ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡದಲ್ಲಿ ಅಶಾಂತಿ ವಾತಾವರಣ ಸೃಷ್ಟಿಯಾಗುತ್ತಿದೆ: ಪ್ರೊ.ರಾಧಾಕೃಷ್ಣ

|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 17: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸಲು ಸಂಸದ ನಳಿನ್ ಕುಮಾರ್ ಕಟೀಲ್ ಹಾಗು ಶೋಭಾ ಕರಂದ್ಲಾಜೆ ಯತ್ನಿಸುತ್ತಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ರಾಧಾಕೃಷ್ಣ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆ ಸೌಹಾರ್ದತೆಯ ಬೀಡಾಗಿದ್ದು, ಇಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ. ಅವರಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಕೆಟ್ಟ ಹೆಸರು ಬಂದಿದೆ ಎಂದು ಕಿಡಿಕಾರಿದರು.

ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ವ್ಯಂಗ್ಯವಾಡಿದ ರಮಾನಾಥ್ ರೈಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ವ್ಯಂಗ್ಯವಾಡಿದ ರಮಾನಾಥ್ ರೈ

ಇಲ್ಲಿ ಹಿಂದೂ ಹಾಗು ಮುಸ್ಲೀಮರ ಮಧ್ಯೆ ಅನ್ಯೋನ್ಯತೆ ಇದೆ. ರಾಜಕೀಯ ಕಾರಣಕ್ಕಾಗಿ ಅದನ್ನು ಹಾಳುಗೆಡಹುವ ಪ್ರಯತ್ನ ಮಾಡಲಾಗುತ್ತಿದೆ. ಯುವಕರಲ್ಲಿ ಮತೀಯ ಭಾವನೆ ಬಿತ್ತಿ ಸಾಮರಸ್ಯ ಹಾಳುಗೆಡಹುತ್ತಿದ್ದಾರೆ.

Prof Radahakrishna Says Nalin Kumar Kateel, Shobha Karandlaje bring disrepute to Dakshina Kannada

 ರಮಾನಾಥ್ ರೈ ಎಲ್ಲಾ ವಿಚಾರ ಕರಗತ ಮಾಡಿಕೊಂಡಿರುವ ಸರ್ವಜ್ಞ: ನಳಿನ್ ವ್ಯಂಗ್ಯ ರಮಾನಾಥ್ ರೈ ಎಲ್ಲಾ ವಿಚಾರ ಕರಗತ ಮಾಡಿಕೊಂಡಿರುವ ಸರ್ವಜ್ಞ: ನಳಿನ್ ವ್ಯಂಗ್ಯ

ಕಳೆದ 4 ವರ್ಷಗಳಿಂದ ಕೇಂದ್ರದ ಮೋದಿ ಸರ್ಕಾರ ಸಬ್‌ ಕಾ ವಿಕಾಸ್, ಅಚ್ಛೇ ದಿನ್ ಇತ್ಯಾದಿ ಹೇಳಿಕೆಗಳನ್ನು ನೀಡುತ್ತಾ ಜನರನ್ನು ನಂಬಿಸಿ ಮಂಕುಬೂದಿ ಎರಚುತ್ತಿದ್ದಾರೆ. ಕೇಂದ್ರ ಸರ್ಕಾರದ 37 ಘೋಷಣೆಗಳ ಪೈಕಿ ಯಾವ ಘೋಷಣೆಯನ್ನೂ ಕೂಡ ಯಥಾವತ್ತಾಗಿ ಅನುಷ್ಠಾನಗೊಳಿಸಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

Prof Radahakrishna Says Nalin Kumar Kateel, Shobha Karandlaje bring disrepute to Dakshina Kannada

 ಸಾಮಾಜಿಕ ಜಾಲತಾಣದಲ್ಲಿ 'ನಳಿನ್ ಹಠಾವೋ' ಚಳವಳಿಗೆ ಬಿಜೆಪಿ ನಾಯಕರ ಕುಮ್ಮಕ್ಕು? ಸಾಮಾಜಿಕ ಜಾಲತಾಣದಲ್ಲಿ 'ನಳಿನ್ ಹಠಾವೋ' ಚಳವಳಿಗೆ ಬಿಜೆಪಿ ನಾಯಕರ ಕುಮ್ಮಕ್ಕು?

ತೈಲ ಮತ್ತು ಅಡುಗೆ ಅನಿಲ ಬೆಲೆ ಏರಿಕೆಯನ್ನು ತಡೆಗಟ್ಟಲು ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದ ರಾಧಾಕೃಷ್ಣ, ಪ್ರತಿ ವಿಚಾರದಲ್ಲಿ ಕೇಂದ್ರದ ಸಚಿವ ಅರುಣ್ ಜೇಟ್ಲಿ, ನಿರ್ಮಲಾ ಸೀತಾರಾಮನ್, ನಿತಿನ್ ಗಡ್ಕರಿ ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದರು.

English summary
Mangaluru KPCC vice president Prof Radhakrishna slams BJP over communal issues. He said MP Nalin Kumar Kateel and Shobha Karandlaje bring disrepute to Dakshina Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X