ಐ-ಫೆಸ್ಟ್ 2 ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಪುತ್ತೂರಿನ ಅನೀಶಾ!

Posted By: Ramesh
Subscribe to Oneindia Kannada

ಮಂಗಳೂರು, ಜನವರಿ. 06 : ಇತ್ತೀಚೆಗೆ ಅಮೆರಿಕಾದ ಹ್ಯೂಸ್ಟನ್ ನಲ್ಲಿ ನಡೆದ ಒಲಂಪಿಯಾಡ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಅನೀಶಾ ನಾಯಕ್, ಟುನೀಶಿಯಾದಲ್ಲಿ ನಡೆಯಲಿರುವ ಐ-ಫೆಸ್ಟ್ 2 ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತ ಪರ ಸ್ಪರ್ಧೆ ಮಾಡಲಿದ್ದಾಳೆ.

ಐ-ಫೆಸ್ಟ್ 2 ಅಂತಾರಾಷ್ಟ್ರೀಯ ಸ್ಪರ್ಧೆ ಜನವರಿ 06ರಿಂದ ಜ.14ರ ವರೆಗೆ ಟುನೀಶಿಯಾದಲ್ಲಿ ನಡೆಯಲಿದೆ.ಪುತ್ತೂರಿನ ಸುದಾನ ಶಾಲೆಯ 10ನೇ ತರಗತಿ ಓದುತ್ತಿರುವ ಅನೀಶಾ ನಾಯಕ್ ಭಾರತದ ಯುವ ಸರ್ಫಿಂಗ್ ಆಟಗಾರ್ತಿಯಾಗಿದ್ದಾಳೆ.

ಇತ್ತೀಚೆಗೆ ಅಮೆರಿಕಾದ ಹ್ಯೂಸ್ಟನ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಸಸ್ಟೇನಬಲ್ ವರ್ಲ್ಡ್ ಪ್ರಾಜೆಕ್ಟ್ ಒಲಂಪಿಯಾಡ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಯಶಸ್ವಿಯಾಗಿದ್ದರು. [ಹ್ಯೂಸ್ಟನ್‌ನಲ್ಲಿ ಕಂಚಿನ ಪದಕ ಗೆದ್ದ ಪುತ್ತೂರಿನ ಹುಡುಗಿ]

Puttur student Aneesha to attend Tunisia I -FEST² at Tunisia

ಅದರ ಯಶಸ್ವಿಯಲ್ಲೇ ಈ ಐ-ಫೆಸ್ಟ್ 2 ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾಳೆ. ಭಾರತದ ಅತೀ ಕಿರಿಯ ಸರ್ಫರ್ ಗಳಲ್ಲಿ ಅನೀಶಾ ಒಬ್ಬರಾಗಿದ್ದು ಇವರ ಕುರಿತು ಸಣ್ಣ ಸಾಕ್ಷ್ಯ ಚಿತ್ರ ಕೂಡಾ ತಯಾರು ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಅನೀಶಾ, ಐ-ಫೆಸ್ಟ್ 2 ಅಂತಾರಾಷ್ಟೀಯ ಸ್ಪರ್ಧೆಯಾಗಿದ್ದು ಟುನೆಶಿಯಾದಲ್ಲಿ ಭಾಗವಹಿಸಲಿದ್ದೇನೆ. ಒಂಭತ್ತು ದಿನಗಳ ಸ್ಪರ್ಧೆ ಇದಾಗಿದ್ದು ಟುನೀಶಿಯಾದ ಆಟಸ್ಟ್ ಅವರ ಸಹಯೋಗದಲ್ಲಿ ನಡೆಯಲಿದೆ.

ಇನ್ನು ಸರ್ಫಿಂಗ್ ನಲ್ಲಿ ಸಾಧನೆ ತೋರುವ ಛಲ, ಆಸಕ್ತಿ ನನಗೆ ಇದೆ. ಇಲ್ಲಿಯ ತನಕ ನನ್ನ ಸಾಧನೆಗೆ ಅನೇಕರು ಸಹಕಾರ ನೀಡಿದ್ದಾರೆ ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

ಅಂತಾರಾಷ್ಟ್ರೀಯ ಎಂಜಿನಿಯರಿಂಗ್ ವಿಜ್ಞಾನ ಮತ್ತು ತಂತ್ರಜ್ಞಾನ ಟುನಿಷಿಯಾದ ಫೆಸ್ಟ್ ಗೆ ಆಯ್ಕೆಯಾಗಿರುವುದು ನಿಜಕ್ಕೂ ಸಂತಸದ ಸಂಗತಿಯಾಗಿದ್ದು.

ಈ ಸ್ಪರ್ಧೆಯಲ್ಲಿ ಜಯಶಾಲಿಯಾಗಿ ಬರಲಿ ಎಂದು ಹಾರೈಸೋಣ. ಗುಡ್ ಲಕ್ ಅನೀಶಾ....

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A student of SSLC from Puttur has been invited to attend I-FEST², an International Festival of Engineering Science and Technology in Tunisia, which will be held from January 6 to January 14.
Please Wait while comments are loading...