ಪುತ್ತೂರಿನ ಕೊಂಬೆಟ್ಟು ಕಾಲೇಜೀಗ ನ್ಯಾಪ್ಕಿನ್ ಗಳ ಡಂಪಿಂಗ್ ಯಾರ್ಡ್

By: ಕಿರಣ್ ಸಿರ್ಸೀಕರ್
Subscribe to Oneindia Kannada

ಮಂಗಳೂರು, ಆಗಸ್ಟ್ 4: ಸರಕಾರ ಘೋಷಿಸುವ ಹಲವು ಯೋಜನೆಗಳು ಅವುಗಳ ಸಮರ್ಪಕ ಅನುಷ್ಠಾನದ ಸಮಸ್ಯೆಯಿಂದ ವಿಫಲವಾಗುವುದಕ್ಕೆ ಸ್ಪಷ್ಟ ಉದಾಹರಣೆಯೊಂದು ಇಲ್ಲಿದೆ.

ಬಡ ಹೆಣ್ಣು ಮಕ್ಕಳಿಗೆ ಉಚಿತವಾಗಿ ನ್ಯಾಪ್ಕಿನ್ ನೀಡುವ ಯೋಜನೆ ಸರಕಾರದ ಬಳಿಯಿದೆ. ಆದರೆ ಇದು ಹೆಣ್ಣು ಮಕ್ಕಳನ್ನು ಮಾತ್ರ ತಲುಪಿಲ್ಲ. ಪುತ್ತೂರು ತಾಲೂಕಿನ 12 ಪದವಿ ಪೂರ್ವ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯರಿಗೆ ನೀಡಬೇಕಾಗಿದ್ದ ಲಕ್ಷಾಂತರ ಮೌಲ್ಯದ ನ್ಯಾಪ್ಕಿನ್ ಗಳು ಇದೀಗ ಪುತ್ತೂರಿನ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯರ್ಥವಾಗುತ್ತಿವೆ.

Puttur Kombettu govt college turns to be dumping yard of napkins

ಇತರ ಕಾಲೇಜುಗಳಿಗೆ ಸರಕಾರದ ಯಾವುದೇ ಆದೇಶ ಇಲ್ಲದ ಹಿನ್ನಲೆಯಲ್ಲಿ ಯಾವ ಕಾಲೇಜುಗಳೂ ಈ ನ್ಯಾಪ್ಕಿನ್ ಗಳನ್ನು ಕೊಂಬೆಟ್ಟು ಕಾಲೇಜಿನಿಂದ ಕೊಂಡೊಯ್ಯಲು ಹಿಂದೇಟು ಹಾಕುತ್ತಿರುವುದೇ ಇದಕ್ಕೆ ಕಾರಣವಾಗಿದೆ.

ಕೊಂಬೆಟ್ಟು ಕಾಲೇಜಿನ ಸಿಬ್ಬಂದಿವರ್ಗ ಈಗಾಗಲೇ ಹಲವು ಕಾಲೇಜುಗಳಿಗೆ ಈ ಬಗ್ಗೆ ಮಾಹಿತಿಯನ್ನು ನೀಡಿದ್ದರೂ, ಯಾವ ಕಾಲೇಜುಗಳೂ ಶಿಕ್ಷಣ ಇಲಾಖೆಯ ಅನುಮತಿಯಿಲ್ಲದ ಕಾರಣ ನ್ಯಾಪ್ಕಿನ್ ಗಳನ್ನು ಪಡೆಯಲು ಹಿಂದೇಟು ಹಾಕುತ್ತಿದೆ. ಲೋಡುಗಟ್ಟಲೆ ನ್ಯಾಪ್ಕಿನ್ ಗಳು ಇದೀಗ ಕಾಲೇಜಿನಲ್ಲಿ ಡಂಪ್ ಆಗಿದ್ದು, ಬಡ ವಿದ್ಯಾರ್ಥಿನಿಯರಿಗೆ ತಲುಪಬೇಕಾದ ವ್ಯವಸ್ಥೆ ಮಣ್ಣು ಪಾಲಾಗುತ್ತಿದೆ.

Puttur Kombettu govt college turns to be dumping yard of napkins

ಸರಕಾರ ಶಾಲೆ ಹಾಗೂ ಕಾಲೇಜುಗಳಲ್ಲಿ ಕಲಿಯುತ್ತಿರುವ ಬಡ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರದ ವತಿಯಿಂದಲೇ ನ್ಯಾಪ್ಕಿನ್ ಗಳನ್ನು ಉಚಿತವಾಗಿ ವಿತರಿಸುವ ಜನಪರ ಯೋಜನೆಯನ್ನು ಆರಂಭಿಸಲಾಗಿತ್ತು. ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಿಲ್ಲವೇ ಎನ್ನುವ ಸಂಶಯ ಇದೀಗ ಕಾಡತೊಡಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The government have a plan to distribute free napkins for poor girls. But this does not reach this girls. Napkins belongs to 12 undergraduate colleges in Puttur taluk are now wasted at Kombettu Government College, Puttur.
Please Wait while comments are loading...