ಮಂಗಳೂರಿನಲ್ಲಿ ವೆಬ್ ಸೈಟ್ ಮೂಲಕ ವೇಶ್ಯಾವಾಟಿಕೆ, ಇಬ್ಬರು ಪೊಲೀಸ್ ವಶಕ್ಕೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜನವರಿ 30: ಕಚಡಾ ಕೆಲಸ ಮಾಡಿದರೂ ಅದಕ್ಕೆ ಎಂಥೆಂಥ ವಿಧಾನ ಆರಿಸಿಕೊಳ್ಳುತ್ತಾರೆ ಗೊತ್ತಾ? ಅದಕ್ಕೆ ಇಲ್ಲೊಂದು ಉದಾಹರಣೆ ಇದೆ. ವೆಬ್ ಸೈಟ್ ಮೂಲಕ ವೇಶ್ಯಾವಾಟಿಕೆಗೆ ಯುವತಿಯರನ್ನು ಒದಗಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆಯುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಂಗಳೂರು ನಗರದ ಕೆ.ಎಸ್.ರಾವ್ ರಸ್ತೆಯ ಲಾಡ್ಜ್‌ವೊಂದನ್ನು ಕೇಂದ್ರೀಕರಿಸಿ, ಇಂಟರ್ ನೆಟ್ ಮೂಲಕ ವೇಶ್ಯಾವಾಟಿಕೆ ನಡೆಯುತ್ತಿತ್ತು. ಗ್ರಾಹಕರಿಗೆ ಯುವತಿಯರನ್ನು ಒದಗಿಸಿ, ವ್ಯವಹಾರ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು, ನಗರದ ಹಳೇ ಬಸ್ ನಿಲ್ದಾಣದ ಬಳಿಯಿಂದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.[ಮಂಗಳೂರಲ್ಲಿ ಆನ್ ಲೈನ್ ವೇಶ್ಯಾವಾಟಿಕೆ : ಐವರ ಬಂಧನ]

Prostitution racket busted, 2 held by CCB police in Mangaluru

ಬಂಧಿತರನ್ನು ತೊಕ್ಕೋಟ್ಟು ಪಿಲಾರ್ ನಿವಾಸಿ ಶೇಖ್ ಮುಹಮ್ಮದ್ ಹಾಗೂ ವಿರಾಜಪೇಟೆಯ ಬಾಳುಗೋಡಿ ಮೂಲದ ದೀಪಕ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಎರಡು ಮೊಬೈಲ್ ಫೋನ್ ಹಾಗೂ 12500 ರುಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.

ಸಿಸಿಬಿ ಘಟಕದ ಇನ್ ಸ್ಪೆಕ್ಟರ್ ಸುನಿಲ್ ವೈ. ನಾಯಕ್ , ಪಿಎಸ್ ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Two persons in connection with prostitution racket have been arrested by Mangaluru CCB police.
Please Wait while comments are loading...