

ಮಾರ್ಚ್ 21 ರಂದು ನಡೆದ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯವಾದಿ ರವೀಂದ್ರನಾಥ್ ಕಾಮತ್‌ ಅವರನ್ನು ಸರ್ಕಾರಿ ವಿಶೇಷ ಅಭಿಯೋಜಕರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

51 ವರ್ಷದ ವಿನಾಯಕ ಪಿ. ಬಾಳಿಗಾ ಅವರನ್ನು 2016 ಮಾರ್ಚ್‌ 21ರ ಬೆಳಗ್ಗೆ ನಗರದ ಕೊಡಿಯಾಲ್ ಬೈಲ್ ನ ಬೆಸೆಂಟ್ ಸ್ಕೂಲ್‌ 2 ನೇ ಲೇನ್ ಸ್ಟರ್ಲಿಂಗ್‌ ಚೇಂಬರ್‌ ಹಿಂಬದಿ ರಸ್ತೆಯಲ್ಲಿ ಅವರ ಮನೆ ಸಮೀಪ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. [RTI ಬಾಳಿಗಾ ಕೊಲೆ ಪ್ರಕರಣ: ಜಿ ಎಸ್ ಬಿ ಸಮಾಜದ ಸ್ಪಷ್ಟನೆ]

ಮಾರಬರ್ಕೆ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The State government has appointed N. Ravindranath Kamath as the special public prosecutor in the murder of RTI activist Vinayak Baliga.
Please Wait while comments are loading...