ಪುತ್ತೂರಿನ ಯುವಕ ಸೌದಿ ಅರೇಬಿಯಾದಲ್ಲಿ ನಿಗೂಢ ಸಾವು

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಪುತ್ತೂರು, ಮಾರ್ಚ್. 16 : ಪುತ್ತೂರಿನ ಯುವಕನೊಬ್ಬ ಸೌದಿ ಅರೇಬಿಯಾದಲ್ಲಿ ನಿಗೂಢವಾಗಿ ಮೃತ ಪಟ್ಟಿರುವ ಬಗ್ಗೆ ವರದಿಯಾಗಿದೆ.

ಪುತ್ತೂರು ಹೊರವಲಯದ ಮುಕ್ವೆಯ ನಿವಾಸಿ ಹುಸೈನರ್ ಎಂಬವರ ಪುತ್ರ ಅಶ್ರಫ್ ಸೌದಿಯಲ್ಲಿ ಸಾವನ್ನಪ್ಪಿದ್ದಾರೆ. ಮದುವೆಯಾಗಿ ಇಬ್ಬರು ಮಕ್ಕಳ ತಂದೆಯಾಗಿರುವ ಅಶ್ರಫ್ ಕಳೆದ ಒಂದೂವರೆ ವರ್ಷಗಳಿಂದ ಸೌದಿಯಲ್ಲಿ ಉದ್ಯೋಗ ಮಾಡುತ್ತಿದ್ದರು.

Puttur Man mysterious Dead in Saudi Arabia

ಅಶ್ರಫ್ ಅವರು ಹೇಗೆ ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ ಎಂಬ ಆರಂಭಿಕ ಮಾಹಿತಿ ಬಂದಿತ್ತಾದರೂ, ಇದೊಂದು ಕೊಲೆ ಆಗಿರುವ ಬಗ್ಗೆ ಇನ್ನೊಂದು ಮೂಲದಿಂದ ಸಂಶಯವೂ ವ್ಯಕ್ತವಾಗಿದೆ.

ತಾಂತ್ರಿಕ ಅಡಚಣೆಗಳಿರುವುದರಿಂದ ಮೃತದೇಹವನ್ನು ಹುಟ್ಟೂರಿಗೆ ತರಲು ವಿಳಂಬವಾಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A person from Puttur died under mysterious circumstances in Saudi Arabia. The deceased has been identified as Ashraf, son of Hassainar, resident of Mukve in the outskirts of the city.
Please Wait while comments are loading...