ಬಜೆಟ್: ಮೋದಿ ದೇಶದ ಜನರನ್ನು ರಕ್ಷಿಸಬೇಕಾಗಿದೆ - ಜನಾರ್ಧನ ಪೂಜಾರಿ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಫೆಬ್ರವರಿ 2: 'ನೋಟು ಬ್ಯಾನ್ ನಿಂದ ದೇಶದ ಜನರು ಸಂಕಷ್ಟದಲ್ಲಿದ್ದಾರೆ. ಒಂದು ವೇಳೆ ಜಗತ್ತಿನಲ್ಲಿ ಮೂರನೇ ಮಹಾಯುದ್ದ ನಡೆದರೆ ಭಾರತಕ್ಕೆ ಉಳಿಗಾಲವಿಲ್ಲ ' ಎಂದು ಹಿರಿಯ ಕಾಂಗ್ರೆಸ್ ನಾಯಕ ಜನಾರ್ಧನ ಪೂಜಾರಿ ಆತಂಕ ವ್ಯಕ್ತಪಡಿಸಿದ್ದಾರೆ.

ಗುರುವಾರ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. "ದೇಶದ ಜನರನ್ನು ಪ್ರಧಾನಿ ಮೋದಿಯವರು ರಕ್ಷಿಸಬೇಕಾಗಿದೆ. ಇದು ನಿಮ್ಮ ಹೊಣೆಗಾರಿಕೆ," ಎಂದು ಪೂಜಾರಿ ಹೇಳಿದರು. 'ಬಜೆಟಿನಲ್ಲಿ ಪ್ರಧಾನಿ ಮೋದಿ ಜನರ ಆಶಯಗಳನ್ನು ಈಡೇರಿಸಿಲ್ಲ. ದೇಶದ ಜನರು ಇಟ್ಟುಕೊಂಡ ನಿರೀಕ್ಷೆಗಳೆಲ್ಲಾ ಹುಸಿಯಾಗಿದೆ' ಎಂದು ಮಾಜಿ ಕೇಂದ್ರ ಹಣಕಾಸು ಸಚಿವರೂ ಆದ ಜನಾರ್ಧನ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.[ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಶನಿ ಇದ್ದಂತೆ-ಜನಾರ್ದನ ಪೂಜಾರಿ]

Poojari sparks against Modi and Jaitley

"ಬಡವರ ಹಿತ ಕಾಪಾಡುವ ಬದಲು ಉದ್ಯಮಿ, ಶ್ರೀಮಂತರ ಓಲೈಕೆ ಮಾಡುವಲ್ಲಿ ಕೇಂದ್ರ ಸರ್ಕಾರ ನಿರತವಾಗಿದೆ. ವಿತ್ತ ಸಚಿವ ಜೇಟ್ಲಿ, ತಮ್ಮ ಹತ್ತಿರವಿದ್ದ ಹಳ್ಳಿಗಳಿಗೆ ಹೋಗಿ ಅಲ್ಲಿನ ರೈತರ ಬಳಿ ಹೋಗಿ ಮುಕ್ತವಾಗಿ ಮಾತನಾಡಬೇಕಿತ್ತು. ಆಗ ಅವರಿಗೆ ರೈತರ ಸಂಕಷ್ಟಗಳೆಲ್ಲಾ ಅರಿವಾಗುತ್ತಿತ್ತು," ಎಂದು ಪೂಜಾರಿ ಹೇಳಿದರು. "ಬಜೆಟಿನಲ್ಲಿ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಮೋದಿ ಯಾಕೆ ಹೇಳಲಿಲ್ಲ..?" ಎಂದು ಪೂಜಾರಿ ಇದೇ ಸಂದರ್ಭ ಪ್ರಶ್ನಿಸಿದರು.['ದಿನೇಶ್ ಅಮಿನ್ ಮಟ್ಟುವಿನಿಂದಲೇ ಸಿಎಂ ಸಿದ್ದರಾಮಯ್ಯ ಸಮಾಧಿ']

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Janardhan Poojary spark against Prime Minister Narendra Modi and Finance Minister Arun Jaitley on Budget 2017-18 in Mangaluru.
Please Wait while comments are loading...