ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗ್ಳೂರು ಜೈಲಿನಿಂದ ಕೈದಿ ಪರಾರಿ, ಬೆಳಗಾವಿ ಡಿಐಜಿ ತಂಡದಿಂದ ತನಿಖೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮಾರ್ಚ್. 13 : ಇತ್ತೀಚೆಗೆ ಮಂಗಳೂರು ಕೇಂದ್ರ ಕಾರಗೃಹದಿಂದ ಕೈದಿಯೊಬ್ಬ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಡಿಐಜಿ ಟಿ ಪಿ ಶೇಷ ನೇತೃತ್ವದ ತಂಡ ಭಾನುವಾರ ಜೈಲಿಗೆ ಭೇಟಿ ನೀಡಿ ತನಿಖೆ ನಡೆಸಿತು.

ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಕೈದಿ ಜಿನ್ನಪ್ಪ ಪರವ (43) ವಿಚಾರಣಾಧೀನ ಶುಕ್ರವಾರ ಬೆಳಿಗ್ಗೆ 3 ಗಂಟೆ ಸುಮಾರಿಗೆ ಪರಾರಿಯಾಗಿದ್ದ. ಈ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಡಿಐಜಿ ಟಿ ಪಿ ಶೇಷ ಅವರಿಗೆ ವಹಿಸಲಾಗಿತ್ತು.[ವಿಚಾರಣಾಧೀನ ಮಂಗಳೂರು ಕೇಂದ್ರ ಕಾರಾಗೃಹದಿಂದ ಕೈದಿ ಎಸ್ಕೇಪ್!]

Prisoner escaped Belgaum DIG police Shesha and team investigation in mangaluru central jail

ಇದರಿಂದ ಮಂಗಲೂರು ಕೇಂದ್ರ ಕಾರಗೃಹಕ್ಕೆ ಭಾನುವಾರ ಭೇಟಿ ನೀಡಿದ ಬೆಳಗಾವಿ ಡಿಐಜಿ ಟಿ ಪಿ ಶೇಷ, ಎಸ್ ಆರ್ ಭಟ್ ಸೇರಿದಂತೆ ಇತರೆ ಅಧಿಕಾರಿಗಳು ಬೆಳಿಗ್ಗೆ 8.15ಕ್ಕೆ ಮಂಗಳೂರು ಜೈಲಿಗೆ ಭೇಟಿ ನೀಡಿ ಸುಮಾರು 1 ಗಂಟೆ ವರೆಗೆ ಜೈಲಿನಲ್ಲಿ ತಪಾಸಣೆ ನಡೆಸಿದರು.

ಜೈಲಿನ ಸೂಪರಿಂಟೆಂಡ್ ಕೃಷ್ಣಮೂರ್ತಿ, ಜೈಲ್ ಅಧಿಕಾರಿಗಳು, ಕಾವಲು ಸಿಬ್ಬಂದಿಯಿಂದ ಹೇಳಿಕೆಗಳನ್ನು ಪಡೆದುಕೊಂಡ ಡಿಐಜಿ ಶೇಷ ಅವರು, ಕೈದಿ ಜಿನ್ನಪ್ಪ ಪರವ ಅಡುಗೆ ಕೆಲಸ ಮಾಡಿಕೊಂಡಿದ್ದ ಮೂವರು ಸಹ ಕೈದಿಗಳು ರಾತ್ರಿ ಹೊತ್ತು ಭದ್ರತೆ ನಿರ್ವಹಿಸುತ್ತಿದ್ದ ಸಿಬ್ಬಂದಿ ವಿಚಾರಣೆ ನಡೆಸಿದ್ದಾರೆ.

ಕೈದಿ ಪರಾರಿಯಾದ ಸಂದರ್ಭದಲ್ಲಿ ಸಿಸಿ ಟಿವಿಯಲ್ಲಿ ದಾಖಲಾದ ಫೋಟೋಗಳನ್ನು ಪರಿಶೀಲಿಸಿದರು. ಈಗಾಗಲೇ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗಿದ್ದು, ಈ ಕುರಿತ ವರದಿಯನ್ನು ಮುಂದಿನ ಎರಡು ದಿನಗಳೊಳಗೆ ಬಂಧಿಖಾನೆ ಡಿಜಿ ಸತ್ಯನಾರಾಯಣ ರಾವ್ ಅವರಿಗೆ ವರದಿ ಸಲ್ಲಿಸುವುದಾಗಿ ಡಿಐಜಿ ಟಿ ಪಿ ಶೇಷ ಹೇಳಿದ್ದಾರೆ.

English summary
Belgaum DIG police Shesha and team investigation in mangaluru central jail over the escape of prisoner on March 12. The prisoner escaped on March 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X