ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಣಂಬೂರು ಬೀಚ್ ನಲ್ಲಿ ಕ್ರಿಕೆಟ್, ಕಬಡ್ಡಿ, ಫುಟ್ಬಾಲ್ ಆಡಿ ಮಜಾ ಮಾಡಿ

ಈ ಬಾರಿ ಪಣಂಬೂರು ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯು ರೈ ಸ್ಪೋರ್ಟ್ಸ್ ಮತ್ತು ರೆಂಟಲ್ಸ್ ಸಹಕಾರದಲ್ಲಿ ರೆಂಟ್ ಎ ಸ್ಪೋರ್ಟ್ಸ್ ಕಲ್ಪನೆಯನ್ನು ಹೊಸದಾಗಿ ಪರಿಚಯಿಸಿದೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮಾರ್ಚ್. 13 : ಬೇಸಿಗೆ ರಜೆಗೆ ಈ ಬಾರಿ ಪಣಂಬೂರು ಬೀಚ್ ಹೆಚ್ಚು ಮಜಾ ನೀಡುವ ತಾಣವಾಗಲಿದೆ. ಹೌದು, ಬೀಚಿಗೆ ಈ ಬಾರಿ ಪಣಂಬೂರು ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯು ರೈ ಸ್ಪೋರ್ಟ್ಸ್ ಮತ್ತು ರೆಂಟಲ್ಸ್ ಸಹಕಾರದಲ್ಲಿ ರೆಂಟ್ ಎ ಸ್ಪೋರ್ಟ್ಸ್ ಕಲ್ಪನೆಯನ್ನು ಹೊಸದಾಗಿ ಪರಿಚಯಿಸಿದೆ.

ಇದರಿಂದ ಪಣಂಬೂರು ಬೀಚ್ ಈ ಬಾರಿ ಬೇಸಿಗೆ ಮಜಾ ತಾಣವಾಗುವುದರಲ್ಲಿ ಸಂಶಯವೇ ಇಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಪಣಂಬೂರು ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯ ಸಿಇಒ ಯತೀಶ್ ಅವರು, ಬೀಚಿಗೆ ಸಂದರ್ಶಿಸುವ ಸಹಕಾರ ಸಂಸ್ಥೆಗಳು ಮತ್ತು ಸಂಘ ಸಂಸ್ಥೆಗಳ ಪಿಕ್ನಿಕ್ ಕಾರ್ಯಕ್ರಮಗಳಿಗೆ ಹೆಚ್ಚಿನ ಮನೋರಂಜನೆ ನೀಡುವಲ್ಲಿ ಸಹಕಾರಿಯಾಗಲಿದೆ.

ಬೀಚಿನಲ್ಲಿ ಫುಟ್ಬಾಲ್ ಪರಿಚಯಿಸುವ ಚಿಂತನೆಗಳು ಇವೆ. ಎಲ್ಲಾ ಪಬ್ಲಿಕ್ ಪರೀಕ್ಷೆಗಳು ಮುಗಿದ ಬಳಿಕ ಇದು ಸಾಕಾರಗೊಳ್ಳಲಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಸುಮಾರು 20,000ಕ್ಕೂ ಅಧಿಕ ಫುಟ್ಬಾಲ್ ಪ್ರಿಯರು ಬೀಚಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಬೀಚ್ ನಲ್ಲಿ ಲಭ್ಯವಿರುವ ಕ್ರೀಡೆಗಳು

ಬೀಚ್ ನಲ್ಲಿ ಲಭ್ಯವಿರುವ ಕ್ರೀಡೆಗಳು

ಬೀಚ್ ಸೈಕಲ್, ಬೀಚ್ ಟೆಂಟ್, ಹಗ್ಗಜಗ್ಗಾಟ, ಕ್ರಿಕೆಟ್ ಸೆಟ್, ವಾಲಿಬಾಲ್, ತ್ರೋಬಾಲ್, ಫುಟ್ಬಾಲ್, ಲಗೋರಿ, ಫ್ಲೈಯಿಂಗ್ ಡಿಸ್ಕ್, ಆಂಗ್ಲಿಂಗ್ ಮತ್ತು ರಿಂಗ್ ಟಾಸ್ ಮೊದಲಾದ ಆಟಿಕೆಗಳು ಸಾಮಾಗ್ರಿಗಳು ಬಾಡಿಗೆಗೆ ದೊರೆಯಲಿವೆ.

 ಫುಟ್ಬಾಲ್ ಪರಿಚಯಿಸುವ ಚಿಂತನೆ

ಫುಟ್ಬಾಲ್ ಪರಿಚಯಿಸುವ ಚಿಂತನೆ

ಪ್ರತಿ ಶನಿವಾರ ಮತ್ತು ಭಾನುವಾರ ಸುಮಾರು 20,000 ಕ್ಕೂ ಅಧಿಕ ಫುಟ್ಬಾಲ್ ಪ್ರಿಯರು ಬೀಚಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಿಂದ ಬೀಚ್ ನಲ್ಲಿ ಫುಟ್ಬಾಲ್ ಪರಿಚಯಿಸುವ ಚಿಂತನೆ ನಡೆಸಲಾಗುತ್ತಿದೆ ಎಂದು ಪಣಂಬೂರು ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯ ಸಿಇಒ ಯತೀಶ್ ಹೇಳಿದ್ದಾರೆ.

ಸಂದರ್ಶಕರ ತನ್ಮಯಗೊಳಿಸುವ ಬೀಚ್

ಸಂದರ್ಶಕರ ತನ್ಮಯಗೊಳಿಸುವ ಬೀಚ್

ಬೀಚಿನಲ್ಲಿ ಕುದುರೆ ಸವಾರಿ, ಪ್ಯಾರಾಸೈಲಿಂಗ್, ವಾಟರ್ ಸ್ಕೂಟರ್, ಸರ್ಫಿಂಗ್, ಜೆಟ್ ಸ್ಕೈ ರೈಡ್ಸ್, ಬೋಟಿಂಗ್, ಡಾಲ್ಫಿನ್ ವೀವಿಂಗ್, ಫುಡ್ ಸ್ಟಾಲುಗಳು ಸಂದರ್ಶಕರ ತನ್ಮಯಗೊಳಿಸಲಿದೆ.

ದಿನಕ್ಕೆ 40 ಸಾವಿರಕ್ಕೂ ಅಧಿಕ ಜನರು ಭೇಟಿ

ದಿನಕ್ಕೆ 40 ಸಾವಿರಕ್ಕೂ ಅಧಿಕ ಜನರು ಭೇಟಿ

ಬೇಸಿಗೆ ರಜೆಯಲ್ಲಿ ಬೀಚ್ ಗೆ ಭೇಟಿ ನೀಡುವರ ಸಂಖ್ಯೆ ದಿನದಲ್ಲಿ 40 ಸಾವಿರಕ್ಕೂ ಅಧಿಕವಿರುತ್ತದೆ ಎಂದು ಯತೀಶ್ ಬೈಕಂಪಾಡಿ ಅವರು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.

English summary
Panambur Beach Tourism Development Project (PBTDP) in association with Rai Sport & Rentals, has introduced the new concept 'Rent A Sport', where in visitors and tourists can avail sports equipment on rent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X