ಐ-ಫೆಸ್ಟ್ 2 ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನ ತಂದ ಪುತ್ತೂರಿನ ಅನೀಶಾ!

Posted By: Ramesh
Subscribe to Oneindia Kannada

ಮಂಗಳೂರು, ಜನವರಿ. 12 : ಟುನೀಶಿಯಾದಲ್ಲಿ ಜನವರಿ 6ರಿಂದ ಆರಂಭವಾಗಿದ್ದ ಐ-ಫೆಸ್ಟ್ 2 ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಪುತ್ತೂರಿನ ಮೂಲದ ಅನೀಶಾ ನಾಯಕ್ ಚಿನ್ನದ ಪದಕ ಗೆದ್ದಿದ್ದಾಳೆ.

ಟುನೀಶಿಯಾದ ಆಟಸ್ಟ್ ಅವರ ಸಹಯೋಗದಲ್ಲಿ ನಡೆದ ಐ-ಫೆಸ್ಟ್ 2 ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಅನೀಶಾ ಭಾರತಕ್ಕೆ ಚಿನ್ನದ ಪದಕ ತಂದುಕೊಡುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.[ಐ-ಫೆಸ್ಟ್ 2 ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಪುತ್ತೂರಿನ ಅನೀಶಾ!]

Puttur girl Aneesha Nayak wins Gold medal in I-Fest 2017 at Tunisia

ಇನ್ನು ಇತ್ತೀಚೆಗೆ ಅಮೆರಿಕಾದ ಹ್ಯೂಸ್ಟನ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಸಸ್ಟೇನಬಲ್ ವರ್ಲ್ಡ್ ಪ್ರಾಜೆಕ್ಟ್ ಒಲಂಪಿಯಾಡ್ ಸ್ಪರ್ಧೆಯಲ್ಲಿ ಕೂಡ ಕಂಚಿನ ಪದಕ ಗೆದ್ದಿರುವುದನ್ನು ಇಲ್ಲಿ ಸ್ಮರಿಸಬಹುದು.

ಪುತ್ತೂರಿನ ಸುದಾನ ಶಾಲೆಯ 10ನೇ ತರಗತಿ ಓದುತ್ತಿರುವ ಅನೀಶಾ ನಾಯಕ್ ಭಾರತದ ಯುವ ಸರ್ಫಿಂಗ್ ಆಟಗಾರ್ತಿಯಾಗಿದ್ದಾಳೆ. ಅಲ್ಲದೆ ಭಾರತದ ಅತೀ ಕಿರಿಯ ಸರ್ಫರ್ ಗಳಲ್ಲಿ ಅನೀಶಾ ಒಬ್ಬರಾಗಿದ್ದಾರೆ.[ಹ್ಯೂಸ್ಟನ್‌ನಲ್ಲಿ ಕಂಚಿನ ಪದಕ ಗೆದ್ದ ಪುತ್ತೂರಿನ ಹುಡುಗಿ]

ಅಂತಾರಾಷ್ಟ್ರೀಯ ಎಂಜಿನಿಯರಿಂಗ್ ವಿಜ್ಞಾನ ಮತ್ತು ತಂತ್ರಜ್ಞಾನ ಟುನೀಶಾಯಾದ ಫೆಸ್ಟ್ ಗೆ ಆಯ್ಕೆಯಾಗಿದ್ದ ಅನೀಶಾ ಈಗ ಚಿನ್ನದ ಪದಕ ಪಡೆದಿರುವುದು ನಿಜಕ್ಕೂ ಆಶ್ಚರ್ಯ ಹಾಗೂ ಸಂತೋಷ ಎಂದು ಶಾಲೆಯ ಅಧ್ಯಾಪಕರು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ಮಂಗಳೂರಿನ ಮಂತ್ರ ಸರ್ಫ್ ಕ್ಲಬ್ ನ ಸದ್ಯಸರು ಕೂಡ ಈಕೆಯ ಸಾಧನೆಗೆ ಭೇಷ್ ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Puttur girl Aneesha Nayak wins Gold medal at I-Fest 2017 in Tunisia. Aneesha had represented India at an international level for a science fair and bags gold medal.
Please Wait while comments are loading...