ಬಶೀರ್‌ನನ್ನು ಕೊಲ್ಲಲು ಬಳಸಿದ ಮಾರಕಾಸ್ತ್ರಗಳಿಗಾಗಿ ಶೋಧ

Posted By:
Subscribe to Oneindia Kannada

ಮಂಗಳೂರು, ಜನವರಿ 10: ಕಳೆದ ಬುಧವಾರ ಹತ್ಯೆಯಾಗಿದ್ದ ಅಬ್ದುಲ್ ಬಶೀರ್ ಅವರ ಕೊಲೆ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ, ಬಶೀರ್ ನನ್ನು ಕೊಲೆ ಮಾಡಲು ಬಳಸಿದ್ದ ಆಯುಧಗಳಿಗಾಗಿ ಪೊಲೀಸರು ನೇತ್ರಾವತಿ ನದಿಯಲ್ಲಿ ಹುಡುಕುತಿದ್ದಾರೆ.

ಮಂಗಳೂರಲ್ಲಿ ಬಶೀರ್ ಹಲ್ಲೆ ಪ್ರಕರಣ: ನಾಲ್ವರ ಬಂಧನ

ಜನವರಿ 03ರಂದು ರಾತ್ರಿ ಬಶೀರ್ ಮೇಲೆ ಕೊಟ್ಟಾರ ಚೌಕಿ ಬಳಿ ಹಲ್ಲೆ ನಡೆಸಿದ ಬಳಿಕ ಮಾರಕಾಸ್ತ್ರಗಳನ್ನು ಸೇತುವೆ ಬಳಿ ನದಿಗೆ ಎಸೆದಿರುವುದಾಗಿ ಆರೋಪಿಗಳು ಹೇಳಿದ್ದಾರೆ. ಕೊಲೆ ಮಾಡಲು ಬಳಸಿದ್ದ ಮಾರಕಾಸ್ತ್ರಗಳ ಪತ್ತೆಗಾಗಿ ಪೊಲೀಸರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಸೇತುವೆ ಬಳಿ ನೇತ್ರಾವತಿ ನದಿಯಲ್ಲಿ ಶೋಧ ನಡೆಸುತ್ತಿದ್ದಾರೆ.

ಸಂಕ್ರಾಂತಿ ವಿಶೇಷ ಪುಟ

Police searching for weapons which used to kill Basheer

ಬಂಧಿತ ಆರೋಪಿಗಳಾದ ಪಿ.ಕೆ.ಶ್ರೀಜಿತ್, ಧನುಷ್ ಪೂಜಾರಿ, ಕಿಶನ್ ಪೂಜಾರಿ ‌ಮತ್ತು ಸಂದೇಶ್ ಕೋಟ್ಯಾ‌ನ್ ರನ್ನು ಸ್ಥಳಕ್ಕೆ ಕರೆದೊಯ್ದಿರುವ‌ ಸಿಸಿಆರ್ ಬಿ ಎಸಿಪಿ‌ ವೆಲೆಂಟೈನ್ ಡಿಸೋಜ ನೇತೃತ್ವದ ತನಿಖಾ ತಂಡ ಶೋಧ ನಡೆಸುತ್ತಿದೆ. ಮುಳುಗು‌ ತಜ್ಞರು ನದಿಯಲ್ಲಿ ತಲವಾರುಗಳಿಗಾಗಿ‌ ಹುಡುಕಾಡುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangaluru Police searching weapons in Netravathi river which were used to kill Basheer. Basheer murder accused said they throw weapons in the river.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ