ವೈರಲ್ ಆಯ್ತು ಅರಣ್ಯ ಸಚಿವ ರಮಾನಾಥ್ ರೈ ಡ್ಯಾನ್ಸ್

Posted By:
Subscribe to Oneindia Kannada
   Ramanath Rai And Oscar Fernandes Dance Dance | Oneindia Kannada

   ಮಂಗಳೂರು, ಆಗಸ್ಟ್ 28: ದ.ಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಬಂಟ್ವಾಳದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುವ ಮೂಲಕ ಗಣೇಶೋತ್ಸವ ಸಂಭ್ರಮಕ್ಕೆ ಕಳೆ ಹೆಚ್ಚಿಸಿದರು.

   ಹೌದು ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಜಕ್ರಿಬೆಟ್ಟುವಿನಲ್ಲಿ ನಡೆಯುತ್ತಿರುವ 14 ನೇ ವರ್ಷದ ಗಣೇಶೋತ್ಸವದಲ್ಲಿ ಪಾಲ್ಗೊಂಡ ಸಚಿವರು ಡ್ಯಾನ್ಸ್ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಹಾಗೂ ಇಲ್ಲಿನ ಗಣೇಶೊತ್ಸವದ ಗೌರವಧ್ಯಕ್ಷರು ಅಗಿರುವ ಸಚಿವ ರಮಾನಥ ರೈ ಮತ್ತು ಇವರ ನೇತೃತ್ವದಲ್ಲಿ ಗಣೇಶೊತ್ಸವ ನಡೆಯುತ್ತಿದೆ ಎನ್ನುವುದು ಮತ್ತೊಂದು ವಿಶೇಷ.

   Ramanath Rai dance video goes viral on social media

   ಬೆಂಗಳೂರಿನ ಜ್ಯೂನಿಯರ್ ರಾಜ್ ಕುಮಾರ್ ಖ್ಯಾತಿಯ ಅಶೋಕ್ ಭಸ್ತಿ ಬಳಗದಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದರು ಡಾ. ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಉಪೇಂದ್ರ ಮತ್ತು ದುನಿಯ ವಿಜಯ್ ರನ್ನು ಹೋಲುವ ನಾಲ್ಕು ಕಲಾವಿದರೊಂದಿಗೆ ಹೆಜ್ಜೆ ಹಾಕಿದ್ದು ವಿಶೇಷ. ಬ್ಯುಸಿಯಾಗಿರುವ ಸಚಿವರ ಲವಲವಿಕೆ ಇದೀಗ ಮನೆ ಮಾತಾಗಿದೆ.

   ಇನ್ನು ಕಳೆದ ವಾರವಷ್ಟೇ ಉಡುಪಿಯಲ್ಲಿ ಗಣೇಶ ಚತುರ್ಥಿಯ ಪ್ರಯುತ ಶುಭಾಶಯ ತಿಳಿಸಲು ಆಗಮಿಸಿದ ಮಾಜಿ ಕೇಂದ್ರ ಸಚಿವ ಹಾಗೂ ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿರುವ ಆಸ್ಕರ್ ಫೆರ್ನಾಂಡಿಸ್ ಕೂಡ ಹುಲಿವೇಷ ತಂಡದೊಂದಿಗೆ ಹೆಜ್ಜೆ ಹಾಕಿ ನರ್ತಿಸಿ ಸಂಭ್ರಮಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.

   Ramanath Rai dance video goes viral on social media

   ರೈಗಳ ಈ ಡ್ಯಾನ್ಸಿಂಗ್ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಆಸ್ಕರ್ ಫರ್ನಾಂಡೀಸ್ ಮಾತ್ರ ಅಲ್ಲ ರೈಗಳು ಕೂಡ ಒಂದು ಒಳ್ಳೆ ಡ್ಯಾನ್ಸರ್ ಎಂಬುದು ಅವರ ಸಹಪಾಠಿಗಳ ಮಾತು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Karnataka Forest Ramanath Rai's dance video during Ganeshotsav at Bantwal goes viral on social Media.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ