ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ರಾಜೀನಾಮೆಗೆ ಬಿಜೆಪಿ ಒತ್ತಾಯ

Posted By:
Subscribe to Oneindia Kannada

ಮಂಗಳೂರು, ಅ.11 : 'ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸಚಿವ ರಮಾನಾಥ ರೈ ಗೆಳೆಯರ ಬಳಗದ ವಾಟ್ಸಪ್ ಗ್ರೂಪ್ ನಲ್ಲಿ ನೀಲಿ ಚಿತ್ರ ರವಾನೆ ಮಾಡಿದ ಕುರಿತು ಜನರಿಗೆ ಉತ್ತರ ಕೊಡಬೇಕು' ಎಂದು ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಚಾಳಿ ಚಿನ್ನಪ್ಪ ಶೆಟ್ಟಿ ಒತ್ತಾಯಿಸಿದ್ದಾರೆ.

ರಮಾನಾಥ ರೈ ಗೆಳೆಯರ ಬಳಗ ವಾಟ್ಸಪ್ ಗ್ರೂಪ್‌ನಲ್ಲಿ ನೀಲಿ ಚಿತ್ರ!

ಮಾಧ್ಯಮಗಳ ಜೊತೆ ಮಾತನಾಡಿದ ಚಾಳಿ ಚಿನ್ನಪ್ಪ ಶೆಟ್ಟಿ ಅವರು, 'ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸದನದಲ್ಲಿ ನೀಲಿ ಚಿತ್ರ ನೋಡಲಾಗಿದೆ ಎಂದು ಗದ್ದಲವೆಬ್ಬಿಸಿದ ಕಾಂಗ್ರೆಸ್ ಎಂದು ತನ್ನದೇ ಪಕ್ಷದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ವಾಟ್ಸಪ್ ಗ್ರೂಪ್ ನಲ್ಲಿ ನೀಲಿ ಚಿತ್ರ ರವಾನೆ ಮಾಡಿದ ಉತ್ತರ ಕೊಡಬೇಕು' ಎಂದರು.

Puttur BJP leaders urge for resignation of block Congress president Fazal Rahim

ನಗರ ಮಂಡಲ ಬಿಜೆಪಿ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, 'ನೀಲಿ ಚಿತ್ರ ರವಾನೆ ವಿವಾದದಲ್ಲಿ ಸಿಲುಕಿರುವ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಹೈಕಮಾಂಡ್ ಅವರನ್ನು ವಜಾಗೊಳಿಸಬೇಕು' ಎಂದು ಆಗ್ರಹಿಸಿದರು.

'ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಅವರು ಇಂತಹ ವಿಚಾರದಲ್ಲಿ ಯಾರೇ ತಪ್ಪು ಮಾಡಿದರೂ ಅದು ತಪ್ಪು ಎಂದಿದ್ದಾರೆ. ಅವರು ನೀಲಿ ಚಿತ್ರವನ್ನು ರವಾನೆ ಮಾಡಿದ ವಿಚಾರದಲ್ಲಿ ಒಬ್ಬರು ಮಹಿಳೆಯಾಗಿ ತಮ್ಮದೇ ಪಕ್ಷದ ಬ್ಲಾಕ್ ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಬೇಕು' ಎಂದು ಜೀವಂಧರ್ ಜೈನ್ ಹೇಳಿದರು.

'ಪುತ್ತೂರಿನ ಶಾಸಕರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ರಕ್ಷಿಸುವ ಯತ್ನ ಮಾಡುತ್ತಿದ್ದಾರೆ ಎಂಬ ಸಂಶಯ ವ್ಯಕ್ತವಾಗುತ್ತದೆ.

ಕರ್ನಾಟಕ ಗೃಹ ಸಚಿವರಾಗಿ ರಮಾನಾಥ ರೈ?

ಆದ ಕಾರಣ ಪುತ್ತೂರು ಶಾಸಕರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ರಾಜೀನಾಮೆಯನ್ನು ಒತ್ತಾಯಿಸಿ ಬಹಿರಂಗ ಹೇಳಿಕೆ ನೀಡಬೇಕು' ಎಂದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝಲ್ ರಹೀಂ ಎರಡು ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಅವರ ಗೆಳೆಯರ ಬಳಗ ವಾಟ್ಸಪ್ ಗ್ರೂಪ್ ನಲ್ಲಿ ನೀಲಿ ಚಿತ್ರ ಶೇರ್ ಮಾಡಿದ್ದರು. ಈ ಗ್ರೂಪ್ ನಲ್ಲಿ ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ ಸೇರಿದಂತೆ ಹಲವು ಮಹಿಳೆಯರಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Puttur BJP leaders urge for resignation of block Congress president Fazal Rahim who is facing embarrassment after he shared a blue film video clip to five groups including a WhatsApp group run by the fans of Dakshina Kannada district in-charge minister B Ramanath Rai.
Please Wait while comments are loading...