ರಂಜಾನ್ ಸ್ಪೆಷಲ್: ಮಂಗಳೂರು ಮಾರುಕಟ್ಟೆಯಲ್ಲಿ 50 ಬಗೆಯ ಖರ್ಜೂರಗಳು

Posted By:
Subscribe to Oneindia Kannada

ಮಂಗಳೂರು, ಜೂನ್ 14: ಮುಸ್ಲಿಂ ಭಾಂದವರಿಗೆ ಈಗ ಪವಿತ್ರ ರಂಜಾನ್ ಸಂಭ್ರಮ. ತಿಂಗಳ ಕಾಲ ರೋಜಾ ವಿಶೇಷ ಉಪವಾಸ ಆಚರಣೆಯನ್ನು ಮುಸ್ಲಿಂ ಭಾಂದವರು ಶ್ರದ್ಧಾ, ಭಕ್ತಿಯಿಂದ ಆಚರಿಸುವರು.

ಈ ಹಿನ್ನಲೆಯಲ್ಲಿ ಮಂಗಳೂರು ಮಾರುಕಟ್ಟೆಗೆ ವಿಶೇಷ ಖರ್ಜೂರ ಮತ್ತು ಹಣ್ಣುಗಳು ಬಂದಿವೆ. ಮುಸ್ಲಿಂ ಸಮುದಾಯದ ಪವಿತ್ರ ತಿಂಗಳು ರಂಜಾನಿನಲ್ಲಿ ದಿನದ ಉಪವಾಸದ ಕೊನೆಯಲ್ಲಿ ಸೇವಿಸುವ ಶಕ್ತಿವರ್ಧಕ ಹಣ್ಣು ಖರ್ಜೂರ. ಇದೀಗ ಖರ್ಜೂರ ನಗರದಲ್ಲಿ ಗ್ರಾಹಕರಿಗೆ ಸಾಕಷ್ಟು ಲಭ್ಯವಿದೆ.

ರಂಜಾನ್: ಉಪವಾಸ ವ್ರತಕ್ಕೆ ಯಾರ್ಯಾರಿಗಿದೆ ವಿನಾಯಿತಿ?

ಮಂಗಳೂರು ಮಾರುಕಟ್ಟೆಗೆ ಜಗತ್ತಿನಾದ್ಯಂತದ ದೊರೆಯುವ ಹೆಚ್ಚುಕಡಿಮೆ 50 ವಿಧದ ಬಗೆಯ ಖರ್ಜೂರಗಳು ಬಂದಿವೆ. ಇವುಗಳಲ್ಲಿ ಹೆಚ್ಚಿನ ಮೌಲ್ಯದ ಖರ್ಜೂರದತ್ತ ಗ್ರಾಹಕರ ಒಲವು ಹೆಚ್ಚಿದೆ ಎಂಬುದು ವ್ಯಾಪಾರಿಗಳ ಅಭಿಪ್ರಾಯ.

 600ರಲ್ಲಿ 50 ಮಂಗಳೂರಿನಲ್ಲಿ

600ರಲ್ಲಿ 50 ಮಂಗಳೂರಿನಲ್ಲಿ

ಖರ್ಜೂರ ಹಣ್ಣುಗಳಲ್ಲಿ ವಿಶ್ವದಾದ್ಯಂತ ಸುಮಾರು 600ಕ್ಕೂ ಅಧಿಕ ಪ್ರಭೇಧಗಳಿವೆ. ಪ್ರಸಕ್ತ ಮಂಗಳೂರಿನಲ್ಲಿ 50 ವಿಧದ ಖರ್ಜೂರಗಳು ಲಭ್ಯವಿದೆ.

 ಖರ್ಜೂರಗಳ ರಾಜನಿಗೆ ಕೆಜಿಗೆ 1760!!

ಖರ್ಜೂರಗಳ ರಾಜನಿಗೆ ಕೆಜಿಗೆ 1760!!

`ಖರ್ಜೂರಗಳ ರಾಜ' ಎಂದು ಕರೆಯಲ್ಪಡುವ ಸೌದಿ ಅರೇಬಿಯಾದ ಅಜ್ವಾಗೆ ಕೇಜಿಯೊಂದಕ್ಕೆ ರೂ 1,760 ಬೆಲೆಯಿದೆ. ಇನ್ನು `ಖರ್ಜೂರಗಳ ರಾಣಿ' ಎಂದು ಕರೆಯಲ್ಪಡುವ ಜೋರ್ಡಾನಿನ ಮಜ್ದೂಲ್ ಗೆ ರೂ. 1,800 ಬೆಲೆಯಿದೆ. ಸೌದಿ ಅರೇಬಿಯಾದ ಮಬ್ರೂಮ್ ಖರ್ಜೂರಗಳು ಕೆಜಿಗೆ ರೂ. 800ರವರೆಗೆ ಬೆಲೆಬಾಳುತ್ತವೆ.

 120 ರೂಪಾಯಿಗೂ ಇದೆ ಖರ್ಜೂರ

120 ರೂಪಾಯಿಗೂ ಇದೆ ಖರ್ಜೂರ

ಕಡಿಮೆ ಮೌಲ್ಯದ ಖರ್ಜೂರ ಅಂದರೆ ಇರಾಕಿನ ಝಹಿದಿ, ಇದರ ಬೆಲೆ ಕೇಜಿಗೆ 120 ರೂಪಾಯಿ. ಇನ್ನು ಯುಎಇಯ ಫರ್ದ್ ಗೆ ರೂ. 240 ಬೆಲೆಯಿದೆ. ಇನ್ನು ರೂ. 280 ಬೆಲೆಯ ಇರಾನಿನ ಮಝಾಫತಿ ಖರ್ಜೂರವೂ ಮಾರುಕಟ್ಟೆಯಲ್ಲಿ ವ್ಯಾಪಾರವಾಗುತ್ತಿವೆ.

 ದುಬಾರಿ ಖರ್ಜೂರಗಳ ವ್ಯಾಪಾರದಲ್ಲಿ ಏರಿಕೆ

ದುಬಾರಿ ಖರ್ಜೂರಗಳ ವ್ಯಾಪಾರದಲ್ಲಿ ಏರಿಕೆ

ಹೆಚ್ಚಿನ ಮೌಲ್ಯದ ಖರ್ಜೂರಗಳ ಮಾರಾಟದಲ್ಲಿ ಶೇಕಡಾ 25ರಷ್ಟು ಹೆಚ್ಚಳವಾಗಿದ್ದರೆ, ಕಡಿಮೆ ಮೌಲ್ಯದ ಖರ್ಜೂರದ ಮಾರಾಟದಲ್ಲಿ ಶೇಕಡಾ 40ರಷ್ಟು ಹೆಚ್ಚಳವಾಗಿದೆ ಎನ್ನುತ್ತಾರೆ ರೀಮ್ ಟ್ರೇಡರ್ಸ್ ಪಾಟ್ರ್ನರ್ ಮೊಹಮ್ಮದ್ ಮುಕ್ತಾರ್.

 ರಂಜಾನಿನಲ್ಲಿ ಖರ್ಜೂರಕ್ಕೆ ಭಾರೀ ಬೇಡಿಕೆ

ರಂಜಾನಿನಲ್ಲಿ ಖರ್ಜೂರಕ್ಕೆ ಭಾರೀ ಬೇಡಿಕೆ

ವ್ಯಾಪಾರಿಗಳ ಪ್ರಕಾರ ಮಧ್ಯ ಪೂರ್ವದಲ್ಲಿ ಪ್ರಧಾನ ಆಹಾರವಾಗಿರುವ ಖರ್ಜೂರ ವ್ಯಾಪಾರ ಸಾಮಾನ್ಯ ಸಮಯಕ್ಕೆ ಹೋಲಿಸಿದರೆ ರಂಜಾನ್ ತಿಂಗಳಲ್ಲಿ 100ಪಟ್ಟು ಹೆಚ್ಚಳವಾಗಿದೆ.

 ಹಾಲು ಮಾರಾಟದಲ್ಲೂ ಹೆಚ್ಚಳ

ಹಾಲು ಮಾರಾಟದಲ್ಲೂ ಹೆಚ್ಚಳ

ಅದೇ ರೀತಿ ಹಾಲಿನ ವ್ಯಾಪಾರ ಕೂಡಾ ಹೆಚ್ಚಾಗಿದೆ. ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಘಟಕ ನಿಯಮಿತ ಇದೀಗ ಸಾಮಾನ್ಯ ಕೋಟಾಕ್ಕಿಂತ ಹೆಚ್ಚುವರಿ 10,000 ಲೀಟರ್ ಹಾಲು ಮಾರಾಟ ಮಾಡುತ್ತಿದೆ. ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಉತ್ಪಾದನೆ ಹೆಚ್ಚಿಸುವ ಯೋಚನೆಯನ್ನು ಕೈಗೊಳ್ಳಲಾಯಿತು ಎಂದು ಘಟಕದ ಅಧ್ಯಕ್ಷರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ramadan special more than 50 variety dates from Arabian countries reach Mangaluru market. The price of these special dates have increased 100 times more because of the excessive demand on dates here in Mangaluru.
Please Wait while comments are loading...