ನಳಿನ್ ಗೆ ಸ್ವಲ್ಪವೂ ಬುದ್ಧಿಯಿಲ್ಲ, ಸಂಸ್ಕಾರವಿಲ್ಲ: ಸಿದ್ದರಾಮಯ್ಯ

Posted By: ಕಿರಣ್ ಸಿರ್ಸೀಕರ್
Subscribe to Oneindia Kannada

ಮಂಗಳೂರು, ನವೆಂಬರ್ 19: ದಕ್ಷಿಣ ಕನ್ನಡ ಸಂಸದ "ನಳಿನ್ ಕುಮಾರ್ ಕಟೀಲ್ ಗೆ ಸ್ವಲ್ಪವೂ ಬುದ್ಧಿಯಿಲ್ಲ, ಸಂಸ್ಕಾರವಿಲ್ಲ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಗಾಂಜಾ ಹಣದಿಂದ ಬದುಕುತ್ತಿದೆ: ನಳಿನ್

ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರುವ ವದಂತಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಮಧ್ವರಾಜ್ ತೇಜೋವಧೆ ಮಾಡೋಕೆ ಬಿಜೆಪಿಯವರು ಹೀಗೆ ಹೇಳುತ್ತಿದ್ದಾರೆ. ಇಮೇಜ್ ಹಾಳು ಮಾಡೋಕೆ ಇಂಥಹದ್ದನ್ನು ಹುಟ್ಟುಹಾಕುತ್ತಿದ್ದಾರೆ. ಪ್ರಮೋದ್ ಈ ಬಗ್ಗೆ ನೂರು ಬಾರಿ ಸ್ಪಷ್ಟೀಕರಣ ನೀಡಿದ್ದಾರೆ," ಎಂದು ವಿವರಣೆ ನೀಡಿದರು.

Pramod Madhwaraj does not join BJP, clarifies Siddaramaiah

ಈ ಸಂದರ್ಭ ಪಕ್ಕದಲ್ಲೇ ಇದ್ದ ಪ್ರಮೋದ್ ಮಧ್ವರಾಜ್ ರನ್ನು ಕರೆದ ಸಿಎಂ, ಏನಯ್ಯಾ ಬಿಜೆಪಿಗೆ ಹೋಗ್ತ್ಯಾ? ಎಂದು ಪ್ರಶ್ನಿಸಿದರು. ಸಿಎಂ ಜತೆ ಧ್ವನಿ ಗೂಡಿಸಿದ ಮಧ್ವರಾಜ್ ಇದೆಲ್ಲಾ ಬಿಜೆಪಿಯ ಸೃಷ್ಟಿಸುತ್ತಿರುವ ಸುಳ್ಳು, ಗೊಂದಲ ಎಂದು ಹೇಳಿದರು.

2018ರ ಚುನಾವಣೆ: ಜನವರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಘೋಷಣೆ

"ಸಂಸದ ನಳಿನ್ ಕುಮಾರ್ ಕಟೀಲ್ ಏನು ಮಾತಾಡುತ್ತಾರೆ ಅಂತ ಅವರಿಗೇ ಗೊತ್ತಿಲ್ಲ. ಅವರಿಗೆ ಸ್ವಲ್ಪವೂ ಬುದ್ಧಿಯಿಲ್ಲ; ಸಂಸ್ಕಾರವಿಲ್ಲ," ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

"ನನ್ನ ಜತೆ ಬೇಕಾದಷ್ಟು ಮಂದಿ ಬಿಜೆಪಿಯವರು ಸಂಪರ್ಕದಲ್ಲಿದ್ದಾರೆ. ಬಹಳಷ್ಟು ಜನ ಆರ್.ಎಸ್.ಎಸ್ ನವರೂ ಇದ್ದಾರೆ. ಅದನ್ನೆಲ್ಲಾ ಹೇಳಲು ಆಗುತ್ತದಾ?" ಎಂದು ಪ್ರಶ್ನಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Speaking at Mangaluru Airport, Chief Minister Siddaramaiah expressed outrage over the BJP. Siddaramaiah said that the false news that Pramod Madhwaraj is joining BJP is circulating to destroy the image of him

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ