ದಕ್ಷಿಣ ಕನ್ನಡದ ಮಂದಿಗೂ ಈಗ ಕೇರಳದ ಕಾಡಾ ಕೋಳಿ ರುಚಿ

Posted By:
Subscribe to Oneindia Kannada

ಮಂಗಳೂರು, ಆಗಸ್ಟ್ 28: ಇದು ಕಾಡುಕೋಳಿ ಅಲ್ಲ. ಆದರೆ ಥೇಟ್ ಕಾಡು ಕೋಳಿಯ ಹಾಗೆ ಇದೆ. ಹೆಸರು ಕಾಡಾ. ಕೇರಳದಲ್ಲಿ ಹೆಚ್ಚಾಗಿ ಮಾಂಸಕ್ಕಾಗಿ ಉಪಯೋಗಿಸುವ ಕಾಡಾ ದಕ್ಷಿಣ ಕನ್ನಡ ಜಿಲ್ಲೆಗೂ ಕಾಲಿಟ್ಟಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕೆಲವರಿಗೆ ಈಗಾಗಲೇ ಇದರ ಪರಿಚಯವಿದ್ದು, ರುಚಿಯನ್ನು ಕೂಡ ಸವಿದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕೆಲ ಭಾಗ ಸೇರಿದಂತೆ ಸುಳ್ಯ ಭಾಗದಲ್ಲಿ ಕೂಡ ಈ ಕಾಡಾ ಮಾರಾಟಕ್ಕೆ ಇಡಲಾಗಿದೆ.

ಮಂಗಳೂರು : ಉರ್ವ ಸ್ಟೋರ್‌ನಲ್ಲಿ ವಿಶಿಷ್ಟವಾಗಿ ಗಣಪತಿ ಚತುರ್ಥಿ ಆಚರಣೆ

ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಜನರಿಗೆ ಕಾಡಾ ಕೋಳಿ ಹೆಚ್ಚು ಪರಿಚಯವಿಲ್ಲ. ಇಲ್ಲಿ ಏನಿದ್ದರೂ ಊರು ಕೋಳಿ, ಬಾಯ್ಲರ್, ಟೈಸನ್, ಗಿರಿರಾಜ ಕೋಳಿಯ ಮಾಂಸವನ್ನು ಸವಿದಿರುವ ಕರಾವಳಿ ಜನರು ಕಾಡಾ ರುಚಿ ನೋಡಿಲ್ಲ. ಹಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕೆಲವು ಭಾಗ ಸೇರಿದಂತೆ ಸುಳ್ಯದಲ್ಲಿ ಕಾಡಾ ಮಾರಾಟಕ್ಕೆ ಇಡಲಾಗಿದೆ.

ಈ ಕಾಡಾ ಕೋಳಿ ಹೆಚ್ಚಾಗಿ ಕೇರಳದಲ್ಲಿ ಸಾಕಣೆ ಮಾಡುವ ಕಾಡುಕೋಳಿ ಜಾತಿಗೆ ಸೇರಿದ ಹಕ್ಕಿ. ಕಾಡಾ ಕೋಳಿಯ ತೂಕ ಕಡಿಮೆ ಇದ್ದರೂ ರುಚಿಕರ ಎಂದು ಹೇಳಲಾಗುತ್ತದೆ.

ಕೋಳಿ ಮಾದರಿಯಲ್ಲೇ ಸಾಕುತ್ತಾರೆ

ಕೋಳಿ ಮಾದರಿಯಲ್ಲೇ ಸಾಕುತ್ತಾರೆ

ಕೇರಳದಲ್ಲಿ ಇದನ್ನು ಕೋಳಿ ಸಾಕುವ ರೀತಿಯಲ್ಲೇ ಸಾಕಣೆ ಮಾಡಲಾಗುತ್ತದೆ. ಕೇರಳದಲ್ಲಿ ಒಂದೊಂದು ಫಾರ್ಮ್ ನಲ್ಲಿ ಲಕ್ಷಗಟ್ಟಲೆ ಕಾಡಾ ಕೋಳಿ ಸಾಕಣೆ ಮಾಡುತ್ತಾರೆ. ಇದರಿಂದ ಅಲ್ಲಿಯ ಫಾರ್ಮ್ ಮಾಲೀಕರು ಉತ್ತಮ ಆದಾಯ ಕೂಡ ಪಡೆಯುತ್ತಿದ್ದಾರೆ .

ಮೊಟ್ಟೆಗೂ ಬೇಡಿಕೆ ಹೆಚ್ಚು

ಮೊಟ್ಟೆಗೂ ಬೇಡಿಕೆ ಹೆಚ್ಚು

ಕಾಡಾ ಮಾಂಸ ಅತ್ಯಂತ ರುಚಿಕರ ಎಂದು ಹೇಳಲಾಗುತ್ತದೆ. ಇದಕ್ಕೆ ಯಾವುದೇ ರೀತಿಯ ರೋಗ ನಿರೋಧಕ ಚುಚ್ಚುಮದ್ದು ಮತ್ತು ಅಥವಾ ಔಷಧಿ ನೀಡದ ಕಾರಣ ಕೋಳಿ ಮಾಂಸಕ್ಕಿಂತ ಹೆಚ್ಚು ಆರೋಗ್ಯಪೂರ್ಣ ಹಾಗೂ ಪೌಷ್ಟಿಕ ಎಂದು ಹೇಳಲಾಗುತ್ತದೆ. ಕಾಡಾ ಕೋಳಿಯ ಮೊಟ್ಟೆಗೂ ಬಹಳ ಬೇಡಿಕೆಯಿದ್ದು, ಔಷಧೀಯ ಗುಣಗಳಿದೆ ಎಂದು ಕಾಡಾ ಮೊಟ್ಟೆ ಬೇಯಿಸಿ ಮಾರಾಟ ಮಾಡಲಾಗುತ್ತದೆ.

ಅರವತ್ತು ರುಪಾಯಿಗೆ ಒಂದರಂತೆ ಮಾರಾಟ

ಅರವತ್ತು ರುಪಾಯಿಗೆ ಒಂದರಂತೆ ಮಾರಾಟ

ಕಾಡಾ ಕೋಳಿಯನ್ನು ಮಾರುಕಟ್ಟೆ ಅಂಗಡಿಗಳಲ್ಲಿ ತೂಕ ಮಾಡಿ, ಮಾರಾಟ ಮಾಡುವುದಿಲ್ಲ. ಬದಲಿಗೆ ಒಂದು ಕೋಳಿಗೆ ಅರವತ್ತು ರುಪಾಯಿಯಂತೆ ಮಾರಾಟ ಮಾಡಲಾಗುತ್ತಿದೆ.

ಖರೀದಿಸುವವರಲ್ಲಿ ಹಿಂಜರಿಕೆ

ಖರೀದಿಸುವವರಲ್ಲಿ ಹಿಂಜರಿಕೆ

ಕಾಡಾ ಕೋಳಿಯ ಬಗ್ಗೆ ಜನರಿಗೆ ಅಷ್ಟು ಗೊತ್ತಿಲ್ಲ. ಆ ಬಗ್ಗೆ ಜನರಿಗೆ ತಿಳಿಸುತ್ತಿದ್ದೇವೆ. ಕೆಲವರು ಖರೀದಿಗೆ ಹಿಂಜರಿಯುತ್ತಿದ್ದಾರೆ . ಈಗ ನಿಧಾನವಾಗಿ ಕಾಡಾಗೆ ಬೇಡಿಕೆ ಹೆಚ್ಚುತ್ತಿದೆ. ಮುಂಬರುವ ದಿನಗಳಲ್ಲಿ ವ್ಯಾಪಾರ ವೃದ್ಧಿಸಲಿದೆ ಎನ್ನುತ್ತಾರೆ ಕಾಡಾ ವ್ಯಾಪಾರಿ ನವಾಜ್ .

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Quail Birds which is very familiar in the kitchens of Kerala now enter into the Kitchens of Dakshina Kannada.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ