ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುರತ್ಕಲ್ ತಲುಪಿದ ರಾಹುಲ್ ಯಾತ್ರೆ, ಸಂಚಾರ ವ್ಯತ್ಯಯ

|
Google Oneindia Kannada News

ಮಂಗಳೂರು, ಮಾರ್ಚ್ 20: ಕರಾವಳಿಯ ಪ್ರವಾಸದಲ್ಲಿರುವ ರಾಹುಲ್ ಗಾಂಧಿಯವರ ಜನಾಶೀರ್ವಾದ ಯಾತ್ರೆ ಮಂಗಳೂರು ಹೊರವಲಯದ ಸುರತ್ಕಲ್‌ಗೆ ಬಂದು ತಲುಪಿದೆ. ರಾಹುಲ್ ಭೇಟಿ ಕಾಂಗ್ರೆಸ್ ಪಾಳಯದಲ್ಲಿ ಹರ್ಷದ ಹೊನಲು ಹರಿಸಿದರೆ ಇನ್ನೊಂದಡೆ ರಾಹುಲ್ ಭೇಟಿ ಯಿಂದಾಗಿ ಉಡುಪಿ ಮಂಗಳೂರು ಮಾರ್ಗದಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.

ಮುಲ್ಕಿಯಿಂದ ಸುರತ್ಕಲ್ ವರೆಗೆ ರಾಗಾ ರೋಡ್ ಶೋ ನಿಂದಾಗಿ ರಸ್ತೆ ಸಂಚಾರಕ್ಕೆ ಭಾರೀ ಅಡಚಣೆ ಉಂಟಾಗಿದೆ. ರಾಹುಲ್ ಹೋದಲ್ಲೆಲ್ಲಾ ರಸ್ತೆ ಬ್ಲಾಕ್ ಆಗುತ್ತಿದ್ದು , ಸುರತ್ಕಲ್ ನಲ್ಲಿ ಫ್ಲೈ ಓವರ್ ಮೇಲೂ ಕಾಂಗ್ರೆಸ್ ಕಾರ್ಯಕರ್ತರು ವಾಹನಗಳನ್ನು ನಿಲ್ಲಿಸಿ ರಸ್ತೆ ಬ್ಲಾಕ್ ಮಾಡಿದ್ದಾರೆ ಎಂದು ದೂರಲಾಗಿದೆ. ಸುರತ್ಕಲ್ ರಸ್ತೆ ನಡುವೆ ರಾಹುಲ್ ಗಾಂಧಿ ಸಭೆ ಆಯೋಜಿಸಿರುವ ಹಿನ್ನೆಲೆಯಲ್ಲಿ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತ ಗೊಂಡಿದೆ.

In Pics: ಕರಾವಳಿಯಲ್ಲಿ ರಾಹುಲ್ ಗಾಂಧಿ ಮಿಂಚಿನ ಸಂಚಾರ

ರಾಷ್ಟ್ರೀಯ ರಸ್ತೆಯಲ್ಲಿ ಸುರತ್ಕಲ್ ನಿಂದ ಹೊಸಬೆಟ್ಟುವಿನವರೆಗೆ ರಸ್ತೆ ಬ್ಲಾಕ್ ಆದ ಕಾರಣ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಾಲುಗಟ್ಟಿ ನಿಂತಿವೆ. ಸಂಚಾರ ದಟ್ಟಣೆ ಹೆಚ್ಚಾಗಿರುವ ಕಾರಣ ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ.

Rahul Gandhi in Suratkal, traffic jam in the town

ಈ ನಡುವೆ ಮುಲ್ಕಿಯಲ್ಲಿ ರಾಹುಲ್ ಗಾಂಧಿ ಭೇಟಿ ನೀಡುವ ಮೊದಲು ಭಾರೀ ಜೋಶ್ ನಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ಬದಿಯ ಪೊದೆಗೆ ಬೆಂಕಿ ಇಟ್ಟಿದ್ದರು. ಈ ಹಿನ್ನಲೆಯಲ್ಲಿ ರಸ್ತೆಬದಿಯ ಗಿಡಗಂಟಿಗಳಿಗೆ ಒಮ್ಮೆಲೆ ಬೆಂಕಿ ಹತ್ತಿಕೊಂಡ ಪರಿಣಾಮ ಬೆಂಕಿ ನಂದಿಸಲು ಕಾಂಗ್ರೆಸ್ ಕಾರ್ಯಕರ್ತರು ಹರಸಾಹಸ ಪಟ್ಟರು. ಬಳಿಕ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿ ಆರಿಸುವಲ್ಲಿ ಸಫಲರಾದರು.

ಜನರ ಶ್ರಮಕ್ಕೆ ಮಾಡುವ ಅವಮಾನ ನಿಲ್ಲಿಸಿ: ಮೋದಿಗೆ ರಾಹುಲ್ ಆಗ್ರಹಜನರ ಶ್ರಮಕ್ಕೆ ಮಾಡುವ ಅವಮಾನ ನಿಲ್ಲಿಸಿ: ಮೋದಿಗೆ ರಾಹುಲ್ ಆಗ್ರಹ

English summary
In Suratkal heavy traffic jam due to Rahul Gandhi visit. most of the road of Suratkal were filled with congress party workers. party workers were on the doing byke rally in Suratkal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X