ಬಾವಿ ನೀರೇನೋ ಆರಿತು, ಆದರೆ ಯಾಕೆ ಹಾಗಾಯಿತು?

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಕೈಕಂಬ, ಸೆಪ್ಟೆಂಬರ್ 1: ಪವಾಡ ಎಂದೇ ಖ್ಯಾತಿ ಪಡೆದಿದ್ದ ಪೊಳಲಿ ರಾಜೇಶ್ವರಿ ದೇವಳದ ಸಮೀಪದ ಮನೆಯ ಬಾವಿಯಲ್ಲಿ ಸೋಮವಾರ ಬಿಸಿ ನೀರಿನ ಬುಗ್ಗೆ ಕಾಣಿಸಿಕೊಂಡಿತ್ತು. ಭಾರೀ ವಿಸ್ಮಯ ಮೂಡಿಸಿದ ಈ ಬಾವಿಯ ನೀರು ಈಗ ತಣ್ಣಗಾಗಿದೆ.

ಮಾಧ್ಯಮಗಳಲ್ಲಿ, ಅಂತರ್ಜಾಲದಲ್ಲಿ ಮಿಂಚಿನಂತೆ ಈ ಸುದ್ದಿ ಹರಡಿತ್ತು. ಪವಾಡವೋ, ವಿಸ್ಮಯವೋ ಎಂಬಂತೆ ಹಲವರು ಕಾತರದಿಂದ ನೋಡಲು ಬಂದಿದ್ದರು. ಒಂದೇ ದಿನದಲ್ಲಿ ಬಿಸಿಯಾಗಿ ಕುತೂಹಲ ಕೆರಳಿಸಿದ ಬಾವಿಯ ನೀರು ಈಗ ತಣ್ಣಗಾಗಿದೆ.[ಕೋಟಿಯ ಆಸೆಗೆ ಲಕ್ಷ ಕಳೆದುಕೊಂಡ ಉಪ್ಪಿನಂಗಡಿ ವ್ಯಾಪಾರಿ]

Pond water cool now, but why it happened?

ಈ ಮಧ್ಯೆ ಮಂಗಳವಾರ ಬಾವಿಯ ನೀರು ಕುದಿಸಿ ಆರಿಸಿದ ನೀರಿನಂತೆ ಕಂಡುಬಂದಿದೆ. ಭಾರೀ ಚರ್ಚೆಗೆ ಗ್ರಾಸವಾದ ಈ ಬಾವಿಯ ನೀರು ಸ್ಥಳೀಯರ ಪ್ರಕಾರ ಪವಾಡವೆಂದೇ ಜನಜಂಗುಳಿ ನೆರೆದಿತ್ತು. ಬೇರೆ ಬೇರೆ ಊರುಗಳಿಂದ ಈ ಬಾವಿಯ ನೀರನ್ನು ಪರೀಕ್ಷಿಸಲು 5000ಕ್ಕಿಂತಲೂ ಹೆಚ್ಚು ಜನರು ಬಂದು, ಜಾತ್ರೆಯ ವಾತಾವರಣ ಸೃಷ್ಟಿಸಿದರು![ಬೆಂಗಳೂರಲ್ಲಿ ಉಳ್ಳಾಲದ ಯುವಕ ಸಂಶಯಾಸ್ಪದ ಸಾವು]

ವಿಸ್ಮಯಕ್ಕೆ ಕಾರಣವಾದ ಈ ಬಾವಿಯ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಇನ್ನೂ ಬಂದಿಲ್ಲ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ತಂಡ ಬಂದು, ಪರಿಶೀಲನೆ ನಡೆಸಿದೆ. ಭೂಗರ್ಭ ಎಂಜಿನಿಯರ್ ವಿಭಾಗಕ್ಕೂ ಪರೀಕ್ಷೆಗೆ ಕಳುಹಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hot water found in a pond near Polali Shri Rajarajeshwari temple, Mangaluru now become cool. But water sent to lab for examination to know the reason.
Please Wait while comments are loading...