ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೆಪ್ಟಂಬರ್ 2, 3 ರಂದು ರಾಷ್ಟ್ರೀಯ ಮಟ್ಟದ ಧರ್ಮ ಸಂಸತ್ ಸಮಾವೇಶ

|
Google Oneindia Kannada News

ಮಂಗಳೂರು, ಆಗಸ್ಟ್ 29: ಇದೇ ಬರುವ ಸೆಪ್ಟೆಂಬರ್ 2 ಮತ್ತು 3 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟದ ಧರ್ಮ ಸಂಸತ್ ಸಮಾವೇಶ ಅಯೋಜಿಸಲಾಗಿದೆ. ಈ ಧರ್ಮ ಸಂಸದ್ ಸಮಾವೇಶಕ್ಕೆ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮುಂತಾದ ಗಣ್ಯರನ್ನು ಆಹ್ವಾನಿಸಲಾಗಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮತ್ತಿತರರು ಧರ್ಮಸಂಸದ್ ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ.

ನವೆಂಬರ್‌ನಲ್ಲಿ ದಕ್ಷಿಣ ಭಾರತ ಭಾಷೆಗಳ 'ದ್ರಾವಿಡ ಭಾಷಾ ಸಮಾವೇಶ'ನವೆಂಬರ್‌ನಲ್ಲಿ ದಕ್ಷಿಣ ಭಾರತ ಭಾಷೆಗಳ 'ದ್ರಾವಿಡ ಭಾಷಾ ಸಮಾವೇಶ'

ನೇಪಾಳ, ಬದರಿ, ಕೇದಾರ, ಗಂಗೋತ್ರಿ, ನೇಮಿಶಾರಣ್ಯ, ಚಿತ್ರಕೂಟ, ಉಜ್ಜಯಿನಿ, ಅಲಹಾಬಾದ್, ನಾಸಿಕ್, ರಾಮೇಶ್ವರ, ಅಸ್ಸಾಂ, ಕೇರಳ, ತಮಿಳುನಾಡು ಸೇರಿದಂತೆ ದೇಶ ವಿವಿಧ ಭಾಗಗಳಿಂದ ಸುಮಾರು 2 ಸಾವಿರಕ್ಕೂ ಹೆಚ್ಚು ಸಾಧು ಸಂತರು ಈ ಧರ್ಮ ಸಂಸದ್ ನಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.

Rashtriya Dharma Samsad organised in Kanyadi

ರಾಷ್ಟ್ರಮಟ್ಟದಲ್ಲಿ ಎಲ್ಲಾ ಅಖಾಡಗಳು, ನಾಗಾ ಸಾಧುಗಳು, ಸೀತಾರಾಮ ಪರಂಪರೆ, ನಾಥ ಪಂಥ, ತ್ಯಾಗಿ, ಬೈರಾಗಿ ಇತ್ಯಾದಿ ಸನಾತನ ಹಿಂದು ಧರ್ಮದ ಪರಂಪರೆಗಳ ಆಚಾರ್ಯರನ್ನು, ಮಹಾಂತರನ್ನು ಒಟ್ಟು ಗೂಡಿಸಿ ರಾಷ್ಟ್ರೀಯ ಲೋಕ ಕಲ್ಯಾಣ ಮಂಚ್ ಸ್ಥಾಪಿಸುವ ಗುರಿ ಈ ಸಂಸದ್ ಮೂಲಕ ಹೊಂದಲಾಗಿದೆ.

ಹಿಂದೂ ಧರ್ಮ ಮತ್ತು ಹಿಂದುತ್ವ : ಒಂದು ಮಂಥನ

ದೇಶದಲ್ಲಿ ಮುಂದಿನ 10 ವರ್ಷದೊಳಗೆ ಪ್ರತಿ ಹಳ್ಳಿಗಳಲ್ಲಿ ಗುರುಕುಲ ಮಾದರಿ ಅಂಗನವಾಡಿ ವಿದ್ಯಾಸಂಸ್ಥೆಯ ಸ್ಥಾಪನೆ, ಪ್ರಾಥಮಿಕ ಶಾಲೆಯಿಂದ ಕಾಲೇಜು ತನಕ ಪಠ್ಯಗಳಲ್ಲಿ ದೇಶದ ನೈಜ್ಯ ಇತಿಹಾಸ, ಪರಂಪರೆ, ಶ್ರೇಷ್ಠ ಮಾನವ ಧರ್ಮ, ಸನಾತನ ಹಿಂದು ಧರ್ಮದ ಮಹತ್ವಗಳನ್ನು ಸೇರ್ಪಡೆಗೊಳಿಸುವುದು.

ಹಿಂದೂ ಧರ್ಮ ಅಂದ್ರೆ; ಜೀವನ ರೀತಿ, ಜೀವನ ಪ್ರೀತಿ!

ತೀರ್ಥ ಕ್ಷೇತ್ರ ತಿರುಗಾಡುವ ಸಂತರು, ವಯೋವೃದ್ಧ ಸಂತರ ಜೀವನಕ್ಕೆ ಭದ್ರತೆ ಒದಗಿಸಿ ಇವರ ಸಮಸ್ಯೆಗಳನ್ನು ಪರಿಹರಿಸುವುದು. ಲೋಕ ಕಲ್ಯಾಣ ಮಂಚ್ ಸಭೆ ಕಾಲಕ್ಕೆ, ವಿಷಯಕ್ಕೆ ಅನುಸಾರವಾಗಿ ವರ್ಷಕ್ಕೆ ಮೂರು ಬಾರಿ ನಡೆದು ಲೋಕ ಕಲ್ಯಾಣದ ಬಗ್ಗೆ ನಿರ್ಣಯ ಕೈಗೊಳ್ಳಲಿದೆ.

English summary
Rashtriya Dharma Samsad will be held at kanyadi Srirama Kshetra near Dharmasthala in Dakshina kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X