ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ, ಕಾಮುಕನಿಗೆ ಬಿತ್ತು ಗೂಸ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜನವರಿ. 13 : ಕಾಲೇಜ್ ವಿದ್ಯಾರ್ಥಿನಿಯೋರ್ವಳು ಒಂಟಿಯಾಗಿರುವುದನ್ನು ಗಮನಿಸಿ ಹಿಂದಿನಿಂದ ಆಕೆಯ ಬಾಯಿ ಮುಚ್ಚಿ ಶೌಚಾಲಯಕ್ಕೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣ ಕಾಸರಗೋಡಿನ ಬದಿಯಡ್ಕದಲ್ಲಿ ನಡೆದಿದೆ.

ಗಲ್ಫ್ ಉದ್ಯೋಗಿ ಸಿದ್ಧಿಕ್(32) ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ. ವಿದ್ಯಾರ್ಥಿನಿಯೋರ್ವಳುಕಾಲೇಜ್ ಮುಗಿಸಿಸಕೊಂಡು ಒಂಟಿಯಾಗಿ ನಿಂತಿರುವುದನ್ನು ಗಮನಿಸಿ ಸಿದ್ಧಿಕ್ ಆಕೆಯನ್ನು ಶೌಚಾಲಯಕ್ಕೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಈ ವೇಳೆ ಆಕೆ ಕಿರಿಚಿದ್ದಾಳೆ. ಇದನ್ನು ಗಮನಿಸಿದ ಸಾರ್ವಜನಿಕರು ಕಾಮುಕನನ್ನು ಹಿಡಿದು ಥಳಿಸಿ ಪೊಲೀಸರಿಗೆ ನೀಡಿದ್ದಾರೆ.

Rape attempt on PUC girl at Kasargod, accused arrested

ಆರೋಪಿ ಸಿದ್ಧಿಕ್ ಸಾರ್ವಜನಿಕರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಂಪೌಂಡ್ ಗೊಡೆ ಜಿಗಿದರೂ ಬಿಡದೇ ಬೆನ್ನಟ್ಟಿದ ನಾಗರಿಕರು ಆತನನ್ನು ಹಿಡಿದಿದ್ದಾರೆ.

ಬಾಲಕಿಯ ತಂದೆ ಅಧ್ಯಾಪಕರಾಗಿದ್ದು, ಅವರ ಬೈಕಿನಲ್ಲಿ ಪ್ರತಿ ಸಂಜೆ ಮನೆಗೆ ತೆರಳುತ್ತಿದ್ದಳು. ಸ್ಟಾಫ್ ಮೀಟಿಂಗ್ ಇರುವುದರಿಂದ ಕಾಲೇಜ್ ಬಿಟ್ಟ ಬಳಿಕ ಕೊಂಚ ಹೊತ್ತು ಕಾಯುವಂತೆ ತಂದೆ ಮಗಳಿಗೆ ತಿಳಿಸಿದ್ದರು.

ಬಾಲಕಿ ತಂದೆಗೆ ಕಾಯುತ್ತಿದ್ದಾಗ ಒಂಟಿಯಾಗಿದ್ದನ್ನು ಗಮನಿಸಿದ ಕೀಚಕ ಸಿದ್ಧಿಕ್ ಆಕೆಯನ್ನು ಟಾಯ್ಲೆಟ್ ಕೋಣೆಗೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದಾಗ ಆಕೆ ಚೀರಿಕೊಂಡಿದ್ದಳು. ಬಾಲಕಿಯ ಆಕ್ರಂದನ ಕೇಳಿದ ನಾಗರಿಕರು ಬಾಲಕಿಯನ್ನು ರಕ್ಷಿಸಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rape attempt on PUC girl has taken place at Kasargod. The locals have caught the culprit and handed over him to the police.
Please Wait while comments are loading...