ಪುತ್ತೂರು ತೆಪ್ಪ ದುರಂತ: ಇಬ್ಬರ ಶವ ಪತ್ತೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಡಿಸೆಂಬರ್, 16 : ಕುಮಾರಧಾರ ನದಿಯಲ್ಲಿ ನಡೆದ ತೆಪ್ಪ ದುರಂತದಲ್ಲಿ ಸಾವನ್ನಪ್ಪಿರುವ ಇಬ್ಬರ ಶವ ಪತ್ತೆಯಾಗಿದೆ. ಪುತ್ತೂರು ತಾಲೂಕಿನ ಚಾರ್ವಾಕ ಗ್ರಾಮದ ಗುಜ್ಜರ್ಮೆ ಗುರುವಾರ ಕುಮಾರಧಾರ ನದಿಲ್ಲಿ ತೆಪ್ಪ ದುರಂತ ನಡೆದಿತ್ತು.

ಪುತ್ತೂರು ತಾಲೂಕಿನ ರಾಮಕುಂಜ ಗ್ರಾಮದ ಕುಂಜಣ್ಣ ಗೌಡ(70) ಹಾಗೂ ಸುಳ್ಯ ತಾಲೂಕಿನ ಚೊಕ್ಕಾಡಿ ನಿವಾಸಿ ವರ್ಷದ ಗಣೇಶ್(60) ಎಂದು ಗುರುತಿಸಲಾಗಿದೆ. ಮಂಗಳೂರು ಮುಳುಗು ತಜ್ಞರ ತಂಡ ಚುರುಕಿನ ಕಾರ್ಯಾಚರಣೆ ನಡೆಸಿ ಇಬ್ಬರ ಶವವನ್ನ ಪತ್ತೆಹಚ್ಚಿದ್ದಾರೆ. [ಬೆಳ್ತಂಗಡಿ, ಪುತ್ತೂರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ]

Puttur: Two feared drowned after boat capsizes in Kumaradhara river

ಘಟನೆ : ಅಲಂಕಾರು ಗ್ರಾಮದ ಬುಡೇರಿಯಾ ದೇವಸ್ಥಾನದಲ್ಲಿ ನೇಮೋತ್ಸವ ನಡೆಯುತ್ತಿತ್ತು. ಇದರಲ್ಲಿ ಪಾಲ್ಗೊಳ್ಳಲು ಗೌಡ ಹಾಗೂ ಗಣೇಶ್ ತೆಪ್ಪದ ಮೂಲಕ ದೇಗುಲಕ್ಕೆ ಹೋಗುತ್ತಿದ್ದರು.

ಆ ವೇಳೆ ಇದ್ದಕ್ಕಿದ್ದಂತೆ ಕುಮಾರಧಾರ ನದಿ ಮಧ್ಯೆ ತೆಪ್ಪ ಮುಳುಗಿದೆ. ಈ ತೆಪ್ಪದಲ್ಲಿ ಮೂರು ಮಂದಿ ಇದ್ದರು. ನಾವಿಕ ನಾರಾಯಣ ಎಂಬುವವರು ಈಜಿ ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದರು. ಆದರೆ ಕುಂಜಣ್ಣ ಗೌಡ ಹಾಗೂ ಗಣೇಶ್ ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Two persons have been feared drowned after their basket boat capsized in the Kumaradhara river near Gujjarme in Kadaba here on Thursday December 15.
Please Wait while comments are loading...