ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಮಾನಾಥ ರೈಗೆ ಮುಂಬೈಯಿಂದ ಅನಾಮಿಕ ಕರೆ

|
Google Oneindia Kannada News

ಮಂಗಳೂರು, ಜೂನ್ 19 : ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಎಸ್ಪಿ ಭೂಷಣ್ ಬೊರಸೆ ಅವರಿಗೆ ಪ್ರಭಾಕರ ಭಟ್ ಬಗ್ಗೆ ಹೇಳಿತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು. ಇದೀಗ ತೀವ್ರ ಚರ್ಚಗೆ ಗ್ರಾಸವಾಗಿದೆ.

ಅದಕ್ಕೆ ಫುರಕ ಎಂಬಂತೆ ಸೋಮವಾರ ಈ ಬಗ್ಗೆ ಅಧಿವೇಶನದಲ್ಲಿ ಪ್ರತಿಪಕ್ಷಗಳು ರೈ ರಾಜೀನಾಮೆಗೆ ಒತ್ತಾಯಿಸಿದವು. ಅಷ್ಟೇ ಅಲ್ಲದೆ ಮುಂಬೈಯಿಂದ ರಮನಾಥ್ ರೈ ಅವರಿಗೆ ಅನಾಮಿಕ ಫೋನ್ ಕರೆಯೊಂದು ಬಂದಿದ್ದು, ಪ್ರಭಾಕರ ಭಟ್ ನಮ್ಮ ಶಕ್ತಿ. ಅವರ ವಿರುದ್ಧ ಹೇಳಿಕೆ ಕೊಡುವ ನಿಮಗೆ ಪಾಠ ಕಲಿಸಲು ಚುನಾವಣೆಯ ಸಮಯದಲ್ಲಿ ಬರುತ್ತೇನೆಂದು ಎಚ್ಚರಿಸಿದ್ದಾರೆ.

ಪ್ರಭಾಕರ ಭಟ್ ವಿರುದ್ಧ ಕೇಸ್ ಜಡಿದು ಬಂಧಿಸಿ, ರೈ ವಿಡಿಯೋ ವೈರಲ್ಪ್ರಭಾಕರ ಭಟ್ ವಿರುದ್ಧ ಕೇಸ್ ಜಡಿದು ಬಂಧಿಸಿ, ರೈ ವಿಡಿಯೋ ವೈರಲ್

Prabhakar Bhat video, anonymous Phone Call to Ramanath Rai from Mumbai

ನೇರವಾಗಿ ರಮಾನಾಥ ರೈ ಅವರ ನಂಬರ್ ಗೆ ಕರೆ ಮಾಡಿದಾತ ತನ್ನ ಹೆಸರು ಹೇಳಿಲ್ಲ. ಬದಲಿಗೆ ಅಣ್ಣಾ ನಾನು ಮುಂಬೈಯಿಂದ ಎಂದು ಮಾತು ಆರಂಭಿಸಿದ್ದು, ನಿಮ್ಮ ಕಾಂಗ್ರೆಸ್ ನಲ್ಲೇನಾದರೂ ಪ್ರಾಬ್ಲಮ್ ಇದೆಯಾ ಹಿಂದುಗಳನ್ನೇಕೆ ಬೈಯುತ್ತೀರಿ.

ಅವರೊಬ್ಬರಿದ್ದಾರೆ ಉಳ್ಳಾಲದವರು ಯು.ಟಿ.ಖದರ್ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಅಂತಾರೆ. ನೀವು ಪ್ರಭಾಕರ ಭಟ್ಟರನ್ನು ಜೈಲಿಗೆ ಕಳುಹಿಸುವ ಪ್ಲಾನಿಂಗ್ ಮಾಡುತ್ತಿದ್ದೀರಿ, ಪ್ರಭಾಕರ ಭಟ್ಟರ ವಿರುದ್ಧ ಮಾತನಾಡುವ ಮುನ್ನ ಎಚ್ಚರ, ಅವರು ನಮ್ಮ ಕೀರ್ತಿ, ಅವರು ನಮ್ಮ ಶಕ್ತಿ, ಅವರು ಭಯೋತ್ಪಾದಕ ಅಲ್ಲ ಎಂದು ಅನಾಮಿಕ ಕರೆಯಲ್ಲಿ ಹೇಳಿದ್ದಾನೆ.

ರೈ ಮೊದಲು ಶಿಸ್ತು ಕಲಿಯಲಿ: "ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ ರೈ ಅವರು ಮೊದಲು ಶಿಸ್ತು ಕಲಿಯುವ ಅಗತ್ಯ ಇದೆ. ಎಸ್ಪಿಯ ಜತೆ ಮಾತಾಡುವುದು ಹೇಗೆ ಎಂಬುದನ್ನು ಅವರು ಮೊದಲಿಗೆ ಕಲಿಯಬೇಕು.

ತನ್ನ ಪಕ್ಷದ ಮುಖಂಡರನ್ನು ಒಟ್ಟು ಸೇರಿಸಿ ಈ ರೀತಿ ಅವರ ಮಧ್ಯೆ ಎಸ್ ಪಿಯನ್ನು ಕೂರಿಸಿ ತಮ್ಮ ಕಥೆಯನ್ನು ಹೇಳುತ್ತಾ" ನಾನು ಹಾಗೆ ಮಾಡಿದ್ದೇನೆ, ಹೀಗೆ ಮಾಡಿದ್ದೇನೆ' ಎಂದು ಬಡಾಯಿ ಕೊಚ್ಚಿಕೊಳ್ಳುವುದನ್ನು ರೈ ನಿಲ್ಲಿಸ ಬೇಕು" ಎಂದು ಪ್ರಭಾಕರ ಭಟ್ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

English summary
Controversial remarks made by the minister Ramanth Rai, duly asking the SP in the district to arrest Kalladka Prabhakar Bhat as a result of this rai receives call from Mumbai saying don't interfere in kalladka Prabhakar Bhat matter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X