ಮಂಜೇಶ್ವರದಲ್ಲಿ ಜ. 19ರಂದು ಡಾ. ಗೋವಿಂದಪೈ ಸ್ಮಾರಕ ಉದ್ಘಾಟನೆ

Posted By:
Subscribe to Oneindia Kannada

ಬೆಂಗಳೂರು, ಜನವರಿ 17: ಜನವರಿ 19 ರಂದು ಮಂಜೇಶ್ವರದಲ್ಲಿ ಡಾ: ಗೋವಿಂದಪೈ ಸ್ಮಾರಕ ಉದ್ಘಾಟನೆ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಎಂ. ವೀರಪ್ಪಮೊಯಿಲಿ ಅವರು ಹೇಳಿದ್ದಾರೆ.

ಗೋವಿಂದ ಪೈ ಹೆಸರನ್ನು ಅಜರಾಮರಗೊಳಿಸುವ ನಿಟ್ಟಿನಲ್ಲಿ ಅವರ ಹೆಸರಿನಲ್ಲಿ ಸ್ಮಾರಕ ಟ್ರಸ್ಟ್ ಸ್ಥಾಪಿಸಲಾಗಿದೆ. ಗಿಳಿವಿಂಡುವಿನಲ್ಲಿ ಟ್ರಸ್ಟ್ ಯೋಜನೆಗಳು ಜನವರಿ 19 ರಂದು ಲೋಕಾರ್ಪಣೆಗೊಳ್ಳಲಿವೆ.

ಈ ಯೋಜನೆಗೆ ಕರ್ನಾಟಕ ಮುಖ್ಯಮಂತ್ರಿಗಳು ಈಗಾಗಲೇ 1 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದಾರೆ ಇನ್ನೂ 1 ಕೋಟಿ ರೂ. ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಕೇರಳ ಸರ್ಕಾರ ಕೂಡ 1 ಕೋಟಿ ರೂ. ನೀಡುವುದಾಗಿ ಭರವಸೆ ನೀಡಿದೆ. ಅದರಲ್ಲಿ 50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ.

Rashtrakavi M Govinda Pai memorial to be inaugurated Jan 19 : Moily

ಕೇರಳ ಹಾಗೂ ಕರ್ನಾಟಕ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ವೀರಪ್ಪಮೊಯಿಲಿ. ಗೋವಿಂದ ಪೈ ಅವರ ವಾಸಸ್ಥಾನ-ಪುನಶ್ಚೇತನ, ಯಕ್ಷಗಾನ ವೇದಿಕೆ ನಿರ್ಮಾಣ ಆಗಿದೆ.

ಗೋವಿಂದ ಪೈ ಅವರ ಪ್ರತಿಮೆ ಅನಾವರಣ. ಗೋವಿಂದ ಪೈ ಸಾಂಸ್ಕøತಿಕ ಕೇಂದ್ರವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು. ಭವನಿಕಾ ರಂಗಮಂದಿರವನ್ನು ಮುಖ್ಯಮಂತ್ರಿ ಉದ್ಘಾಟನೆ ಮಾಡುವರು. ಗೋವಿಂದ ಪೈ ಪ್ರತಿಯನ್ನು ಶ್ರೀಮತಿ ಉಮಾಶ್ರೀ ಅನಾವರಣಾಗೊಳಿಸುವರು.

ಗಿಳಿವಿಂಡು ಯಕ್ಷದೇಗುಲ ಉದ್ಘಾಟನೆ ಗೋವಿಂದ ಪೈ ಜನ್ಮಸ್ಥಳವನ್ನು ರಾಷ್ಟ್ರದ ಸಾಹಿತ್ಯಾಕ್ಷರಿಗೆ ಹಾಗೂ ಯಾತ್ರಿಕರಿಗೆ ಆಕರ್ಷಕ ಸ್ಥಳವನ್ನಾಗಿ ಮಾಡುವುದು ಪ್ರಮುಖ ಉದ್ದೇಶವಾಗಿದೆ. ಈ ಟ್ರಸ್ಟ್‍ಗೆ ಈಗಾಗಲೇ ಡಾ: ಕೆ. ಕಮಾಲಾಕ್ಷ ಎಂಬುವವರನ್ನು ನಿರ್ದೇಶಕರನ್ನಾಗಿ ಮಾಡಲಾಗಿದೆ ಎಂದು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rashtrakavi M Govinda Pai memorial -‘Gilivindu’ was a joint project of the Karnataka and Kerala governments and was headed by a Trust. The project was named after a collection of poems by Govinda Pai.
Please Wait while comments are loading...