ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಲ್ಲಿ ಮತ್ತೆ ಮಳೆ ಆರಂಭ:ಸಮುದ್ರ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ

|
Google Oneindia Kannada News

Recommended Video

ಮಂಗಳೂರಲ್ಲಿ ಮತ್ತೆ ಮಳೆ ಆರಂಭ : ಸಮುದ್ರ ಅಲೆಗಳ ಅಬ್ಬರ ಹೆಚ್ಚಳ ? | Oneindia Kannada

ಮಂಗಳೂರು, ಸೆಪ್ಟೆಂಬರ್. 27: ಮಂಗಳೂರಿನಲ್ಲಿ ತಿಂಗಳ ಬಳಿಕ ಮತ್ತೆ ಮಳೆ ಆರಂಭವಾಗಿದೆ. ಇಂದು ಗುರುವಾರ ಬೆಳ್ಳಂಬೆಳಗ್ಗೆ ಮಂಗಳೂರಿನಲ್ಲಿ ಭಾರೀ ಸಿಡಿಲು ಗುಡುಗಿನೊಂದಿಗೆ ತುಂತುರು ಮಳೆಯಾಗುತ್ತಿದೆ. ಮಳೆಗಾಲದ ಕೊನೆಯಲ್ಲಿ ತುಂತುರು ಮಳೆ ಆರಂಭವಾಗಿದ್ದು, ಮತ್ತೆರಡು ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜಧಾನಿಯಲ್ಲಿ ಮತ್ತೆ ಮಳೆ: ಎಚ್ಚರಿಕೆ ವಹಿಸಲು ಸಿಎಂ ಮನವಿರಾಜಧಾನಿಯಲ್ಲಿ ಮತ್ತೆ ಮಳೆ: ಎಚ್ಚರಿಕೆ ವಹಿಸಲು ಸಿಎಂ ಮನವಿ

ಬೆಳಗ್ಗೆ ಮಂಗಳೂರು ಸೇರಿದಂತೆ ಸುತ್ತಮುತ್ತ ಗುಡುಗು ಸಹಿತ ತುಂತುರು ಮಳೆ ಬೀಳುತ್ತಿದೆ. ಒಂದು ತಿಂಗಳಿಂದ ಪೂರ್ತಿ ಮಾಯವಾಗಿದ್ದ ಮಳೆ ಮತ್ತೆ ಆರಂಭವಾಗಿದ್ದು, ಬಿರುಬಿಸಿಲಿನ ವಾತಾವರಣದಲ್ಲಿ ತಂಪೆರಚಿದೆ. ಸದ್ಯ ಮಂಗಳೂರು, ಮೂಡಬಿದ್ರೆ, ಕಾರ್ಕಳ ಬಂಟ್ವಾಳ ಮಳೆಯಾಗುತ್ತಿದೆ.

 ಬೆಂಗಳೂರಿನ ಭಾರೀ ಮಳೆಗೆ ಮುಳುಗುವ ಅಪಾಯದಲ್ಲಿರುವ ಪ್ರದೇಶಗಳು ಯಾವವು! ಬೆಂಗಳೂರಿನ ಭಾರೀ ಮಳೆಗೆ ಮುಳುಗುವ ಅಪಾಯದಲ್ಲಿರುವ ಪ್ರದೇಶಗಳು ಯಾವವು!

ಸೆಪ್ಟೆಂಬರ್ ತಿಂಗಳ ಮೊದಲ ವಾರದಿಂದಲೇ ಕರಾವಳಿಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿತ್ತು. ಮಳೆ ಇಲ್ಲದೆ ಸುಡುಬಿಸಿಲು ಆವರಿಸಿ ಬಿರು ಬೇಸಗೆ ವಾತಾವರಣ ಸೃಷ್ಟಿಯಾಗಿತ್ತು.ಈಗ ಮಳೆಗಾಲದ ಕೊನೆಯಲ್ಲಿ ಮತ್ತೆ ಮಳೆ ಆರಂಭವಾಗಿರುವುದು ಕರಾವಳಿಗರಲ್ಲಿ ಮಂದಹಾಸ ಮೂಡಿಸಿದೆ.

Raining with heavy thunder lightning in Mangaluru

ಈ ನಡುವೆ ಹವಾಮಾನ ಇಲಾಖೆಯಿಂದ ಭಾರೀ ಮಳೆಯ ಮುನ್ಸೂಚನೆ ದೊರೆತಿದೆ. ಸೆಪ್ಟೆಂಬರ್ 27 ರಿಂದ 30ರ ನಡುವೆ ಭಾರೀ ಮಳೆಯಾಗಲಿದ್ದು, ಈ ಮಧ್ಯೆ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಬೆಂಗಳೂರು ಮಳೆ, ಬೆಳ್ಳಂದೂರು ಕೆರೇಲಿ ನೊರೆ, ಪಿಕ್ನಿಕ್ ಗೆ ಹೋಗೋಣ ಬಾರೆಬೆಂಗಳೂರು ಮಳೆ, ಬೆಳ್ಳಂದೂರು ಕೆರೇಲಿ ನೊರೆ, ಪಿಕ್ನಿಕ್ ಗೆ ಹೋಗೋಣ ಬಾರೆ

Raining with heavy thunder lightning in Mangaluru

ಭಾರೀ ಮಳೆಯ ನಡುವೆ ಒಂದೂವರೆ ಮೀಟರ್ ಎತ್ತರಕ್ಕೆ ಸಮುದ್ರದ ಅಲೆಗಳು ಏಳುವ ಎಚ್ಚರಿಕೆ ರವಾನಿಸಲಾಗಿದ್ದು, ಪಶ್ಚಿಮ, ಪೂರ್ವ ಕರಾವಳಿ ಮತ್ತು ಲಕ್ಷದ್ವೀಪ ಪ್ರದೇಶಗಳಿಗೆ ಎಚ್ಚರಿಕೆ ನೀಡಲಾಗಿದೆ. ಮೀನುಗಾರರು ಕಡಲಿಗೆ ಇಳಿಯದಂತೆ ಎಚ್ಚರಿಕೆ ರವಾನಿಸಲಾಗಿದೆ.

English summary
Raining with heavy thunder lightning in Mangaluru since morning. Meteorological Department said rain will continue too two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X