ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳ್ತಂಗಡಿಯಲ್ಲಿ ಭಗವಧ್ವಜಕ್ಕೆ ಬೆಂಕಿ, ದಕ್ಷಿಣ ಕನ್ನಡದಲ್ಲಿ ಭುಗಿಲೆದ್ದ ಆಕ್ರೋಶ

|
Google Oneindia Kannada News

ಮಂಗಳೂರು, ಆಗಸ್ಟ್ 29: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಗಧ್ವಜಕ್ಕೆ ಬೆಂಕಿ ಇಟ್ಟಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಬೆಳ್ತಂಗಡಿಯಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯೊಂದರಲ್ಲಿ ಭಗವಧ್ವಜಕ್ಕೆ ಬೆಂಕಿ ಹೊತ್ತಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಕುರಿತ ವೀಡಿಯೊ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಪ್ರತಿಭಟನೆ ಸಂದರ್ಭದಲ್ಲಿ ಹಿಂದೂ ಭಗವಧ್ವಜಕ್ಕೆ ಬೆಂಕಿ ಇಟ್ಟಿರುವ ವಿಚಾರವಾಗಿ ಇದೀಗ ಜಿಲ್ಲೆಯಲ್ಲಿ ಭಾರೀ ಚರ್ಚೆ ಆರಂಭಗೊಂಡಿದೆ. ದಲಿತ ಸಂಘಟನೆಗಳು ಬೆಳ್ತಂಗಡಿಯ ಮಿನಿ ವಿಧಾನಸೌಧದ ಮುಂಭಾಗ ನಡೆಸಿದ್ದ ಪ್ರತಿಭಟನೆ ಸಂದರ್ಭದಲ್ಲಿ ಈ ಭಗವಧ್ವಜವನ್ನು ಸುಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

Protesters Burns Bhagwa flag in Belthangady

ಪಕ್ಷದ ಬಾವುಟ ಹಾರಿಸಿ, ಪ್ರಮುಖರನ್ನು ಹೆಸರಿಸಿದ ಕಮಲ್ಪಕ್ಷದ ಬಾವುಟ ಹಾರಿಸಿ, ಪ್ರಮುಖರನ್ನು ಹೆಸರಿಸಿದ ಕಮಲ್

ವಿಡಿಯೋದಲ್ಲಿ ದಲಿತ ಸಂಘಟನೆಗಳ ಕಾರ್ಯಕರ್ತರು ಆರ್.ಎಸ್.ಎಸ್ ವಿರುದ್ಧ ಘೋಷಣೆ ಕೂಗುವ ಜೊತೆಗೆ ಹಿಂದೂ ಭಗಧ್ವಜಕ್ಕೂ ಬೆಂಕಿ ಹಚ್ಚುವ ಘಟನೆ ಸೆರೆಹಿಡಿಯಲಾಗಿದೆ. ಈ ವಿಚಾರವಾಗಿ ಇದೀಗ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

Protesters Burns Bhagwa flag in Belthangady

ಅಧಿಕೃತ ನಾಡಧ್ವಜಕ್ಕೆ ಸದ್ಯಕ್ಕೆ ಮಾನ್ಯತೆ ಇಲ್ಲ: ಕೇಂದ್ರಅಧಿಕೃತ ನಾಡಧ್ವಜಕ್ಕೆ ಸದ್ಯಕ್ಕೆ ಮಾನ್ಯತೆ ಇಲ್ಲ: ಕೇಂದ್ರ

ಹಿಂದೂ ಸಂಘಟನೆ ಹಾಗು ಸಂಘ ಪರಿವಾರಗಳ ಭದ್ರಕೋಟೆಯಾಗಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಘಟನೆ ನಡೆದಿರುವುದು ಹಿಂದೂ ಸಂಘಟನೆಗಳನ್ನು ಕೆರಳಿಸಿದೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿಯೂ ಪರ-ವಿರೋಧ ಚರ್ಚೆಗಳು ಆರಂಭಗೊಂಡಿದ್ದು, ಭಗಧ್ವಜಕ್ಕೆ ಬೆಂಕಿ ಇಟ್ಟವರನ್ನು ಈ ಕೂಡಲೇ ಬಂಧಿಸಬೇಕೆಂಬ ಕೂಗು ಕೇಳಿಬರುತ್ತಿದೆ.

English summary
During protest members of Dalith sanghatan burned Bhagwa Flag in Belthangady. Video of this incident viral in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X