ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಳ್ಳು ಸುದ್ದಿ ಆರೋಪ: 'ಪೋಸ್ಟ್ ಕಾರ್ಡ್' ಮಹೇಶ್ ವಿಕ್ರಂ ಹೆಗ್ಡೆ ಬಂಧನ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು , ಮಾರ್ಚ್ 30: ಸುಳ್ಳು ಸುದ್ದಿ ಪ್ರಕಟಿಸಿದ ಆರೋಪದ ಮೇಲೆ ಪೋಸ್ಟ್ ಕಾರ್ಡ್ ಡಾಟ್ ಕಾಂ ಮಾಲೀಕ ವಿಕ್ರಂ ಹೆಗ್ಡೆಯವರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಅವರು ತಮ್ಮ ವೆಬ್ ಸೈಟ್ ನಲ್ಲಿ ಜೈನ ಮುನಿ ಮೇಲೆ ಹಲ್ಲೆ ಎಂಬ ಸುದ್ದಿ ಪ್ರಕಟಿಸಿದ್ದರು. ಆದರೆ ಜೈನ ಮುನಿ, ನಂಜನಗೂಡಿನಲ್ಲಿ ಅಪಘಾತದಿಂದ ಗಾಯಗೊಂಡಿದ್ದು ಅವರ ಮೇಲೆ ಯಾವುದೇ ರೀತಿಯ ಹಲ್ಲೆ ನಡೆದಿರಲಿಲ್ಲ ಎಂದು ಗಪ್ಪಾರ್ ಬೇಗ್ ಎಂಬುವವರು ಕ್ರೈಂ ಸೆಲ್ ಗೆ ನೀಡೀದ್ದ ದೂರಿನ ಮೇಲೆ ಹೆಗ್ಡೆಯನ್ನು ಪೊಲೀಸರು ಬಂಧಿಸಿದ್ದಾರೆ.

Post card owner Mahesh Vikram Hegde arrested for publishing fake news

ಪೋಸ್ಟ್ ಕಾರ್ಡ್ ಡಾಟ್ ಕಾಂನಲ್ಲಿ ಸದಾ ಹಿಂದು ಪರ ಬರಹಗಳನ್ನು ಪ್ರಕಟಿಸುತ್ತಿದ್ದ ಮಹೇಶ್ ಮೂಡುಬಿದಿರೆ ನಿವಾಸಿ. ಇವರು ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮೂಲ್ಕಿ - ಮೂಡುಬಿದ್ರೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯೂ ಆಗಿದ್ದರು ಎಂದು ಕೆಲವು ಮೂಲಗಳು ತಿಳಿಸಿವೆ.

English summary
Owner of Post Card website Mahesh Vikram Hegde is arrested by CCM police for publishing a fake news about a Jain saint in his website. CCB police arrested him, Some sources said he is expected BJP ticket from Mulki-Moodbidri constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X