ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ರಂಜಾನ್ ಸಂಭ್ರಮ: ದರ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು ಜೂನ್ 15 : ಕರಾವಳಿಯಲ್ಲಿ ಇಂದು ರಂಜಾನ್ ಹಬ್ಬದ ಸಂಭ್ರಮ. ಇಂದು ಮುಂಜಾನೆಯಿಂದಲೇ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯಲ್ಲಿ ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬದ ಸಂಭ್ರಮ ಆರಂಭಗೊಂಡಿದೆ.

ಇಂದು ಮುಂಜಾನೆ ಮಂಗಳೂರಿನ ವಿವಿಧ ದರ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿದರು.

ಎಲ್ಲೆಡೆ ಈದ್ ಸಡಗರ: ದಾನದ ಹಬ್ಬದ ಮಹತ್ವವೇನು ಗೊತ್ತೆ? ಎಲ್ಲೆಡೆ ಈದ್ ಸಡಗರ: ದಾನದ ಹಬ್ಬದ ಮಹತ್ವವೇನು ಗೊತ್ತೆ?

ಇಂದು ಬೆಳ್ಳಂಬೆಳಗ್ಗೆ ನಗರದ ಬಾವುಟಾ ಗಡ್ಡದಲ್ಲಿರುವ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ರಂಜಾನ್ ವಿಶೇಷ ಈದ್‌ ಪ್ರಾರ್ಥನೆ ಸಲ್ಲಿಸಿದರು. ಸಾಮೂಹಿಕ ಪ್ರಾರ್ಥನೆಯ ಬಳಿಕ ಶುಭಾಶಯ ವಿನಿಮಯ ಮಾಡಿಕೊಂಡರು.

Ramzan celebration in Mangaluru

ಒಂದು ತಿಂಗಳಿನಿಂದ ಕಠಿಣ ವ್ರತ ಆಚರಿಸಿದ ಬಳಿಕ ಇಂದು ಉಪವಾಸ ಅಂತ್ಯಗೊಂಡಿದ್ದು, ರಂಜಾನ್ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ.

ಇಂದು ಮಂಗಳೂರಿನ ವಿಶೇಷ ಸಾಮೂಹಿಕ ಪ್ರಾರ್ಥನೆಯಲ್ಲಿ ಸಾವಿರಾರು ಮುಸ್ಲಿಂ ಬಾಂಧವರರೊಂದಿಗೆ ಸಚಿವ ಯು.ಟಿ ಖಾದರ್ , ಜೆಡಿಎಸ್ ಮುಖಂಡ ಆಶ್ರಫ್ , ಮಸೂದ್ ಸೇರಿದಂತೆ ಇನ್ನಿತರ ಮುಸ್ಲಿಂ ಮುಖಂಡರು ಪಾಲ್ಗೊಂಡಿದ್ದರು. ಪ್ರಾರ್ಥನೆಯ ಬಳಿಕ ಶುಭಾಶಯ ಕೋರಿದರು.

ಸೌದಿ ಅರೇಬಿಯಾದಲ್ಲಿ ಪವಿತ್ರ ಹಬ್ಬ ರಂಜಾನ್ ಹೇಗೆ ಆಚರಿಸುತ್ತಾರೆ? ಸೌದಿ ಅರೇಬಿಯಾದಲ್ಲಿ ಪವಿತ್ರ ಹಬ್ಬ ರಂಜಾನ್ ಹೇಗೆ ಆಚರಿಸುತ್ತಾರೆ?

ನಿನ್ನೆ ಕೇರಳದ ಕ್ಯಾಲಿಕಟ್ ನಲ್ಲಿ‌ ಚಂದ್ರ ದರ್ಶನವಾದ ಹಿನ್ನಲೆ ಇಂದು ರಂಜಾನ್ ಆಚರಣೆಗೆ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಕರೆನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಕರಾವಳಿಯಲ್ಲಿ ಸಂಭ್ರಮದಿಂದ ರಂಜಾನ್ ಆಚರಿಲಾಗುತ್ತಿದೆ.

English summary
Ramzan celebration in coastal town Mangaluru. Muslims all over the city gathered at Idgah maidan at light house hill to offer the special Ramzan namaz.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X