ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಲ್ಲಿ ಗರ್ಭಿಣಿ ಸಾವನ್ನಪ್ಪಲು ವೈದ್ಯರು ಕಾರಣರೇ?

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು,ಫೆಬ್ರವರಿ,22: ಕೆಲವು ದಿನಗಳ ಹಿಂದೆಯಷ್ಟೇ ಮಂಡ್ಯದಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ನವಜಾತ ಗಂಡು ಶಿಶು ಸಾವನ್ನಪ್ಪಿತ್ತು. ಇದೀಗ ಮಂಗಳೂರಿನಲ್ಲಿ ಗರ್ಭಿಣಿಯು ತನ್ನ ಪ್ರಾಣತೆತ್ತಿದ್ದು, ಕುಟುಂಬದವರು ವೈದ್ಯರ ವಿರುದ್ಧ ಪ್ರತಿಭಟಿಸಿದ ಘಟನೆ ಮಂಗಳೂರಿನ ಬಂಟ್ವಾಳ ತಾಲೂಕಿನಲ್ಲಿ ಭಾನುವಾರ ನಡೆದಿದೆ.

ಮಗುವಿಗೆ ಜನ್ಮ ನೀಡಿ ಮೃತಪಟ್ಟ ಮಹಿಳೆಯೇ ಗೀತಾ (28). ಈಕೆ ವಗ್ಗ ನಿವಾಸಿ ಸುನಿಲ್ ಶೆಟ್ಟಿಯವರ ಪತ್ನಿ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಗೀತಾಳನ್ನು ಆಕೆಯ ಕುಟುಂಬದವರು ಬಂಟ್ವಾಳದ ಸೋಮಯಾಜಿ ಆಸ್ಪತ್ರೆಗೆ ದಾಖಲಿಸಿದ್ದರು.[ವೈದ್ಯರ ನಿರ್ಲಕ್ಷ್ಯದಿಂದ ಮಂಡ್ಯದಲ್ಲಿ ನವಜಾತ ಶಿಶು ಸಾವು]

Mangaluru

ಘಟನೆಯ ವಿವರ:

ಹೆರಿಗೆ ನೋವು ಕಾಣಿಸಿಕೊಂಡಾಗ ಗೀತಾ ಅವರನ್ನು ಭಾನುವಾರ ಮಧ್ಯಾಹ್ನ ಒಂದು ಗಂಟೆಗೆ ಬಂಟ್ವಾಳದ ಸೋಮಯಾಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ವೈದ್ಯರು ಹೊಟ್ಟೆಯಲ್ಲಿ ಮಗು ತಿರುಗಿದೆ ಎಂದಷ್ಟೇ ತಿಳಿಸಿದ್ದರು.['ನನಗೆ ರೇಷ್ಮೆ ಸೀರೆ ಕೊಡ್ಸು ಎಂದ ಮಗಳೇ ಇಲ್ಲ' ಇದು ಅಪ್ಪನ ರೋದನ]

ಬಳಿಕ ಮನೆಯವರು ಏನೇ ಕೇಳಿದರೂ ಪ್ರತಿಕ್ರಿಯಿಸದ ವೈದ್ಯರ ಬಳಿ ಗೀತಾ ಅವರ ಸಂಬಂಧಿ ವೈದ್ಯರ ಕಾಲು ಹಿಡಿದು ಆಕೆಯನ್ನು ನೋಡಲು ಅವಕಾಶ ನೀಡಿ ಎಂದು ಕೇಳಿದಾಗ 'ನೀವು ನೋಡಬೇಕಾ ಒಳಗೆ ಹೋಗಿ ಒಮ್ಮೆ ನೋಡಿಬನ್ನಿ' ಹೇಳಿದರು. ಒಳಗೆ ಹೋದಾಗ ಗೀತಾ ವಿಪರೀತ ರಕ್ತಸ್ರಾವದಿಂದ ಬಳಲಿದ್ದರು.[ಮೈಸೂರು ಚೆಲುವಾಂಬ ಆಸ್ಪತ್ರೆಯಲಿಲ್ಲ ಬಾಣಂತಿಯರಿಗೆ ಸುರಕ್ಷೆ!]

ಸಂಜೆಯವರೆಗೂ ಸುಮ್ಮನಿದ್ದ ವೈದ್ಯರು ನಂತರ ಇಲ್ಲಿ ಚಿಕಿತ್ಸೆ ಸಾಧ್ಯವಿಲ್ಲ. ಮಂಗಳೂರಿಗೆ ಕರೆದುಕೊಂಡು ಹೋಗಿ ಎಂದಿದ್ದಾರೆ. ಅಷ್ಟರಲ್ಲೇ ಗೀತಾ ಅವರ ಪರಿಸ್ಥಿತಿ ಚಿಂತಾಜನಕವಾಗಿತ್ತು. ಆದರೂ ತಕ್ಷಣ ಲೇಡಿಗೋಷನ್ ಆಸ್ಪತ್ರೆಗೆ ದಾಖಲಿಸಿದಾಗ ಅಲ್ಲಿ ಐಸಿಯು ಕೊರತೆ ಇದೆ ಎಂದು ವೆನ್ಲಾಕ್ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಆದರೆ, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಗೀತಾ ಮೃತಪಟ್ಟಿದ್ದಾರೆ.[ವಿರೂಪರೇ, ಮರುಸೌಂದರ್ಯಕ್ಕಾಗಿ ವಿಕ್ಟೋರಿಯಾಕ್ಕೆ ತೆರಳಿ]

English summary
Pregnancy women Geetha died a doctors negligence in Venlakh hospital of Mangaluru on Sunday, February 21st. She is resident of Vagga village, Bantwal, Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X