ಮುಂದಿನ ಚುನಾವಣೆ ನಂತರ ರಮಾನಾಥ ರೈ ಶಾಶ್ವತ ವಿಶ್ರಾಂತಿ - ಸದಾನಂದ ಗೌಡ

Posted By:
Subscribe to Oneindia Kannada

ಮಂಗಳೂರು, ಜುಲೈ 13: "ಬಂಟ್ವಾಳ ಕ್ಷೇತ್ರ ದಲ್ಲಿ ಚುನಾವಣೆಗೆ ನಿಂತು ಗೆಲ್ಲುವಂತೆ ರಮಾನಾಥ್ ರೈ ನನಗೆ ಸವಾಲು ಹಾಕಿದ್ದಾರೆ. ರಮಾನಾಥ್ ರೈ ಸವಾಲು ಸ್ವೀಕರಿಸಿದ್ದೇನೆ. ಮೂರು ದಿನ ಬಂಟ್ವಾಳ ಕ್ಷೇತ್ರದಲ್ಲಿ ವಿಸ್ತಾರಕನಾಗಿ ಕೆಲಸ ಮಾಡಲಿದ್ದೇನೆ. ಕಾರ್ಯಕರ್ತರ ಜೊತೆ ಸಭೆ ನಡೆಸಲಿದ್ದೇನೆ. ಮುಂದಿನ ಚುನಾವಣೆಯಲ್ಲಿ ಸಾಮಾನ್ಯ ಕಾರ್ಯಕರ್ತ ನನ್ನು ಚುನಾವಣೆಗೆ ನಿಲ್ಲಿಸುತ್ತೇನೆ. ರೈ ವಿರುದ್ದ ಗೆಲ್ಲಿಸಿ ತೋರಿಸುತ್ತೇನೆ," ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿಕೆ ನೀಡಿದರು.

ಇಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, "ಮೊದಲೇ ರಮಾನಾಥ್ ರೈ ಆರೋಗ್ಯ ಸರಿಯಿಲ್ಲ. ರಮಾನಾಥ್ ರೈ ಗೆ ವಯಸ್ಸಾಗಿದೆ. ಅವರಿಗೆ ವಿಶ್ರಾಂತಿ ಬೇಕಾಗಿದೆ. ಮುಂದಿನ ಚುನಾವಣೆಯ ನಂತರ ಶಾಶ್ವತ ವಾಗಿ ವಿಶ್ರಾಂತಿ ನೀಡಲಿದ್ದೇವೆ," ಎಂದು ಅಪಹಾಸ್ಯ ಮಾಡಿದರು.

 Ramanath Rai is too old, let him have good rest at home - D V Sadananda Gowda

ಇನ್ನು, "ಇಂದು ಉಸ್ತುವಾರಿ ಸಚಿವ ರಮಾನಾಥ ರೈ ಅವರ ನೇತೃತ್ವದಲ್ಲಿ ನಡೆಯಲಿರುವ ಶಾಂತಿ ಸಭೆ ಕೇವಲ ಕಾಂಗ್ರೆಸ್ ಕಾರ್ಯಕರ್ತರ ಸಭೆ ಮತ್ತು ರಮಾನಾಥ್ ರೈ ಬೆಂಬಲಿಗರ ಸಭೆ. ಹಿಂದೂ ಸಂಘಟನೆಗಳಿಗೆ ಶಾಂತಿ ಸಭೆಗೆ ಅಹ್ವಾನವಿಲ್ಲ.ಎಸ್.ಡಿ.ಪಿ.ಐ ಮತ್ತು ಪಿಎಫ್ಐ ಸಂಘಟನೆಗಳಿಗೆ ಅಹ್ವಾನ ನೀಡಲಾಗಿದೆ. ಇಂತಹ ಶಾಂತಿ ಸಭೆ ನಮಗೆ ಅಗತ್ಯ ಇಲ್ಲ," ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
"Ramanath Rai is too old now, let him have good rest at home. He's too old to contest," mocked Union Minister D V Sadananda Gowda here in Mangaluru at the International Airport on July 13.
Please Wait while comments are loading...