ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪುತ್ತೂರಿನಲ್ಲಿ ಆಟೋ ಚಾಲಕರಿಗೂ ಹೆಲ್ಮೆಟ್ ಕಡ್ಡಾಯ!?

|
Google Oneindia Kannada News

ಮಂಗಳೂರು, ಜುಲೈ. 30: ದ್ವಿಚಕ್ರ ವಾಹನ ಸವಾರ ಹಾಗೂ ಸಹ ಸವಾರ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂಬ ಕಾನೂನು ಜಾರಿ ಮಾಡಲಾಗಿದೆ. ಆದರೆ ಆಟೋ ರಿಕ್ಷಾ ಚಾಲಕರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂಬ ಕಾನೂನು ದೇಶದ ಯಾವ ಮೂಲೆಯಲ್ಲೂ ಇಲ್ಲ .

ಆದರೆ ಈ ಕಾನೂನನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಂಚಾರಿ ಪೊಲೀಸರು ಜಾರಿಗೆ ತಂದಿರುವ ಪ್ರಸಂಗ ಬೆಳೆಕಿಗೆ ಬಂದಿದೆ.

ವೈರಲ್ ವಿಡಿಯೋ : ಬೈಕ್ ಸವಾರನಿಗೆ ಜೀವದಾನ ಮಾಡಿದ ಹೆಲ್ಮೆಟ್!ವೈರಲ್ ವಿಡಿಯೋ : ಬೈಕ್ ಸವಾರನಿಗೆ ಜೀವದಾನ ಮಾಡಿದ ಹೆಲ್ಮೆಟ್!

ಇನ್ನು ಮುಂದೆ ಪುತ್ತೂರು ನಗರದಲ್ಲಿ ಆಟೋ ಚಲಾಯಿಸುವ ಚಾಲಕರೂ ಹೆಲ್ಮೆಟ್ ಧರಿಸಬೇಕೆಂಬ ಹೊಸ ನಿಯಮವೊಂದನ್ನು ಪುತ್ತೂರು ಪೋಲೀಸರು ಜಾರಿಗೊಳಿಸಿದ್ದಾರೆಯೇ ಎನ್ನುವ ಗೊಂದಲ ಮೂಡುವಂತಹ ವಿದ್ಯಾಮಾನವೊಂದು ನಡೆದಿದೆ.

Puttur police registered case against Auto driver not wearing helmet

ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಆಟೋ ಒಂದನ್ನು ನಿಲ್ಲಿಸಿದ ಪುತ್ತೂರು ಪೊಲೀಸರು ಮಿತಿಗಿಂತ ಹೆಚ್ಚು ಮಕ್ಕಳನ್ನು ಆಟೋದಲ್ಲಿ ತುಂಬಿಸಿದ್ದ ಕಾರಣಕ್ಕೆ ಅಟೋ ಚಾಲಕನ ಮೇಲೆ ಕೇಸು ಹಾಕಿದ್ದಾರೆ. ಆಟೋದಲ್ಲಿ 9 ಮಕ್ಕಳನ್ನು ಕಾನೂನು ಬಾಹಿರವಾಗಿ ಕರೆದುಕೊಂಡು ಹೋಗುತ್ತಿದ್ದ ರಿಕ್ಷಾ ಚಾಲಕನ ಮೇಲೆ ಕೇಸು ದಾಖಲಿಸಿರುವುದು ಸರಿ.

ಆದರೆ ಈ ಕೇಸಿನ ಪ್ರಮುಖ ಅಂಶ ಎಂದರೆ ಚಾಲಕ ಹೆಲ್ಮೆಟ್ ಹಾಕದೆ ವಾಹನ ಚಲಾಯಿಸಿದ್ದಕ್ಕೂ ಪೊಲೀಸರು ಕೇಸು ಹಾಕಿದ್ದಾರೆ. ಪೋಲೀಸರು ನೀಡಿದ ಈ ನೋಟೀಸ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿ ವೈರಲ್ ಆಗಿದೆ.

ಕಣ್ತಪ್ಪಿನಿಂದ ಈ ಅಚಾತುರ್ಯ ನಡೆದಿದೆ ಎಂದು ಪೋಲೀಸರು ಸಮಜಾಯಿಷಿ ನೀಡಿದ್ದಾರೆ. ನಂತರ ಪೊಲೀಸರು ನೋಟೀಸ್ ನಲ್ಲಿ ಮಾರ್ಪಾಡು ಮಾಡಿದರು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ನೋಟೀಸನ್ನು ಪೊಲೀಸರು ಹೇಗೆ ಸರಿಪಡಿಸುತ್ತಾರೆ ಎಂಬುದೇ ಕುತೂಹಲ.

English summary
Puttur traffic Police registered the case against Auto driver for not wearing helmet. In connection to this case , the notice given by Puttur Police viral in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X