ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಮಾನಾಥ್ ರೈ ಹಳೇ ಹಿಂದಿ ಹಾಡು ಕೇಳಿ ಫಿದಾ ಆದ ಬಂಟ್ವಾಳ ಜನ

|
Google Oneindia Kannada News

Recommended Video

ಹಾಡಿನ ಮೂಲಕ ರಂಜಿಸಿದ ಮಾಜಿಸ ಸಚಿವ ರಮಾನಾಥ್ ರೈ | Oneindia Kannada

ಮಂಗಳೂರು, ಸೆಪ್ಟೆಂಬರ್ 17: ಸದಾ ಸಕ್ರೀಯ ರಾಜಕೀಯ ಚಟುವಟಿಕೆ, ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದ ಮಾಜಿ ಸಚಿವ ರಮಾನಾಥ್ ರೈ ಈ ಬಾರಿ ಕಾರ್ಯಕ್ರಮವೊಂದರಲ್ಲಿ ಸುಶ್ರಾವ್ಯವಾಗಿ ಹಳೆ ಹಿಂದಿ ಚಿತ್ರಗೀತೆಯೊಂದನ್ನು ಹಾಡಿ ಜನರನ್ನು ರಂಜಿಸುವ ಮೂಲಕ ಸುದ್ದಿಯಲ್ಲಿದ್ದಾರೆ.

ರಮಾನಾಥ್ ರೈ ರಾಜಕಾರಣದಿಂದ ಬಿಡುವು ಪಡೆದುಕೊಳ್ಳುವುದು ಬಲು ಅಪರೂಪ ಅಂತಾನೇ ಹೇಳಬಹುದು. ವಿದ್ಯಾರ್ಥಿ ಜೀವನದ ದಿನಗಳಲ್ಲಿ ರೈ ಖ್ಯಾತ ಕ್ರೀಡಾಪಟು ಆಗಿದ್ದರು. ಅದಲ್ಲದೇ ಸಂಗೀತ ಪ್ರೇಮಿ ಕೂಡ. ಕಾಲೇಜು ದಿನಗಳಲ್ಲಿ ಸ್ಟೇಜ್ ಮೇಲೆ ಸುಶ್ರಾವ್ಯವಾಗಿ ಹಾಡುತ್ತಿದ್ದರು.

ಮಂಗಳೂರಿನಲ್ಲಿ ರಮಾನಾಥ್ ರೈ ಪತ್ರಕರ್ತರನ್ನು ಅಪ್ಪಿಕೊಂಡಿದ್ದೇಕೆ ?ಮಂಗಳೂರಿನಲ್ಲಿ ರಮಾನಾಥ್ ರೈ ಪತ್ರಕರ್ತರನ್ನು ಅಪ್ಪಿಕೊಂಡಿದ್ದೇಕೆ ?

ಬಂಟ್ವಾಳದಲ್ಲಿ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದ ರಮಾನಾಥ್ ರೈ ತಮ್ಮ ವಿದ್ಯಾರ್ಥಿ ಜೀವನದ ಮೆಲುಕು ಹಾಕಿದರು. ಮಾತ್ರವಲ್ಲದೇ ತಮ್ಮ ಅಚ್ಚುಮೆಚ್ಚಿನ ಹಳೆ ಹಿಂದಿ ಚಿತ್ರದ ಹಾಡೊಂದನ್ನು ಹಾಡಿ ನೆರೆದವರನ್ನು ರಂಜಿಸಿದರು. ಇದೀಗ ರೈ ಅವರ ಹಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಶ್ಲಾಘನೆ ವ್ಯಕ್ತವಾಗಿದೆ.

Ramanath Rai in Jakribettu Ganeshotsava

ಬರ್‌ಸಾತ್ ಚಿತ್ರದ ಜಿಂದಗಿ 'ಬರ್ ನಹೀ ಬೂಲೆಗೀ ಓ ಬರ್‌ಸಾತ್ ಕೀ ರಾತ್. ಏಕ್ ಹಸೀನಾಸೆ ಮುಲಾಕಾತ್ ಕೀ ರಾತ್...ಹಾಡನ್ನು ರೈ ಸುಶ್ರಾವ್ಯವಾಗಿ ಹಾಡಿದ್ದಾರೆ. ಅದಲ್ಲದೇ ತುಳುವಿನಲ್ಲಿ ಮೋಕೆದ ಸಿಂಗಾರಿ. ಉಂತುದೆ ವೈಯ್ಯಾರಿ ಹಾಡನ್ನು ಕಲಾವಿದನ‌ ಜತೆ ಹಾಡುವ ಮೂಲಕ ಜನರ ಹುಬ್ಬೇರಿಸುವಂತೆ ಮಾಡಿ ಚಪ್ಪಾಳೆಯ ಸುರಿಮಳೆ ಗಿಟ್ಟಿಸಿಕೊಂಡಿದ್ದಾರೆ.

ಮಂಗಳೂರಿನ ಆರ್ ಎಸ್ ಎಸ್ ಶಕ್ತಿ ಕೇಂದ್ರದಲ್ಲಿ ಏಕದಂತನಿಗೆ ಪೂಜೆ ಸಲ್ಲಿಸಿದ ಕ್ರೈಸ್ತ ಧರ್ಮಗುರು, ಭಗಿನಿಯರುಮಂಗಳೂರಿನ ಆರ್ ಎಸ್ ಎಸ್ ಶಕ್ತಿ ಕೇಂದ್ರದಲ್ಲಿ ಏಕದಂತನಿಗೆ ಪೂಜೆ ಸಲ್ಲಿಸಿದ ಕ್ರೈಸ್ತ ಧರ್ಮಗುರು, ಭಗಿನಿಯರು

ಕಳೆದ ಬಾರಿಯೂ ಜಕ್ರಿಬೆಟ್ಟುವಿನಲ್ಲಿ ನಡೆದಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಹಾಡಿ ತನ್ನಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿದ್ದ ರಮಾನಾಥ್ ರೈ ಈ ಬಾರಿಯೂ ಪಾಲ್ಗೊಂಡಿದ್ದರು . ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡ ಬಳಿಕ ಸಾಕಷ್ಟು ಡಲ್ ಆಗಿದ್ದ ರಮಾನಾಥ ರೈ ಇದೀಗ ಲೋಕಸಭಾ ಚುನಾವಣೆಯತ್ತ ಗಮನ ಹರಿಸಿದ್ದಾರೆ.

Ramanath Rai in Jakribettu Ganeshotsava

ಇದಕ್ಕಾಗಿ ಪ್ರತೀ ಕಾರ್ಯಕ್ರಮಗಳಿಗೆ ತೆರಳಿ ಜನರೊಂದಿಗೆ ಬೆರೆಯುತ್ತಿರುವ ರೈ, ಈ ಬಾರಿ ಲೋಕಸಭಾ ಚುನಾವಣೆಯ ಟಿಕೆಟ್ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಿ ಹೊಸ ಇನ್ನಿಂಗ್ಸ್ ಆರಂಭಿಸುವ ಇರಾದೆ ಹೊಂದಿದ್ದಾರೆ.

English summary
Former Minister Ramanath Rai attended Sarvajanika Ganeshotsava programe in Jakribettu at Bantwal. He sung his fevourite old Hindi film song.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X