ಹ್ಯೂಸ್ಟನ್‌ನಲ್ಲಿ ಕಂಚಿನ ಪದಕ ಗೆದ್ದ ಪುತ್ತೂರಿನ ಹುಡುಗಿ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮೇ 05 : ಪುತ್ತೂರಿನ ಅನೀಶಾ ನಾಯಕ್ ಅಮೆರಿಕಾದ ಹ್ಯೂಸ್ಟನ್‌ನಲ್ಲಿ ನಡೆದ ಒಲಂಪಿಯಾಡ್‌ನಲ್ಲಿ ಕಂಚಿನ ಪದಕ ಗಳಿಸಿದ್ದಾಳೆ. ಭಾರತದಿಂದ ಇಬ್ಬರು ವಿದ್ಯಾರ್ಥಿಗಳು ಸ್ಪರ್ಧೆಗೆ ಆಯ್ಕೆಯಾಗಿದ್ದರು. ದಕ್ಷಿಣ ಭಾರತದಿಂದ ಅನೀಶಾ ಆಯ್ಕೆಯಾಗಿದ್ದಳು.

ಅನೀತಾ ನಾಯಕ್ ಪುತ್ತೂರಿನ ಸುದಾನಾ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ. ಅಮೆರಿಕದ ಹ್ಯೂಸ್ಟನ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಸಸ್ಟೇನಬಲ್ ವರ್ಲ್ಡ್ ಪ್ರಾಜೆಕ್ಟ್ ಒಲಂಪಿಯಾಡ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಈಕೆ ಕಂಚಿನ ಪದಕಗಳಿಸಿ, ಪುತ್ತೂರಿಗೆ ಕೀರ್ತಿ ತಂದಿದ್ದಾಳೆ. [ಪುತ್ತೂರು ಮಹಾಲಿಂಗೇಶ್ವರ ಜಾತ್ರೆ ವಿವಾದಕ್ಕೆ ತೆರೆ ಎಳೆದ ಹೈಕೋರ್ಟ್]

aneesha nayak

ಜನವರಿ 10ರಂದು ರಾಜಕೋಟ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಅನೀಶಾ ನಾಯಕ್ 'Hydrophobicity of Colocasia extract as wall paper protector' ಎಂಬ ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ವಿವಿಧ ಹಂತಗಳಲ್ಲಿ ಪ್ರಥಮ ಸ್ಥಾನ ಪಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ್ದಳು. ಕರ್ನಾಟಕದಿಂದ ಆಯ್ಕೆಯಾದ ಏಕೈಕ ವಿಜ್ಞಾನ ಪ್ರಾಜೆಕ್ಟ್ ಇದಾಗಿತ್ತು. ['ಇಜ್ಞಾನ ಡಾಟ್ ಕಾಮ್' ಗೆ 10ನೇ ವರ್ಷಾಚರಣೆ ಸಂಭ್ರಮ]

ಅನೀಶಾ ನಾಯಕ್ ಸಾಧನೆಗೆ ಶಾಲೆಯ ವಿಜ್ಞಾನ ಶಿಕ್ಷಕಿ ಸಾಧನಾ ಹೆಬ್ಬಾರ್ ಮಾರ್ಗದರ್ಶಕರು. ಚಿಕ್ಕವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿದ ಅನೀಶಾ ಸಾಧನೆಗೆ ಶಾಲೆಯ ಆಡಳಿತ ಮಂಡಳಿಯವರು ಸಂಸತ ವ್ಯಕ್ತಪಡಿಸಿದ್ದಾರೆ. [ನಾಸಾ ಸಂಸ್ಥೆ ಸ್ಪರ್ಧೆ ಗೆದ್ದ ಬೆಂಗಳೂರಿನ ವಿದ್ಯಾರ್ಥಿನಿ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Puttur Sudana Residential school student Aneesha Nayak has won the bronze medal at the International Sustainable World Project Olympiad conducted at Houston, United States.
Please Wait while comments are loading...