ಪುತ್ತೂರಿನಲ್ಲಿ ಏ.16ರಂದು ಪುತ್ತೂರ ಹಬ್ಬ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಏಪ್ರಿಲ್ 13 : ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಟೈಮ್ ಅಂಡ್ ಟೈಡ್ ಸಂಸ್ಥೆ ಏಪ್ರಿಲ್ 16ರಂದು 'ಪುತ್ತೂರ ಹಬ್ಬ'ವನ್ನು ಆಯೋಜಿಸಿದೆ. ಸುಮಾರು 50 ಸಾವಿರಕ್ಕೂ ಅಧಿಕ ಜನರು ಹಬ್ಬದಲ್ಲಿ ಪಾಲ್ಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.

ಕರಾವಳಿ ಕರ್ನಾಟಕದ ಪ್ರಖ್ಯಾತ ಈವೆಂಟ್ ಮ್ಯಾನೇಜ್‍ಮೆಂಟ್ ಸಂಸ್ಥೆ ಟೈಮ್ ಅಂಡ್ ಟೈಡ್ ಹಬ್ಬವನ್ನು ಆಯೋಜಿಸಿದ್ದು, ಸನ್‍ಫ್ಯೂರ್ ರಿಫೈನ್ಡ್ ಸನ್ ಫ್ಲವರ್ ಆಯಿಲ್ ಪ್ರಸ್ತುತಪಡಿಸುತ್ತಿದೆ. ಪುತ್ತೂರು ನಗರದ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ಬೃಹತ್ ಮನೋರಂಜನಾ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. [ಬಗೆಹರಿಯಿತು ಪುತ್ತೂರು ಮಹಾಲಿಂಗೇಶ್ವರ ಜಾತ್ರೆ ವಿವಾದ]

puttur

ಏಪ್ರಿಲ್ 16ರ ಶನಿವಾರ ಸಂಜೆ 7 ಗಂಟೆಗೆ ಪುತ್ತೂರಿನ ಕೊಂಬೆಟ್ಟುವಿನಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜು ಸಮೀಪದ ತಾಲೂಕು ಕ್ರೀಡಾಂಗಣದಲ್ಲಿ ಪುತ್ತೂರ ಹಬ್ಬ ಕಾರ್ಯಕ್ರಮ ನಡೆಯಲಿದೆ. ಹಬ್ಬಕ್ಕೆ ಆಗಮಿಸುವವರು ವಿವಿಐಪಿ, ವಿಐಪಿ, ಸ್ಟ್ಯಾಂಡ್-1, ಸ್ಟ್ಯಾಂಡ್-2, ಸ್ಟ್ಯಾಂಡ್-3, ಗ್ಯಾಲರಿಗಳಲ್ಲಿ ತಮ್ಮ ಸೀಟುಗಳನ್ನು ಮುಂಗಡವಾಗಿ ಕಾದಿರಿಸಲು ಅವಕಾಶ ನೀಡಲಾಗಿದೆ. [ಜಾತ್ರೋತ್ಸವಕ್ಕೂ ಮುನ್ನ ಪುತ್ತೂರಿನಲ್ಲಿ ಎದ್ದ ಚಪ್ಪರ ವಿವಾದ]

ರಂಗು ತುಂಬಲಿದ್ದಾರೆ ತಾರೆಯರು : ಕಾರ್ಯಕ್ರಮದಲ್ಲಿ ಕನ್ನಡ ಮತ್ತು ತುಳು ಚಿತ್ರರಂಗದ ಜನಪ್ರಿಯ ನಟ-ನಟಿಯರು, ಕಿರುತೆರೆ ಕಲಾವಿದರು. ಹಲವು ಪ್ರತಿಭಾವಂತ ಯುವ ಗಾಯಕ-ಗಾಯಕಿಯರು ಭಾಗವಹಿಸಲಿದ್ದು, ಮ್ಯಾಜಿಕ್, ನೃತ್ಯ, ಹಾಡುಗಳು, ಕಾಮಿಡಿ, ಆಕರ್ಷಕ ಸಿಡಿಮದ್ದುಗಳ ಪ್ರದರ್ಶನ ಕಾರ್ಯಕ್ರಮಗಳು ನಡೆಯಲಿವೆ. [ಮಹಾಲಿಂಗೇಶ್ವರ ಜಾತ್ರೆ ವಿವಾದಕ್ಕೆ ತೆರೆ ಎಳೆದ ಹೈಕೋರ್ಟ್]

ಭಾಗವಹಿಸುವ ಪ್ರಮುಖರು : 'ಲೈಫು ಇಷ್ಟೇನೆ' ಖ್ಯಾತಿಯ ನಟಿ ಸಿಂಧು ಲೋಕನಾಥ್, 'ಅಗ್ನಿ ಸಾಕ್ಷಿ' ಧಾರಾವಾಹಿಯ ಸನ್ನಿಧಿ, 'ಅಶ್ವಿನಿ ನಕ್ಷತ್ರ' ಧಾರಾವಾಹಿಯ ಜೆಕೆ, 'ನಮ್ಮ ಕುಡ್ಲ' ಹೊಸ ತುಳು ಚಿತ್ರದ ತಾರೆಯರು ಹಾಗೂ 'ಧಬಕ್ ಧಬಾ ಐಸಾ' ಹೊಸ ತುಳು ಚಿತ್ರ ತಂಡದ ತಾರಾಮಣಿಗಳು ಪುತ್ತೂರ ಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ.

ಝೀ ಟಿವಿ ಹಿಂದಿ ಸರಿಗಮಪ ಲಿಟ್ಟಲ್ ಚಾಂಪ್ಸ್ ವಿಜೇತರಾದ ಗಗನ್ ಗಾಂವ್‍ಕರ್, ಝೀ ಕನ್ನಡ ಸರಿಗಮಪ ಲಿಟ್ಟಲ್ ಚಾಂಪ್ಸ್ ವಿಜೇತೆ ಸುಪ್ರಿಯಾ ಜೋಷಿ, ನಿಹಾರಿಕಾ, ಒಹಿಲೇಶ್ವರಿ ಎಂ.ಕೆ, ಹಾಗೂ 1,500ಕ್ಕೂ ಅಧಿಕ ಟಿವಿ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಮಿಂಚಿದ ನಿಶಾನ್ ರೈ ಮುಂತಾದ ಹಾಡುಗಳ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

puttura habba

ವಿವಿಧ ವಿನೋದಾವಳಿ : 'ಬಲೆ ತೆಲಿಪಾಲೆ'ಯಿಂದ ಜನಪ್ರಿಯರಾದ ಉಮೇಶ್ ಮಿಜಾರ್ ಹಾಗೂ ಬಳಗ ಮತ್ತು ಬೆಂಗಳೂರಿನ ಚಲನಚಿತ್ರ ನಟ ಮಿಮಿಕ್ರಿ ಗೋಪಿ ಇವರಿಂದ ಕಾಮಿಡಿ ಶೋಗಳು, ಮಂಗಳೂರಿನ ಪ್ರಖ್ಯಾತ ನೃತ್ಯ ತಂಡ 'ವೆಲೋಸಿಟಿ' ಸದಸ್ಯರ ನೃತ್ಯ ಪ್ರದರ್ಶನ, 'ಸ್ಟ್ರಿಂಗ್' ತಂಡದ ರಾಜ್‍ಗೋಪಾಲ್ ಮತ್ತು ಸಂಗಡಿಗರಿಂದ ಸಂಗೀತದ ರಸದೌತಣ ಕಾರ್ಯಕ್ರಮದ ವಿಶೇಷತೆಯಾಗಿದೆ.

ಕಲಾರಸಿಕರಿಗೆ ವಿವಿಧ ರೀತಿಯ ಆಹಾರ ಉತ್ಪನ್ನಗಳು ಹಾಗೂ ಪ್ರಾಯೋಜಕರ ವಿವಿಧ ರೀತಿಯ ಸ್ಟಾಲ್‍ಗಳನ್ನು ವೇದಿಕೆಯ ಸುತ್ತಮುತ್ತ ಆಯೋಜಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ 98440 45543, 96115 86293.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
SUNPURE refined sunflower Oil Presents Puttur's biggest show Puttura Habba organized by the popular event managers of the coastal Karnataka Time & Tide On Saturday, April 16, 2016. The cultural fest will be held at the taluk kreedangana, near Govt junior college, Kombettu Puttur, Mangaluru.
Please Wait while comments are loading...